ಪೋಸ್ಟ್‌ಗಳು

ಆಗಸ್ಟ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

89. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳಿಗೊಂದು ನುಡಿನಮನ

ಇಮೇಜ್
ಹಣ್ಣೆ – ಅಜ್ಜಂಪುರ   ಸಮೀಪದ ಪುಟ್ಟ ಗ್ರಾಮ. ಅಲ್ಲೊಂದು ವೀರಶೈವ ಪರಂಪರೆಯ ಮಠ ಹಾಗೂ ಹೊಯ್ಸಳ ನಿರ್ಮಿತ ಮಂದಿರಗಳಿವೆಯೆನ್ನುವುದೇ ಅದರ ಹೆಚ್ಚುಗಾರಿಕೆ. ನಾನು ಅಜ್ಜಂಪುರದಲ್ಲಿ ನನ್ನ ಬಾಲ್ಯವನ್ನು ಕಳೆದು 1968ರ ನಂತರ ವಿದ್ಯಾಭ್ಯಾಸ, ಉದ್ಯೋಗಗಳಿಗಾಗಿ ಊರನ್ನು ಬಿಡುವವರೆಗೂ ಹಣ್ಣೆ ಗ್ರಾಮದ ಬಗ್ಗೆ ನನಗೇನೂ ತಿಳಿದಿರಲಿಲ್ಲ ಮತ್ತು ಅಲ್ಲಿಗೆ ಹೋಗಿದ್ದೂ ಇಲ್ಲ. ಆಗೆಲ್ಲ ಆಗದ ಸಂಗತಿಗಳು ವಯಸ್ಸು 64ನ್ನು ತಲುಪುವಾಗ ಸಂಭವಿಸಿತೆನ್ನುವುದು ನಿಜವಾದರೂ, ಹಣ್ಣೆ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳನ್ನು ಭೇಟಿಯಾಗುವುದು ಸಾಧ್ಯವೇ ಆಗಲಿಲ್ಲವೆಂಬ ವಿಷಾದ ಇನ್ನೂ ಆವರಿಸಿದೆ.  ಅವರ ಬಗ್ಗೆ ಅಲ್ಪಸ್ವಲ್ಪ ಕೇಳಿ ತಿಳಿದಿದ್ದೆನಾದರೂ,ಅವರನ್ನು 2007ರಲ್ಲಿ ನಡೆದ, ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕದ ಸಂದರ್ಭದಲ್ಲಿ ನೋಡಿ, ಮಾತನಾಡಿಸಿದ್ದೆ. ಅವರೊಬ್ಬ ಪರಿಸರಪ್ರೇಮಿ, ಸಾಹಿತ್ಯದಲ್ಲಿ ಅಭಿರುಚಿಯಿದ್ದವರು ಹಾಗೂ ಮತಧರ್ಮಕ್ಕೆ ಸಂಬಂಧಿಸಿದಂತೆ ಜಿಗುಟು ನಿಲುವು ಹೊಂದಿದವರಲ್ಲ ಎಂಬ ಕಾರಣಗಳಿಗೆ ಅವರ ಬಗ್ಗೆ ಅಭಿಮಾನ. ಕುಂಭಾಭಿಷೇಕದ ಸಂದರ್ಭದಲ್ಲಿ 'ವರ್ಣ ಮಾತ್ರ ಕಲಿಸಿದಾತಂ ಗುರು' ಎಂದು ಅವರು ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯನವರನ್ನು ನೆನಪಿಸಿಕೊಂಡರು. 'ಅವರ ಮಗ ಬಂದಿದ್ದಾರೆಂದು ಕೇಳಿದೆ' ಎಂದು ನನ್ನನ್ನು ಕುರಿತು ಹೇಳಿ ವೇದಿಕೆಗೆ ಆಹ್ವಾನಿಸಿದ್ದರು.  ಅವರ ಸ್ನೇ