ಪೋಸ್ಟ್‌ಗಳು

ಆಗಸ್ಟ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

101. ಅಜ್ಜಂಪುರದಲ್ಲಿ ಋಗ್ವೇದ ಪಾರಾಯಣ

ಇಮೇಜ್
ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಲಾಗದು ಎನ್ನುವುದೊಂದು ವಾಡಿಕೆ. ಇದಕ್ಕೆ ಹಲವು ಕಾರಣಗಳನ್ನು ನೀಡುವರು. ಕೃಷಿ ಚಟುವಟಿಕೆಗಳಿಲ್ಲದ ವಿರಾಮದ ಕಾ ಲವಿದು. ಅಂತೆಯೇ ವೇದಾಧ್ಯಯನಕ್ಕೂ ಬಿಡುವು ಎನ್ನುವುದು ಮತ್ತೊಂದು ಕಾರಣ. ಇದೇ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಿಂದ ಲಕ್ಕವಳ್ಳಿಯ ಸಮೀಪದ ಸೋಮಪುರದಲ್ಲಿರುವ ದತ್ತಾಶ್ರಮದ ಆಯೋಜಕರೂ, ವೇದವಿದರೂ ಆದ ಶ್ರೀ ಸೋ.ತಿ. ನಾಗರಾಜರು ಈ ಅವಧಿಯಲ್ಲಿ ವೇದಪಾರಾಯಣದ ಕಾರ್ಯಕ್ರಮವನ್ನು ಹಮ್ಮಿಕೊಂಡು ನಡೆಸುತ್ತಿದ್ದಾರೆ. ಶ್ರೀ ಸೋ.ತಿ. ನಾಗರಾಜರು ಪ್ರಸ್ತುತ ಸೋಮಪುರದಲ್ಲಿ ನೆಲೆಸಿ, ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಗ್ರಾಮಗಳು, ಪಟ್ಟಣಗಳಲ್ಲಿ ವೇದಪಾರಾಯಣದ ವ್ಯವಸ್ಥೆ ಮಾಡುತ್ತಿರುವರು. ಅವರು ನಡೆಸುತ್ತಿರುವ ದತ್ತ ಆಶ್ರಮದ ಪ್ರಾಯೋಜಕತ್ವದೊಡನೆ, ಊರಿನ ಸಂಘ-ಸಂಸ್ಥೆಗಳು ಪಾರಾಯಣಕ್ಕೆ ಬೇಕಿರುವ ಅಗತ್ಯ ವ್ಯವಸ್ಥೆ, ಎಂದರೆ ಪಾರಾಯಣಕರ್ತರಿಗೆ ಊಟ-ವಸತಿಗಳನ್ನು, ದೇವಾಲಯ ಅಥವಾ ಮನೆಗಳಲ್ಲಿ ಮಾಡಿಕೊಡುವಂತಿದ್ದರೆ, ವೇದ ಪಾರಾಯಣ ಸಪ್ತಾಹವನ್ನು ನಡೆಸಿಕೊಡುವರು. ಸಪ್ತಾಹದ ಸಮಾರೋಪದ ದಿನ, ಜನರನ್ನು ಉದ್ದೇಶಿಸಿ ಈ ಕಾರ್ಯಕ್ರಮದ ಬಗ್ಗೆ ಮಾಹಿತಿಗಳನ್ನು ನೀಡುವರು. ಕಳೆದ ವರ್ಷ ಅಜ್ಜಂಪುರದ ಸಮೀಪದ ಗ್ರಾಮ ಬುಕ್ಕಾಂಬುಧಿಯಲ್ಲಿ ನಡೆದಿತ್ತು. ಈ ಬಾರಿ ಅಜ್ಜಂಪುರದ ಬ್ರಾಹ್ಮಣ ಸಂಘದ ಸಹಯೋಗದಲ್ಲಿ ದಿನಾಂಕ ಜುಲೈ 9ರಿಂದ ಜುಲೈ 14ರವರೆಗೆ ಅಜ್ಜಂಪುರದ ಶ್ರೀ ಕೋಟೆ ಆಂಜನೇಯ ದೇವಾಲಯದಲ