ಪೋಸ್ಟ್‌ಗಳು

ನವೆಂಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

92. ನನ್ನ ನೆನಪಿನ ಅಜ್ಜಂಪುರ

ಇಮೇಜ್
ಎಲ್ಲ ಓದುಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ಈ ಬ್ಲಾಗ್ ತನ್ನ ಏಳನೆಯ ವರ್ಷವನ್ನು ಪೂರೈಸಿದೆ. ಬ್ಲಾಗ್ ಗೆಂದು ಲೇಖನಗಳನ್ನು ಸಂಗ್ರಹಿಸುವಾಗ ನಿರಂತರ ಶ್ರಮಪಟ್ಟದ್ದಿದೆ, ಬರೆಯುವವರ ಬೆನ್ನು ಬಿದ್ದು ಬರೆಸಿ ಪ್ರಕಟಿಸಿರುವುದಿದೆ. ಇಲ್ಲೆಲ್ಲ ಕೆಲಸ ಮಾಡಿರುವುದು ಲೇಖಕರ, ಓದುಗರ ಪ್ರೀತಿಯೇ ವಿನಾ ನನ್ನಿಂದ ಹಿಂಸೆ ತಾಳಲಾಗದ್ದು ಎಂದು ಯಾರೂ ಭಾವಿಸಲಿಲ್ಲ. ಊರಿನ ಇನ್ನೂ ಹಲವಾರು ಸಂಗತಿಗಳನ್ನು, ಘಟನೆಗಳನ್ನು, ಐತಿಹಾಸಿಕ ವಿವರಗಳನ್ನು, ವ್ಯಕ್ತಿ ಚಿತ್ರಗಳನ್ನು ಪ್ರಕಟಿಸಬೇಕಾದದ್ದು ತುಂಬ ಇದೆ. ಸ್ಥಳೀಯ ಮಾಹಿತಿಗಳನ್ನು ಒಂದುಗೂಡಿಸುವುದು ಕೂಡ ಕನ್ನಡಕ್ಕೆ ಸಂಬಂಧಿಸಿದ ಕೆಲಸವೇ ಸರಿ. ಇದೆಲ್ಲವನ್ನೂ ಮಾಡಲು ಸ್ಥಳೀಕರ ಪ್ರೋತ್ಸಾಹ ಬೇಕಾಗುತ್ತದೆ. ಅವರು ಮಾಹಿತಿಗಳನ್ನು ಕಳಿಸುವಂತಾದಲ್ಲಿ ಪ್ರಕಟಣೆಯ ಕಾರ್ಯ ಸುಲಭವಾದೀತು. ಈ ಹಿನ್ನೆಲೆಯಲ್ಲಿ ಅಜ್ಜಂಪುರದ ಗಣ್ಯರಲ್ಲಿ ಓರ್ವರಾಗಿದ್ದ ಶ್ರೀ ನಾಗರಾಜ ಶ್ರೇಷ್ಠಿಯವರ ಮೊಮ್ಮಗಳು ಶ್ರೀಮತಿ ಸೌಜನ್ಯಾ ದತ್ತರಾಜರನ್ನು ಲೇಖನ ಬರೆದುಕೊಡಲು ಕೇಳಿದೆ. ಅಜ್ಜಂಪುರಕ್ಕೆ ಸಂಬಂಧಿಸಿದಂತೆ ತನ್ನ ಅನುಭವ ತೀರ ಸೀಮಿತವೆಂದು ಹೇಳಿಯೇ, ಕೆಳಗಿನ ಲೇಖನವನ್ನು ನಿಗದಿತ ದಿನದೊಳಗೆ ಕಳಿಸಿಕೊಟ್ಟರು.  ಸಮೂಹ ಮಾಧ್ಯಮ ಹಾಗೂ ಪತ್ರಿಕೋದ್ಯಮದಲ್ಲಿ ಪದವೀಧರೆಯಾಗಿರುವ ಇವರು ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸಮಾ