ಪೋಸ್ಟ್‌ಗಳು

ಮೇ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

98. ಮಠದ ಮನೆ

ಇಮೇಜ್
ಆತ್ಮೀಯ ಓದುಗರೇ,  ಅಜ್ಜಂಪುರಕ್ಕೆ ಭೇಟಿ ನೀಡಿದಾಗಲೆಲ್ಲ ಒಂದಲ್ಲ ಒಂದು ಮಾಹಿತಿ ದೊರೆಯುತ್ತಿರುತ್ತದೆ. ಅದಕ್ಕೆ ಅಲ್ಲಿನ ಗೆಳೆಯರೂ ನೆರವಾಗುತ್ತಾರೆ. ಇಲ್ಲಿನ ಮಠದ ಮನೆಗೊಂದು ಚಿಕ್ಕ ಇತಿಹಾಸವಿದೆ. ಅಲ್ಲಿಗೆ ಕರೆದೊಯ್ದು, ಮಾಹಿತಿಗಳನ್ನು ವಿವರಿಸಿದವರು ಸಮಾನ ಮನಸ್ಕ ಮಿತ್ರ ಅಪ್ಪಾಜಿ. ನಮ್ಮೂರಿಗೂ ಒಂದು ಶಾಸನವಿದೆ ಎಂದು ತಿಳಿದದ್ದೇ ಈಗ. ಅದನ್ನು ಓದಲು ಪ್ರಯತ್ನಿಸೋಣವೆಂದರೆ, ಅದರಲ್ಲಿನ ಅಕ್ಷರಗಳೆಲ್ಲ ನಷ್ಟವಾಗಿದೆ. ಗ್ರಾಮದೇವತೆ ಕಿರಾಳಮ್ಮ ದೇವಾಲಯದಲ್ಲಿರುವ ಬರಹಕ್ಕೂ ತೀರ ಹಿಂದಿನದು ಎಂದು ಹೇಳಬಹುದಾದ ಇದು ಹೊಯ್ಸಳೋತ್ತರ ಶಾಸನವಿದ್ದೀತು ಎಂದು ಭಾವಿಸಬಹುದು.  ಶತಕವನ್ನು ಸಮೀಪಿಸುತ್ತಿರುವ ಈ ಬರಹದ ಮಾಲಿಕೆಗೆ ಇನ್ನೆರಡು ಸಂಚಿಕೆಗಳ ನಂತರ ವಿರಾಮ ಘೋಷಿಸುವ ಸಮಯ ಬಂದಿದೆಯೆಂದು ಭಾವಿಸುವೆ. ಹಾಗೆಂದು ಇದು ಸಂಪೂರ್ಣ ನಿಂತುಹೋದೀತೆಂದಲ್ಲ. ಮಾಹಿತಿಗಳು ದೊರೆತಂತೆ, ಲೇಖಕರು ಆಸಕ್ತಿ ವಹಿಸಿ ಲೇಖನಗಳನ್ನು ಕಳಿಸಿದಾಗಲೆಲ್ಲ ಪ್ರಕಟವಾದೀತು.  ನಿಮ್ಮೆಲ್ಲರ ಸಹಕಾರಕ್ಕೆ ವಂದನೆಗಳು. - ಶಂಕರ ಅಜ್ಜಂಪುರ ಮಠದ ಮನೆಯ ಆವರಣದಲ್ಲಿರುವ ನಂದಿಯ ವಿಗ್ರಹ ಪೆ.23ರಂದು ಅಜ್ಜಂಪುರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಲನ ನಡೆಯಿತು. ಈ ಸಂದರ್ಭದಲ್ಲಿ ಗೋಷ್ಠಿಯೊಂದರಲ್ಲಿ ಭಾಗವಹಿಸಲು ತೆರಳಿದ್ದೆ. ಮಿತ್ರ ಅಪ್ಪಾಜಿ, ಊರಿಗೆ ಹೋದಾಗಲೆಲ್ಲ ಯಾವುದಾದರೊಂದು ವಿಶೇಷದ ಬಗ್ಗೆ ನೆನಪಿಸಿ, ಆ ಸ್ಥಳಕ್ಕೆ ಕರೆದೊಯ್ದು, ಅಲ್ಲಿನ ಮಾಹಿತಿಗಳನ