ಪೋಸ್ಟ್‌ಗಳು

2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

21. ಕತ್ತೆ ಕವಾಡ

ಇಮೇಜ್
ಸೌದೆ ಸಂಕಟಕ್ಕೊಂದು ಪರಿಹಾರ !  ಈಗ ಎಂಥ ಕುಗ್ರಾಮದಲ್ಲೂ ಅಡಿಗೆ ಅನಿಲ ದೊರೆಯುತ್ತಿದೆ, ವಿದ್ಯುತ್ ಶಕ್ತಿಯಿದೆ. ಈ ಹಂತ ತಲುಪುವ ವೇಳೆಗೆ ಉರುವಲಿಗೆಂದು ನಮ್ಮ ಹಿರಿಯರು ಪಡುತ್ತಿದ್ದ ಕಷ್ಟ-ತೊಂದರೆಗಳನ್ನು ಗಮನಿಸಿದರೆ ನಾವಿಂದು ಸುಖವಾಗಿ ಇದ್ದೇವೆ ಎನ್ನಬೇಕು. ನಾಲ್ಕಾರು ದಶಕಗಳ ಹಿಂದೆ ಇಂಧನಕ್ಕೆಂದು ಜನರು ಸೌದೆಯನ್ನು ಬಳಸುವುದು ಅನಿವಾರ್ಯವಾಗಿತ್ತು. ಹಾಗೆ ಅಂದು ಕಾಡನ್ನು ಕಡಿದು ನೆಲಸಮ ಮಾಡಿದ ಪರಿಣಾಮವೇ ಇಂದು ಪರ್ಯಾಯ ವ್ಯವಸ್ಥೆಗಳು ಬರಲು ಕಾರಣವಾಯಿತು. ಬದಲಾವಣೆ ಸ್ವಾಭಾವಿಕ. ಅದನ್ನು ತಡೆಯಲು ಯಾರಿಂದಲೂ ಆಗದು ಎನ್ನುವುದು ಬೇರೆ ಮಾತು.  ಅಜ್ಜಂಪುರದಲ್ಲಿ ೬೦ರ ದಶಕದ ಸುಮಾರಿಗೇ ಸೌದೆಯ ಅಭಾವ ಕಾಣಿಸಿಕೊಂಡಿತ್ತು. ಸೌದೆಯ ಸಗಟು ವ್ಯಾಪಾರ ಮಾಡಲಾಗದ ಬಡಜನ, ರಸ್ತೆಗಳ ಬದಿಗಳಲ್ಲಿ ಇರುತ್ತಿದ್ದ ಸಾಲುಮರಗಳಿಂದ ಉರುವಲನ್ನು ಹೊಂದಿಸಿಕೊಳ್ಳುತ್ತಿದ್ದರು. ಅಜ್ಜಂಪುರದ ಅಮೃತಮಹಲ್ ಫಾರಂನ ರಸ್ತೆಯಲ್ಲಿ ಹುಣಸೆ, ಆಲ, ಅತ್ತಿಯ ಮರಗಳನ್ನು ಉದ್ದಕ್ಕೂ ನೆಟ್ಟು ಬೆಳೆಸಲಾಗಿತ್ತು. ೫೦-೬೦ರ ವಯಸ್ಸಿನ ಆ ಹೆಮ್ಮರಗಳ ಮುರಿದ ರೆಂಬೆ-ಕೊಂಬೆಗಳು ಬಡಜನರ ಅಗತ್ಯಗಳನ್ನು ಪೂರೈಸುತ್ತಿದ್ದವು. ಕಾಲ ಬದಲಾದಂತೆ ಜನಸಂಖ್ಯೆ ಹೆಚ್ಚಾದಂತೆ ಅದೇ ಮರಗಳ ಕಾಂಡಗಳನ್ನು ನಿಧಾನವಾಗಿ ಕೆತ್ತಿ ತೆಗೆಯುವ ಕಾಯಕ ಆರಂಭವಾಯಿತು. ಸ್ವಾಭಾವಿಕವಾಗಿ ಒಣಗಿಹೋದ ಮರಗಳು ಮರೆಯಾಗಿ ಹೋದವು.  ಅಜ್ಜಂಪುರ ಭೌಗೋಳಿಕವಾಗಿ ಬಯಲು ಸೀಮೆಗೆ ಸೇರಿದ ಪ್ರದೇಶ. ಇಂಧನದ ಸಮಸ್ಯೆ ಅಲ್ಲ

20. ನಮ್ಮ ಅಧ್ಯಾಪಕರು

ಇಮೇಜ್
ಗುರು ಸ್ಮರಣೆ  ಆತ್ಮೀಯ ಓದುಗರೇ, ಎಲ್ಲರಿಗೂ ಐವತ್ತೇಳನೆಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಅಜ್ಜಂಪುರದ ಪ್ರೌಢಶಾಲೆಯ ಬಗ್ಗೆ ಕಳೆದ ತಿಂಗಳು ಒಂದು ಲೇಖನ ಪ್ರಕಟವಾಗಿದೆ. ಇದೇ ಸರಣಿಯಲ್ಲಿ ಮುಂದುವರೆಯುತ್ತ, ೧೯೬೭-೬೯ ಸುಮಾರಿನಲ್ಲಿ ಆ ಶಾಲೆಯಲ್ಲಿದ್ದ ಕೆಲ ಅಧ್ಯಾಪಕರು ಮತ್ತು ಅವರ ವಿಶೇಷತೆಗಳ ಬಗ್ಗೆ ಒಂದು ಚಿಕ್ಕ ನೆನಪು ಇಲ್ಲಿದೆ.  ಅಜ್ಜಂಪುರದ ಪ್ರೌಢಶಾಲೆಗೆ ಆಗಿದ್ದ ಹೆಸರು ಶೆಟ್ರ ಸಿದ್ಧಪ್ಪ ತಾಲೂಕ್ ಬೋರ್ಡ್ ಹೈಸ್ಕೂಲ್. ಇದನ್ನು ಸಂಕ್ಷಿಪ್ತವಾಗಿ ಎಸ್.ಎಸ್.ಟಿ.ಬಿ. ಹೈಸ್ಕೂಲ್ ಎಂದು ಕರೆಯಲಾಗುತ್ತಿತ್ತು. ಈ ಶಾಲೆಗೆ ಆಧಾರವಾಗಿ ನಿಂತ ಶೆಟ್ರ ಸಿದ್ಧಪ್ಪನವರ ಬಗೆಗೂ ಈ ಹಿಂದೆ ಈ ಬ್ಲಾಗ್‌ನಲ್ಲಿ ಲೇಖನವೊಂದು ಪ್ರಕಟವಾಗಿದೆ. ಅಂತೆಯೇ ಶಾಲೆಯ ತಮ್ಮ ಸೇವಾವಧಿಯನ್ನು ಇಲ್ಲಿಯೇ ಪೂರ್ಣಗೊಳಿಸಿ ನಿವೃತ್ತರಾದ ಮುಖ್ಯೋಪಾಧ್ಯಾಯರಾಗಿದ್ದ ಎನ್. ಎಸ್. ಅನಂತರಾಯರ ಕುರಿತಾದ ಲೇಖನವೂ ಪ್ರಕಟಗೊಂಡಿದೆ. ಹಿಂದಿನ ಸಂಚಿಕೆಗಳನ್ನು ಗಮನಿಸಿರದ ಓದುಗರಿಗೆಂದು ಈ ಮಾಹಿತಿ. ಈ ಕಾಲಘಟ್ಟದಲ್ಲಿ ಅನಂತರಾಯರ ಸಹೋಪಾಧ್ಯಾಯ ರಾಗಿದ್ದವರ ಕುರಿತಾದ ನೆನಪುಗಳು ಇಲ್ಲಿದೆ.  ಕನ್ನಡ ಪಂಡಿತರೆಂಬ ಪ್ರತ್ಯೇಕ ಭಾಷಾ ಅಧ್ಯಾಪಕರು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾಯವಾಗಿದ್ದಾರೆ . ಆಗ ಕನ್ನಡದ ಬೋಧನೆಗೆಂದು ಇದ್ದವರು ಎಂ.ಬಿ. ಪಾರ್ಥಸಾರಥಿ ಅಯ್ಯಂಗಾರ್ಯರು. ನಾವು ಈ ಶಾಲೆಯಲ್ಲಿ ಓದುತ್ತಿದ್ದಾಗ, ಬಿ.ಎಂ.ಶ್ರೀ. ಪ್ರೊ.ಹಿರಿಯಣ್ಣ, ಪ್ರೊ. ಎ.ಎನ್. ಮ

19. ಕಲಾ ಸೇವಾ ಸಂಘ, ಅಜ್ಜಂಪುರ

ಇಮೇಜ್
ಕಲಾಮಾತೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತಾಳೆ. ಆದರೆ ಕೆಲವರನ್ನು ಮಾತ್ರ ಎತ್ತಿಕೊಳ್ಳುತ್ತಾಳೆ.   - ಅ.ನ.ಕೃ. ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಅಂದು ಅನಕೃ ಹೇಳಿದ್ದ ಈ ಮಾತು ಒಂದು ಊರಿನ ಮಟ್ಟಿಗೆ ನಿಜವಾಗಿದ್ದರ ಉದಾಹರಣೆಯು ಅಜ್ಜಂಪುರಕ್ಕೆ ಸರಿಯಾಗಿ ಹೊಂದಿ ಕೊಳ್ಳುತ್ತದೆ. ಏಕೆಂದರೆ ೧೯೩೫ರ ಹಿಂದಕ್ಕೆ ನಮ್ಮೂರಿನಲ್ಲಿ ರಂಗಚಟುವಟಿಕೆಗಳು ನಡೆದ ದಾಖಲೆಗಳಿಲ್ಲ. ಹೇಳಿಕೊಳ್ಳುವಂತಹ ಕಲಾಭಿರುಚಿಯ ವಾತಾವರಣ ವಾಗಲೀ, ಅದಕ್ಕೆ ಪೂರಕವಾದ ಅವಕಾಶಗಳಾಗಲೀ ಇಲ್ಲದಿದ್ದ ಕಾಲವದು. ಆಗ ಊರು ಈಗಿರುವುದಕ್ಕಿಂತ ಚಿಕ್ಕದಾಗಿದ್ದುದೂ ಸ್ವಾಭಾವಿಕ. ಇಂಥ ಹಿನ್ನೆಲೆಯಲ್ಲಿ ಅಜ್ಜಂಪುರದ ಕಲಾ ಸೇವಾ ಸಂಘದ ಆರಂಭದ ದಿನಗಳಿಂದ ಹಿಡಿದು ಇಂದಿನವರೆಗೆ ಪ್ರತ್ಯಕ್ಷಸಾಕ್ಷಿಯಾಗಿದ್ದು, ಅದರ ಉನ್ನತಿಗೆ ದುಡಿದ ಅಜ್ಜಂಪುರದ ಹಿರಿಯ ವರ್ತಕ, ಕಲಾಭಿಮಾನಿ ಶ್ರೀ ಸತ್ಯನಾರಾಯಣ ಶೆಟ್ಟರ ನಿರೂಪಣೆ ಇಲ್ಲಿದೆ. ೯೧ ವರ್ಷಗಳ ಹಿರಿಯರಾದ ಅವರ ನೆನಪಿನ ಬುತ್ತಿಯಲ್ಲಿ ಊರಿಗೆ ಸಂಬಂಧಿಸಿದ ಹಲವಾರು ಸಂಗತಿಗಳಿವೆ. ತಾವು ಕಂಡ ಜನರು, ಭಾಗವಹಿಸಿದ ಕಾರ್ಯಕ್ರಮಗಳು, ಅವರ ನೆನಪಿನಲ್ಲಿ ಸಂಗ್ರಹಿತವಾಗಿವೆ. ಉತ್ತಮ ನಿರೂಪಕರಾಗಿರುವ ಅವರ ಸಂದರ್ಶನದ ಭಾಗವನ್ನು ಅವರದೇ ನುಡಿಯಲ್ಲಿ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಅವರ ಧ್ವನಿಯನ್ನು ಮುದ್ರಣಮಾಡಿ ಒದಗಿಸಿದ ಗೆಳೆಯ ರಮಾನಂದರಿಗೆ  ಕೃತಜ್ಞತೆಗಳು.    ಚಿತ್ರ-ಲೇಖನ :   ಶಂಕರ ಅಜ್ಜಂಪುರ  ಹೀಗೊಂದು ಸವಾಲು ೧೯೩೫ರ ಸುಮ

18. ನಮ್ಮ ಶಾಲೆ

ಇಮೇಜ್
ಅಜ್ಜಂಪುರದ  ಆರ್.ಇ.ಎ. ಪ್ರೌಢಶಾಲೆಯಿಂದ ಶೆಟ್ರು ಸಿದ್ದಪ್ಪನವರ  ಸರಕಾರೀ ಪದವೀ ಪೂರ್ವಕಾಲೇಜಿನವರೆಗೆ -ಅಪೂರ್ವ ಈ ಲೇಖನವನ್ನು ಮಿತ್ರ ಜಿ.ಬಿ. ಅಪ್ಪಾಜಿ (ಅಪೂರ್ವ)ಯವರು ಅಜ್ಜಂಪುರದ ಶೆಟ್ಟರ ಸಿದ್ಧಪ್ಪ ಪ್ರೌಢಶಾಲೆಯ  ಸ್ವರ್ಣಮಹೋತ್ಸವದ ಸಂದರ್ಭದಲ್ಲಿ ರಚಿಸಿದರು. ಇದನ್ನು ಬರೆಯುವ ಕಾಲಕ್ಕೆ ಅವರು ಅನೇಕರಿಂದ ಮಾಹಿತಿಗಳನ್ನು ಪಡೆದು,  ಬಹಳ ಶ್ರಮವಹಿಸಿ ಸಿದ್ಧಪಡಿಸಿದರು. ಕಾರಣಾಂತರಗಳಿಂದ ಆ ಉತ್ಸವ ನಡೆಯಲಿಲ್ಲ. ಅದು ಇಲ್ಲಿ ಪ್ರಕಟವಾಗುತ್ತಿದೆ.  ಈ ಪ್ರೌಢಶಾಲೆಗೆ ಮಹತ್ವದ ದಾನಿಗಳಾಗಿದ್ದ ಶ್ರೀ ಶೆಟ್ಟರ ಸಿದ್ಧಪ್ಪನವರ ಬಗ್ಗೆ ಈಗಾಗಲೇ ಒಂದು ಲೇಖನ  ಪ್ರಕಟಗೊಂಡಿರುವುದನ್ನು ತಾವೆಲ್ಲರೂ ಗಮನಿಸಿರಬಹುದು. ಪ್ರಸ್ತುತ ಲೇಖನದಲ್ಲಿ ಶಾಲೆಯ ಇತಿಹಾಸವನ್ನು ವಿಸ್ತಾರವಾಗಿ  ವಿವರಿಸಲಾಗಿದೆ. ಈ ಶಾಲೆಯ ವಿದ್ಯಾರ್ಥಿಗಳು ಈಗ ದೇಶ ವಿದೇಶಗಳಲ್ಲಿ ಹರಡಿದ್ದಾರೆ. ಅವರು ತಮ್ಮ ಶಾಲೆಯ  ಇತಿಹಾಸವನ್ನು ಮನಗಾಣಲಿ, ಹಳೆಯ ನೆನಪುಗಳು ಮರುಕಳಿಸಲಿ ಎಂಬ ಸದಾಶಯದಿಂದ ಬರೆದಿರುವ ಈ ಲೇಖನಕ್ಕೆ  ನಿಮ್ಮೆಲ್ಲರಿಂದ ಪ್ರತಿಕ್ರಿಯೆಗಳು ಬರುವಂತಾಗಲಿ. ಅಂತೆಯೇ ಎಸ್.ಎಸ್.ಟಿ.ಬಿ. ಹೈಸ್ಕೂಲ್ ಎಂದು ಜನಪ್ರಿಯವಾಗಿದ್ದ  ಅದೀಗ ಪ್ರಥಮ ದರ್ಜೆಯ ಕಾಲೇಜು ಆಗಿ ಪರಿವರ್ತಿತವಾಗಿದೆ.   ನಿಮ್ಮ  ಕಾಲಾವಧಿಯಲ್ಲಿದ್ದ ಅಧ್ಯಾಪಕರು,   ವಿಶೇಷಗಳು, ಆಟೋಟಗಳು, ಶಾಲಾ ಚಟು

17. ಸಾಂಪ್ರದಾಯಿಕ ಹಾಡುಗಳ ಸಂಗ್ರಾಹಕಿ

ಇಮೇಜ್
ಅಜ್ಜಂಪುರ ಅಚ್ಚಮ್ಮ ಸೀತಾರಾಮ ಭಟ್ ಅವರು ಅಜ್ಜಂಪುರದವರು. ೧೯-೦೪-೧೯೨೫ರಲ್ಲಿ ಜನಿಸಿದರು. ತಂದೆ ಶಂಕರಪ್ಪ. ಅವರು ಸ್ಕೌಟ್ ಮಾಸ್ತರರು. ಅಚ್ಚಮ್ಮನವರು ಎರಡು ವರ್ಷದವರಿದ್ದಾಗಲೇ ತೀರಿಕೊಂಡರು. ಅಂದಿನ ಕೂಡು ಕುಟುಂಬದ ವ್ಯವಸ್ಥೆಯಲ್ಲಿ ತಂದೆಯಿಲ್ಲದೆ ಬೆಳೆದರೂ, ಅವರಿಗೆ ತಂದೆಯ ಪ್ರೀತಿಯ ವಿನಾ, ಇನ್ನಾವ ತೊಂದರೆಗಳೂ ಕಾಡಲಿಲ್ಲ. ಅದು ಬಾಲ್ಯ ವಿವಾಹದ ಕಾಲ. ತಮ್ಮ ೧೨ನೇ ವಯಸ್ಸಿನಲ್ಲಿ ಹಿರೇಮಗಳೂರಿನ ಸಂಸ್ಕೃತ ವಿದ್ವಾಂಸರಾಗಿದ್ದ ಸೀತಾರಾಮಭಟ್ಟರನ್ನು ವಿವಾಹವಾದರು. ಅಂದಿನ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಗಳಲ್ಲಿ ದೈನಂದಿನ ಕೆಲಸ-ಕಾರ್ಯಗಳ ಜತೆಗೇ, ಸಾಹಿತ್ಯ, ಸಂಗೀತಗಳ ಅಭ್ಯಾಸಕ್ರಮವನ್ನು ರೂಢಿಸುತ್ತಿದ್ದರು. ಮುಂದೆ  ಅದು ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತಿತ್ತು. ಅಚ್ಚಮ್ಮನವರು ತಮ್ಮ ತಾಯಿ ವೇಂಕಟಲಕ್ಷ್ಮಮ್ಮ, ಅಜ್ಜಿ ಬನಶಂಕರಮ್ಮ, ಸೋದರತ್ತೆ ಗೌರಮ್ಮ ಮುಂತಾದ ಹಿರಿಯರೊಡನೆ ಕುಳಿತು, ಅವರು ಹಾಡುತ್ತಿದ್ದ ಸಂಪ್ರದಾಯದ ಹಾಡುಗಳನ್ನು ಅಭ್ಯಾಸಮಾಡಿದರು. ವಿವಾಹ, ಉಪನಯನ, ಗೌರೀ ಹಬ್ಬ, ಗಣಪತಿ ಹಬ್ಬ, ದೀವಳಿಗೆ, ಸಂಕ್ರಾಂತಿ ಮುಂತಾದ ಸಂದರ್ಭಗಳಲ್ಲಿ, ಅವುಗಳಿಗೆ ಸಂಬಂಧಿಸಿದ ಹಾಡುಗಳನ್ನು ಹಿಂದಿನವರು ರಚಿಸಿದ್ದಾರೆ. ಅವುಗಳನ್ನು ಸೂಕ್ತ ಸಮಯದಲ್ಲಿ ಹಾಡುತ್ತಿದ್ದಾಗ, ಆಯಾ ಹಬ್ಬ, ಉತ್ಸವಗಳ ಆಚರಣೆಯ ಹಿಂದಿನ ಉದ್ದೇಶ, ಸಂಭ್ರಮಗಳು ಆ ಹಾಡುಗಳಲ್ಲಿ ಪ್ರತಿಧ್ವನಿಸುತ್ತಿದ್ದವು. ಅವು ಯಾವುವೂ ಶಾಸ್ತ್ರೀಯ ಸಂಗೀತದ ಚೌಕಟ್ಟಿಗೆ ಒಳಪಟ್

16. ಕುಸಿಯುತ್ತಿರುವ ಅಮೃತ ಸೌಧ

ಇಮೇಜ್
ಅಜ್ಜಂಪುರದ  ಅಮೃತಮಹಲ್  ಪಶು ಸಂವರ್ಧನಾ ಕೇಂದ್ರ    ಇತಿಹಾಸ ಮತ್ತು ವಾಸ್ತವ ಅಜ್ಜಂಪುರದಲ್ಲಿರುವ ಅಮೃತ ಮಹಲ್  ಪಶು  ಸಂವರ್ಧನಾ   ಕೇಂದ್ರವು ನಮ್ಮ ದೇಶದ ಸಂದರ್ಭದಲ್ಲಿ ವಿಶಿಷ್ಟವಾದುದು.  ಅಜ್ಜಂಪುರದ ಅಮೃತಮಹಲ್ ಪಶು ಸಂವರ್ಧನಾ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಡಾ. ಟಿ.ಎಸ್. ಕೃಷ್ಣಮೂರ್ತಿ, (ನಿವೃತ್ತ ಜಂಟಿ ನಿರ್ದೇಶಕರು, ಪಶುಪಾಲನಾ ಇಲಾಖೆ) ಗಳನ್ನು ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರಿನ ಮತ್ತೀಕೆರೆಯ ಅವರ ನಿವಾಸದಲ್ಲಿ ಸಂದರ್ಶಿಸಿ, ಸಂಗ್ರಹಿಸಿದ ಮಾಹಿತಿಗಳನ್ನು ಇಲ್ಲಿ ನೀಡಿದ್ದೇನೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಕಾರ್ಯಾಲಯದಲ್ಲಿ ಕೆಲಸಮಾಡುತ್ತಿದ್ದಂತೆಯೇ, ಊರಿನ ಪ್ರಗತಿ ಮತ್ತು ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ತಮ್ಮ ಕಾರ್ಯಕ್ಷೇತ್ರದಲ್ಲಿ ಹೊಂದಿರುವ ಪರಿಣತಿಯು ವೃತ್ತಿಯ ಅವಶ್ಯಕತೆ ಇರಬಹುದಾದರೂ,  ತಮ್ಮ ಇಲಾಖೆಯು,  ರೈತರೊಡನೆ ಹೊಂದಿದ್ದ   ಸಂಬಂಧವು  ಸಾಮಾಜಿಕ ಆರೋಗ್ಯಕ್ಕೆ ಪೂರಕವಾಗಿ ಹೇಗಿತ್ತೆಂಬುದನ್ನು ನಿರೂಪಿಸಿದರು. ರೈತರಿಂದ ಇಲಾಖೆಯು ಕಲಿಯುವುದಷ್ಟೇ ಅಲ್ಲ, ರೈತರು ಈ ಇಲಾಖೆ ತಮ್ಮದೆಂಬ ಭಾವನೆ ಬೆಳೆಯಲು, ಹಿಂದಿನ ಸರಕಾರಗಳ ನೀತಿಯಿತ್ತು, ಅವುಗಳಲ್ಲಿ ಅಡಗಿದ ವಿಶಾಲ ಭಾವನೆಯನ್ನು ಅವರಿಗೆ ಮನವರಿಕೆ ಮಾಡಿಸಲು, ತಮ್ಮ ಆಡಳಿತಾವಧಿಯಲ್ಲಿ ಹೇಗೆಲ್ಲ ಕೆಲಸಮಾಡಲಾಯಿತೆಂದು ವಿವರಿಸಿದರು. ಅವರ ಕಾರ್ಯಕ್ಷೇತ್ರದ ಪ್ರಮುಖ ವ್ಯಾಪ್ತಿಯು ಪಶುಪಾಲನೆಗೆ ಸಂಬಂಧಿಸಿದ್ದಾದರೂ, ವ

15. ಆದರ್ಶ ಶಿಕ್ಷಕ ಶ್ರೀ ಎನ್. ಎಸ್. ಅನಂತರಾವ್

ಇಮೇಜ್
ಶ್ರೀ ಎನ್. ಎಸ್. ಅನಂತರಾವ್ ಕುಳ್ಳನೆಯ ನಿಲುವು , ಕಾಲೇಜಿಗೆ ಹೊರಟಾಗ ಖಾದೀ ಸೂಟು , ಮಿಕ್ಕಂತೆ ಸರಳ ಉಡುಪು , ಸದಾ ಚಿಂತನೆಯಲ್ಲಿ ತೊಡಗಿರುವಂಥ ಮುಖಭಾವ , ವಿದ್ಯಾರ್ಥಿಗಳನ್ನು ಕಂಡರೆ ಅಕ್ಕರೆಯ ಜತೆಗೆ , ಅವರು ಕಲಿಯಬೇಕಾದಷ್ಟನ್ನು ಕಲಿಯುತ್ತಿಲ್ಲವಲ್ಲ ಎಂಬ ಕಳಕಳಿ. ಇದು ನಮ್ಮೂರಿನ ಪ್ರೌಢಶಾಲೆಯ ನಿವೃತ್ತ ಮಖ್ಯೋಪಾಧ್ಯಾಯರಾಗಿದ್ದ  ನಲ್ಲೂರು ಶ್ರೀನಿವಾಸರಾವ್ ಅನಂತರಾವ್ ಅವರ ಬಾಹ್ಯಚರ್ಯೆ. ಅವರು ಗಾಂಧೀವಾದಿ. ಅಹಿಂಸೆಯಲ್ಲಿ ತುಂಬ ನಂಬಿಕೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ , ಅವರನ್ನು ಕುಳ್ಳಿರಿಸಿಕೊಂಡು ಅನುನಯದ ಮಾತನಾಡಿ ಪರಿವರ್ತನೆಗೆ ಒಳಗಾಗುವಂತೆ ಮಾಡುತ್ತಿದ್ದವರು.  ಅವರು ಅಜ್ಜಂಪುರಕ್ಕೆ ಸಮೀಪವಿರುವ ಶಾಂತಿಸಾಗರದ ಬಳಿಯಲ್ಲಿರುವ ನಲ್ಲೂರಿನಲ್ಲಿ  ೧೯೧೬ರಲ್ಲಿ ಜನಿಸಿದರು. ತಂದೆ ಶ್ರೀನಿವಾಸರಾವ್ , ತಾಯಿ ಪದ್ಮಾವತಿ ಬಾಯಿ. ತಮ್ಮ ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ರಾಯರು , ಅವರ ಅಣ್ಣ ಅಶ್ವತ್ಥನಾರಾಯಣ ರಾಯರ ನೆರವಿನಿಂದ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದರು. ಅನತಿಕಾಲದಲ್ಲೇ ಅವರ ಅಣ್ಣನೂ ತೀರಿಕೊಂಡಾಗ , ಶಾಲಾ ಮಕ್ಕಳಿಗೆ ಮನೆಪಾಠಮಾಡುತ್ತ , ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ , ಮದನಪಲ್ಲಿಯಲ್ಲಿ ಬಿ.ಟಿ. ಅಧ್ಯಾಪಕ ಪದವಿಯನ್ನು ಪಡೆದರು.೧೯೩೬-೩೭ನೇ ಇಸವಿಯು ಎರಡನೇ ಮಹಾಯುದ್ಧ ನಡೆಯುತ್ತಿದ್ದ ಕಾಲ. ಈ ಸಮಯದಲ್ಲಿ ಗೋವಾದ ಟ್ರಿನಿಟಿ ಆಂಗ್ಲಶಾಲೆಯಲ್ಲಿ ಅಧ

14. ಹವ್ಯಾಸಿ ರಂಗಭೂಮಿ ಕಲಾವಿದ

ಇಮೇಜ್
ಬಿ. ಎಸ್.ರಾಜಾರಾವ್ ಈ ಬ್ಲಾಗ್‌ನ್ನು ಆರಂಭಿಸುವಾಗ ಮನಸ್ಸಿನಲ್ಲಿದ್ದುದು, ಇದು ಅಜ್ಜಂಪುರದವರನ್ನು ಕುರಿತಾಗಿ ಮಾತ್ರ ಇರಬೇಕು. ಈ ನಿಲುವು ಸಂಸ್ಥೆಗಳ ಮಟ್ಟಿಗೆ ಅನ್ವಯವಾದೀತೇ ವಿನಾ ವ್ಯಕ್ತಿಗಳಿಗಲ್ಲವೆನ್ನುವುದು, ಬ್ಲಾಗ್ ಆರಂಭವಾದ  ಸ್ವಲ್ಪ ದಿನಗಳಲ್ಲೇ ಮನವರಿಕೆಯಾಯಿತು. ಏಕೆಂದರೆ, ಕೇವಲ ಸ್ಥಳೀಕರನ್ನು ಮಾತ್ರ ಪ್ರಸ್ತಾಪಿಸುತ್ತೇನೆಂದುಕೊಂಡರೆ, ಅದು ತೀರ ಪರಿಮಿತಿಗೆ ಒಳಪಟ್ಟೀತು.  ಸರ್ಕಾರಿ ನೌಕರಿ, ಉದ್ಯಮಗಳಿಗೆಂದು ಬಂದು ಸೇರಿದವರು ಕಾಲಾಂತರದಲ್ಲಿ ಸ್ಥಳೀಕರೇ ಆಗಿಹೋಗುತ್ತಾರೆ. ಇದು ಎಲ್ಲ ಊರುಗಳಲ್ಲೂ ನಡೆಯುವ ವಾಸ್ತವ. ಇದು ಈ ಕೆಳಗೆ ಪ್ರಸ್ತಾಪಿಸಿರುವ ಶ್ರೀ ರಾಜಾರಾಯರ ವಿಷಯಕ್ಕೂ ಅನ್ವಯಿಸುತ್ತದೆ. ಅವರು ಅಜ್ಜಂಪುರದ ಕೋಟೆಯ ನಿವಾಸಿಯಾಗಿದ್ದರು. ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಮೇಸ್ತ್ರಿಯಾಗಿದ್ದರು. ನಿವೃತ್ತಿಯ ನಂತರ ಬೆಂಗಳೂರು ಸೇರಿ, ಅಲ್ಲಿಯೂ ಕೆಲಸಮಾಡುತ್ತಿದ್ದರು. ರಾಜಾರಾಯರದು ಎತ್ತರದ ತೆಳುವಾದ ನಿಲುವು, ಆಕಾರಕ್ಕೂ ಧ್ವನಿಗೂ ಸಂಬಂಧವೇ ಇಲ್ಲದಂಥ ದಪ್ಪವಾದ ಗಂಡು ದನಿ, ಗುಳಿಬಿದ್ದ ಕಣ್ಣುಗಳು , ಬಡತನವೇ ಮೂರ್ತಿವೆತ್ತಂತಿದ್ದರೂ, ಉತ್ಸಾಹದಲ್ಲಿ ಕೊರತೆಯಿರಲಿಲ್ಲ. ಅದೇ ರೀತಿ ಪರೋಪಕಾರದ ಗುಣ ಕೂಡ. ೧೯೬೦ರ ದಶಕದ ಕೊನೆಯಲ್ಲಿ ನಾವು ನಾಲ್ಕಾರು ಗೆಳೆಯರು ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಸಿದ್ದೆವು. ಅದು ಡಿಸೆಂಬರ್ ತಿಂಗಳು. ಅದೇ ಸಮಯದಲ್ಲಿ ಅವರ ಇಲಾಖೆಯು ರಸ್ತೆಯನ್ನು ಉಪಯೋಗಿಸುವ ವಾಹನಗಳನ್ನು