ಪೋಸ್ಟ್‌ಗಳು

ಅಕ್ಟೋಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

ಇಮೇಜ್
ಇವರು ನಮ್ಮ ಹಿರಿಯರು ನಾಗರಾಜ್ ಎಂ.ಎನ್. ಅಜ್ಜಂಪುರದಲ್ಲಿ 60 70 ದಶಕದಲ್ಲಿದ್ದ ಪ್ರಾಥಮಿಕ ಶಾಲಾ ಅಧ್ಯಾಪಕರು. ಇವರಿಂದ ಕಲಿತ ಅನೇಕರು ಇಂದು ಉನ್ನತ ಸ್ಥಿತಿಯಲ್ಲಿದ್ದಾರೆ. ಅವರು ತಮ್ಮ ವೃತ್ತಿಯನ್ನು ಪ್ರೀತಿಸಿದ ಪರಿಣಾಮವೇ ಅದಕ್ಕೆ ಕಾರಣ. ಸ್ಪುರದ್ರೂಪಿಯಾಗಿದ್ದ ನಾಗರಾಜ ಮಾಸ್ತರರ ಕನ್ನಡ ಭಾಷೆ ತುಂಬಾ ಸೊಗಸಾಗಿರುತ್ತಿತ್ತು. ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯ  ಹಾಗೂ ನಾಗರಾಜ್ ಮಾಸ್ತರರು ಆಪ್ತ ಸ್ನೇಹಿತರು. ಅವರಿಬ್ಬರ ಅಭಿರುಚಿ ಮತ್ತು ವೈಚಾರಿಕತೆಗಳು ಸಮಾನವಾಗಿದ್ದರಿಂದ ಅವರ ಸ್ನೇಹ ಗಾಢವಾಗಿತ್ತು. ಒಮ್ಮೆ ಶಿಕ್ಷಣಾಧಿಕಾರಿಯೋರ್ವರು ಶಾಲೆಗೆ ಭೇಟಿ ನೀಡಿದಾಗ, ಇವರಿಬ್ಬರು ಸಡಗರದಿಂದ ಔತಣಕೂಟವನ್ನು ತಮ್ಮದೇ ವೆಚ್ಚದಲ್ಲಿ ಏರ್ಪಡಿಸಿದ್ದರು. ಅದು ಯಾವ ಪ್ರತಿಫಲವನ್ನು ಅಪೇಕ್ಷಿಸಿ ಅಲ್ಲ, ಬದಲಾಗಿ ಆ ಅಧಿಕಾರಿಯ ನಿಸ್ಪೃಹತೆಯನ್ನು ಮೆಚ್ಚಿ ತಮ್ಮ ಗೌರವವನ್ನು ಹಾಗೆ ಸಲ್ಲಿಸಿದ್ದರು. ಒಳ್ಳೆಯವರನ್ನು ಕೇವಲ ಮೆಚ್ಚಿದರೆ ಸಾಲದು, ತಮ್ಮ ಭಾವನೆಯನ್ನು ಅಭಿವ್ಯಕ್ತಗೊಳಿಸುವುದೂ ಮುಖ್ಯ ಎಂಬ ಪಾಠವನ್ನು ಕಾರ್ಯತಃ ಮಾಡಿ ತೋರಿದ್ದರು. ಇತ್ತೀಚೆಗೆ ಎಂ.ಎನ್. ನಾಗರಾಜರ ಮಗ ಶ್ರೀ ನರಸಿಂಹಸ್ವಾಮಿಯನ್ನು ದಾವಣಗೆರೆಯಲ್ಲಿ ಭೇಟಿ ಮಾಡಿದೆ. ಆಗ ಕಂಡ ನಾಗರಾಜ ಮಾಸ್ತರರ ಚಿತ್ರ ಸಹಿತ ಬರಹಕ್ಕಾಗಿ ಕೇಳಿದ್ದೆ. ಅದರಂತೆ ಅವರ ಬಗ್ಗೆ ನರಸಿಂಹಸ್ವಾಮಿ ನೀಡಿದ ವಿವರಗಳು ಕೆಳಗಿನಂತಿವೆ. ಶಂಕರ ಅಜ್ಜಂಪುರ ಸಂಪಾದಕ "ಅಂತರಜಾಲದಲ್ಲಿ ಅಜ್ಜ