ಪೋಸ್ಟ್‌ಗಳು

2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

94. ಅಜ್ಜಂಪುರ ಕೋಟೆ ಶ್ರೀ ಆಂಜನೇಯ ದೇವಾಲಯದ ದ್ವಿತೀಯ ವಾರ್ಷಿಕ ಹನುಮ ಜಯಂತಿ

ಇಮೇಜ್
ಎಲ್ಲರಿಗೂ 2019ನೇ ವರ್ಷದ ಶುಭಾಶಯಗಳು ಅಜ್ಜಂಪುರದಲ್ಲಿ ಕಳೆದ ವರ್ಷ ಹನುಮ ಜಯಂತಿಯು ನಡೆದ ಸಂಭ್ರಮವನ್ನು ನೆನಪಿಸಿಕೊಂಡರೆ, ನ ಭೂತೋ, ನ ಭವಿಷ್ಯತಿ ಎಂಬತಿತ್ತು. ನ ಭೂತೋ-ಇದನ್ನು ಒಪ್ಪಿಕೊಳ್ಳೋಣ, ಆದರೆ ನ ಭವಿಷ್ಯತಿ ಎಂಬಂತೆ ಆಗಲಿಲ್ಲ. ಈ ವರ್ಷವೂ ಅದೇ ಉತ್ಸಾಹದಿಂದ ನಡೆಸಲಾಗಿದೆ. ಈ ಸಂಬಂಧವಾಗಿ ನಾನು ಅವಧೂತ ಬಳಗದ ಕೆಲವರನ್ನು ಮಾತನಾಡಿಸಿದ್ದುಂಟು. "ಭಗವಂತನ ಸೇವೆ ನಡೆಯಲು ಒದಗಿದ ಪ್ರೇರಣೆಯನ್ನು ನಾವು ಮರೆಯಲಾರೆವು. ನಮ್ಮ ನಿರೀಕ್ಷೆಗೂ ಮೀರಿ ಈ ಉತ್ಸವ ನಡೆದದ್ದು ನಮ್ಮಲ್ಲಿ ಹುಮ್ಮಸ್ಸನ್ನು ತುಂಬಿದೆ" ಎಂದು ಹೇಳಿಕೊಂಡರು.  ಊರಿನ ಸಂಭ್ರಮಕ್ಕೆ, ಜನಗಳ ಭಾಗವಹಿಸುವಿಕೆಗೆ ಇಂಥ ಉತ್ಸವಗಳು, ಜಾತ್ರೆಗಳು, ಮೆರವಣಿಗೆಗಳು ಎಲ್ಲವೂ ಅವಶ್ಯಕವೇ ಸರಿ. ಅದನ್ನು ಒಂದೇ ಕ್ರಮದಲ್ಲಿ ನಿರ್ವಹಿಸುವ ವ್ಯವಸ್ಥೆ ಇರುವಂತಾದರೆ, ಅದು ಸಾಂಸ್ಕೃತಿಕ, ಧಾರ್ಮಿಕ ಕಲಾಪಗಳಿಗೆ ನೀಡುವ ಮಹತ್ವದ ಕೊಡುಗೆಯಾದೀತು. ಇಂಥ ಉತ್ಸವ, ಆಚರಣೆಗಳು ಊರೊಟ್ಟಿನ ಜನರನ್ನು ಒಂದುಗೂಡಿಸಲು ನೆರವಾಗುತ್ತದೆ. ಅದನ್ನುಅಜ್ಜಂಪುರದ ಯುವಪೀಳಿಗೆ ಅರ್ಥೈಸಿಕೊಂಡು ಮುಂದುವರೆಸುವಂತಾಗಲಿ ಎನ್ನುವುದು ಆಶಯ. ಚಿತ್ರ-ಲೇಖನಗಳನ್ನು ಗೆಳೆಯ ಅಪೂರ್ವ ಅಜ್ಜಂಪುರ ಸಿದ್ಧಪಡಿಸಿದ್ದಾರೆ. ಅವರಿಗೆ ವಂದನೆಗಳು. ಶಂಕರ ಅಜ್ಜಂಪುರ  ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ - 99866 72483 ಮಿಂಚಂಚೆ - shankarajp@gmail.com ---------------------

93. ಮರೆಯಾದ ಮಾಧವರಾವ್ (ಮಾಧು)

ಇಮೇಜ್
93. ಮರೆಯಾದ ಮಾಧವರಾವ್ (ಮಾಧು) ಬಗ್ಗ ವಳ್ಳಿ ನರಸಿಂಹಮೂರ್ತಿ ಮಾಧವರಾವ್. ಇದು ಅವರ ಪೂರ್ಣ ಹೆಸರು. ಆದರೆ ಅವರು ಮಾಧು ಎಂಬ ಹೆಸರಿನಿಂದಲೇ ಅಜ್ಜಂಪುರದಲ್ಲಿ ಜನಪ್ರಿಯರಾಗಿದ್ದರು. ತೆಳುವಾದ ಶರೀರ, ಸದಾ ಚಟುವಟಿಕೆ, ಉಡುಗೆ ತೊಡುಗೆಗಳಲ್ಲಿ ಉದಾಸೀನವಿರಲಿಲ್ಲ. ಯಾವ ದುರಭ್ಯಾಸಗಳು ಇರಲಿಲ್ಲ. 59 ಸಾಯುವಂಥ ವಯಸ್ಸೇನೂ ಅಲ್ಲ. ಅನಾಯಾಸೇನ ಮರಣಂ ಎಂಬಂತೆ,  ಬೆಂಗಳೂರಿನಲ್ಲಿರುವ ತಮ್ಮ ಮಗನ ಮನೆಯಲ್ಲಿ ಮಲಗಿದಲ್ಲಿಯೇ ಮೃತರಾದರು.   ರಾಜಕೀಯ ವಿದ್ಯಮಾನಗಳ ಬಗ್ಗೆ ತುಂಬ ಆಸಕ್ತಿಯಿದ್ದರೂ, ಸ್ಥಳೀಯ ರಾಜಕೀಯದಲ್ಲಿ ಆಸಕ್ತಿ ತಳೆದವರಲ್ಲ. ಬದಲಾಗಿ ಅವರ ಪತ್ನಿಗೆ ಪ್ರೋತ್ಸಾಹ ನೀಡಿದ್ದರು. ಪುರಸಭೆಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದುಂಟು. ಗೆಲ್ಲಲಿಲ್ಲ, ಅದು ಬೇರೆಯ ಸಂಗತಿ. ಅವರ ತಂದೆ ಬಗ್ಗವಳ್ಳಿ ನರಸಿಂಹಮೂರ್ತಿಗಳ ಬಗ್ಗೆ ಇದೇ ಬ್ಲಾಗ್ ನಲ್ಲಿ ನೆನಪನ್ನು ದಾಖಲಿಸಿದ್ದೇನೆ. ಆದರೆ ಮಾಧವರಾವ್ ಬಗ್ಗೆ ನುಡಿನಮನ ಬರೆಯಬೇಕಾಗಿ ಬರುತ್ತದೆಂದು ಎಣಿಸಿರಲಿಲ್ಲ. ಅದೆಲ್ಲ ವಿಧಿಯ ವೈಪರೀತ್ಯವೆಂದಷ್ಟೇ ಹೇಳಬಹುದು. ನಾನು ಅವರ ಎದುರು ಮನೆಯಲ್ಲೇ ಇದ್ದುದು, ನನ್ನ ಬಾಲ್ಯವನ್ನು ಅಜ್ಜಂಪುರದಲ್ಲಿ ಕಳೆದುದರ ಆಧಾರದಲ್ಲಿ, ನಂತರವೂ ಊರಿನೊಂದಿಗೆ ತಪ್ಪದ ನನ್ನ ಒಡನಾಟದಿಂದ ಈ ಬರಹವನ್ನು ದಾಖಲಿಸಲು ಸಾಧ್ಯವಾಗಿದೆ. ಅಂತೆಯೇ ನಾನು ಐದು ವರ್ಷಗಳ  ಹಿಂದೆ ಶಿವಮೊಗ್ಗಕ್ಕೆ ಬಂದು ನೆಲೆಸಿದ ನಂತರ, ಅಜ್ಜಂಪುರದ ಗ್ರಾಮದೇವತೆ ಕಿರಾಳಮ್ಮನ ಜಾತ್ರೆ,

92. ನನ್ನ ನೆನಪಿನ ಅಜ್ಜಂಪುರ

ಇಮೇಜ್
ಎಲ್ಲ ಓದುಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ಈ ಬ್ಲಾಗ್ ತನ್ನ ಏಳನೆಯ ವರ್ಷವನ್ನು ಪೂರೈಸಿದೆ. ಬ್ಲಾಗ್ ಗೆಂದು ಲೇಖನಗಳನ್ನು ಸಂಗ್ರಹಿಸುವಾಗ ನಿರಂತರ ಶ್ರಮಪಟ್ಟದ್ದಿದೆ, ಬರೆಯುವವರ ಬೆನ್ನು ಬಿದ್ದು ಬರೆಸಿ ಪ್ರಕಟಿಸಿರುವುದಿದೆ. ಇಲ್ಲೆಲ್ಲ ಕೆಲಸ ಮಾಡಿರುವುದು ಲೇಖಕರ, ಓದುಗರ ಪ್ರೀತಿಯೇ ವಿನಾ ನನ್ನಿಂದ ಹಿಂಸೆ ತಾಳಲಾಗದ್ದು ಎಂದು ಯಾರೂ ಭಾವಿಸಲಿಲ್ಲ. ಊರಿನ ಇನ್ನೂ ಹಲವಾರು ಸಂಗತಿಗಳನ್ನು, ಘಟನೆಗಳನ್ನು, ಐತಿಹಾಸಿಕ ವಿವರಗಳನ್ನು, ವ್ಯಕ್ತಿ ಚಿತ್ರಗಳನ್ನು ಪ್ರಕಟಿಸಬೇಕಾದದ್ದು ತುಂಬ ಇದೆ. ಸ್ಥಳೀಯ ಮಾಹಿತಿಗಳನ್ನು ಒಂದುಗೂಡಿಸುವುದು ಕೂಡ ಕನ್ನಡಕ್ಕೆ ಸಂಬಂಧಿಸಿದ ಕೆಲಸವೇ ಸರಿ. ಇದೆಲ್ಲವನ್ನೂ ಮಾಡಲು ಸ್ಥಳೀಕರ ಪ್ರೋತ್ಸಾಹ ಬೇಕಾಗುತ್ತದೆ. ಅವರು ಮಾಹಿತಿಗಳನ್ನು ಕಳಿಸುವಂತಾದಲ್ಲಿ ಪ್ರಕಟಣೆಯ ಕಾರ್ಯ ಸುಲಭವಾದೀತು. ಈ ಹಿನ್ನೆಲೆಯಲ್ಲಿ ಅಜ್ಜಂಪುರದ ಗಣ್ಯರಲ್ಲಿ ಓರ್ವರಾಗಿದ್ದ ಶ್ರೀ ನಾಗರಾಜ ಶ್ರೇಷ್ಠಿಯವರ ಮೊಮ್ಮಗಳು ಶ್ರೀಮತಿ ಸೌಜನ್ಯಾ ದತ್ತರಾಜರನ್ನು ಲೇಖನ ಬರೆದುಕೊಡಲು ಕೇಳಿದೆ. ಅಜ್ಜಂಪುರಕ್ಕೆ ಸಂಬಂಧಿಸಿದಂತೆ ತನ್ನ ಅನುಭವ ತೀರ ಸೀಮಿತವೆಂದು ಹೇಳಿಯೇ, ಕೆಳಗಿನ ಲೇಖನವನ್ನು ನಿಗದಿತ ದಿನದೊಳಗೆ ಕಳಿಸಿಕೊಟ್ಟರು.  ಸಮೂಹ ಮಾಧ್ಯಮ ಹಾಗೂ ಪತ್ರಿಕೋದ್ಯಮದಲ್ಲಿ ಪದವೀಧರೆಯಾಗಿರುವ ಇವರು ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸಮಾ

91. ಅಜ್ಜಂಪುರದ ಹಿರಿಯ ಪತ್ರಕರ್ತ, ವರ್ತಕ ಜಿ.ಬಿ.ಮಲ್ಲಿಕಾರ್ಜುನಸ್ವಾಮಿ

ಇಮೇಜ್
ಕಿರಿಯರ ಮೇಲೆ ಹಿರಿಯರ ಪ್ರಭಾವವು ಅಪರೋಕ್ಷವಾಗಿಯಾದರೂ ಇರುತ್ತದೆನ್ನಲು ನಾನು ಕಂಡಂತೆ  ಜಿ.ಬಿ. ಮಲ್ಲಿಕಾರ್ಜುನ ಸ್ವಾಮಿಯವರೂ ಉತ್ತಮ ಉದಾಹರಣೆ ಎಂದರೆ ತಪ್ಪಾಗದು. ಸಾಂಘಿಕ ಚಟುವಟಿಕೆಗಳು, ಕಷ್ಟಗಳನ್ನು ಸಹಿಸಿಕೊಂಡು ನಗುತ್ತ ಬಾಳುವುದು, ವಿನೀತತೆಗಳೇ ಅವರ ಬಲವೆಂದು ಅವರನ್ನು ಹತ್ತಿರದಿಂದ ನೋಡಿ ತಿಳಿದಿದ್ದೇನೆ.  70ರ ಪ್ರಾಯದಲ್ಲಿರುವ ಅವರ ವೃತ್ತಿಪರ ಚಟುವಟಿಕೆ ಮತ್ತು ಕ್ರಿಯಾಶೀಲತೆಗಳು ಬೆರಗು ಹುಟ್ಟಿಸುತ್ತವೆ. ಜನರೊಂದಿಗಿನ ಸೌಹಾರ್ದದ ನಡವಳಿಕೆ, ಹೊಸ ಸಂಗತಿಗಳನ್ನು ತಿಳಿಯುವ ಕುತೂಹಲಗಳಿಂದಾಗಿ ಅವರು ಆಪ್ತರಾಗುತ್ತಾರೆ.  ಮನಸ್ಸುಮಾಡಿದ್ದರೆ, ಸ್ಥಳೀಯ ರಾಜಕೀಯದಲ್ಲಿ ಮಿಂಚಬಹುದಾಗಿದ್ದ  ಎಲ್ಲ ಅವಕಾಶಗಳಿದ್ದರೂ, ಅದರಿಂದ ದೂರವುಳಿದು, ತಮ್ಮಿಂದಾದ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ನಾನು ಇನ್ನೂ ಎರಡು ತಿಂಗಳು ಅಮೆರಿಕಾದಲ್ಲಿರಬೇಕಿದೆ. ಬ್ಲಾಗ್ ಪ್ರಕಟಣೆ ನಿಲ್ಲಬಾರದೆಂಬುದು ಆಶಯ. ಅದು ಈವರೆಗೂ ನಡೆದುಬಂದಿದೆ.  ಮಿತ್ರ ಅಪೂರ್ವ, ಆರ್ಯಮಿತ್ರ ಮುಂತಾದವರ ಸಹಕಾರದಿಂದ ಇದು ಸಾಧ್ಯವಾಗಿದೆ. ಮಲ್ಲಿಕಾರ್ಜುನ ಸ್ವಾಮಿಯವರನ್ನು ಕುರಿತಾಗಿ ಚಿಕ್ಕದೊಂದು ಟಿಪ್ಪಣಿಯನ್ನು ಅವರ ಸೋದರ, ನನ್ನ ಮಿತ್ರ ಅಪೂರ್ವ ಇಲ್ಲಿ ದಾಖಲಿಸಿದ್ದಾರೆ. ಅವರಿಗೆ ವಂದನೆಗಳು.   ಶಂಕರ ಅಜ್ಜಂಪುರ  ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ - 99866 72483 ಮಿಂಚಂಚೆ - shankarajp@gmail.com ==================

90. ಹುಳಿಯಾದರೂ ಚೇಣಿಗೂ ಸೇರಬಲ್ಲ ಹುಣಿಸೆ

ಇಮೇಜ್
ಹುಣಿಸೇ ಹಣ್ಣಿನ ಚೇಣಿ, ದೊಂಗರಿ, ಗೊಳಲು, ಕೊಡತಿ  - ಇಂಥ ನುಡಿಗಟ್ಟುಗಳು ಈಗ ಹೆಚ್ಚಾಗಿ ಕೇಳಬರುವುದಿಲ್ಲ. ಇವೆಲ್ಲ ತೀರ ಚಿಕ್ಕ ಸಂಗತಿಗಳು ಎನ್ನಿಸಬಹುದು. ಆದರೆ ನಮ್ಮ ಗ್ರಾಮೀಣ ಬದುಕು ನಡೆದು ಬಂದದ್ದು ಇಂಥ ವೃತ್ತಿಗಳಿಂದಲೇ.  ಸೆಪ್ಟೆಂಬರ್ ತಿಂಗಳ ಈ ಸಂಚಿಕೆಯಲ್ಲಿ ಅಜ್ಜಂಪುರದಲ್ಲಿ ಹಿಂದೆ ನಡೆಯುತ್ತಿದ್ದ ಹುಣಿಸೇಹಣ್ಣಿನ ಚೇಣಿಯ ವಿಷಯದಲ್ಲಿ ಶ್ರೀಮತಿ ರೋಹಿಣಿ ಶರ್ಮಾ ಇವರು ದಶಕದ ಹಿಂದೆ ಬರೆದ ಲೇಖನದ ಮೂಲ ಚಿತ್ರಗಳನ್ನು ಲಗತ್ತಿಸಲಾಗಿದೆ.  60-70ರ ದಶಕಗಳಲ್ಲಿ ಅಜ್ಜಂಪುರದ ಕೋಟೆ ಪ್ರದೇಶದಲ್ಲಿನ ಮುಸ್ಲಿಮರ ಮನೆಯ ಮುಂದೆ ಹುಣಿಸೇಹಣ್ಣಿನ ಬೀಜಗಳನ್ನು ಬೇರ್ಪಡಿಸಿ, ಅವನ್ನು ಸುಂದರವಾಗಿ ಅರಳಿದ ಹೂವಿನ ಹಾಗೆ ಕಾಣುವಂತೆ ಜೋಡಿಸಿಡುತ್ತಿದ್ದ ಅವರ ಪರಿಶ್ರಮ ಮತ್ತು ಕುಶಲತೆಗಳು ಇನ್ನೂ ನೆನಪಿನಲ್ಲಿವೆ. ಕಾಲಮಾನವನ್ನು ಆಧರಿಸಿ ನಡೆಯುವ ಈ ಚಟುವಟಿಕೆ ಪ್ರತಿವರ್ಷ ಅನೇಕರಿಗೆ ಉದ್ಯೋಗ ನೀಡುತ್ತದೆ. ಮೇಲುನೋಟಕ್ಕೆ ಇವು ಓದಲು ಸ್ಪಷ್ಟವಾಗಿ ಕಾಣುತ್ತಿಲ್ಲದಿರಬಹುದು. ಆದರೆ ಬ್ಲಾಗ್ ನ ಪುಟವನ್ನು ಹಿಗ್ಗಲಿಸಿ ನೋಡಿದರೆ ಸ್ಪಷ್ಟವಾಗಿ ಕಾಣುತ್ತದೆ. ಈಗಲೂ ಚೇಣಿಯ ಚಟುವಟಿಕೆಗಳು ಮುಂದುವರೆಯುತ್ತಿರಬಹುದು. ಈ ವ್ಯವಹಾರದ ಆದ್ಯಂತವನ್ನು ಶ್ರೀಮತಿ ಶರ್ಮಾ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.  ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗೆ ಸ್ವಾಗತ. ವಂದನೆಗಳೊಡನೆ,  ಶಂಕರ ಅಜ್ಜಂಪುರ  ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ

89. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳಿಗೊಂದು ನುಡಿನಮನ

ಇಮೇಜ್
ಹಣ್ಣೆ – ಅಜ್ಜಂಪುರ   ಸಮೀಪದ ಪುಟ್ಟ ಗ್ರಾಮ. ಅಲ್ಲೊಂದು ವೀರಶೈವ ಪರಂಪರೆಯ ಮಠ ಹಾಗೂ ಹೊಯ್ಸಳ ನಿರ್ಮಿತ ಮಂದಿರಗಳಿವೆಯೆನ್ನುವುದೇ ಅದರ ಹೆಚ್ಚುಗಾರಿಕೆ. ನಾನು ಅಜ್ಜಂಪುರದಲ್ಲಿ ನನ್ನ ಬಾಲ್ಯವನ್ನು ಕಳೆದು 1968ರ ನಂತರ ವಿದ್ಯಾಭ್ಯಾಸ, ಉದ್ಯೋಗಗಳಿಗಾಗಿ ಊರನ್ನು ಬಿಡುವವರೆಗೂ ಹಣ್ಣೆ ಗ್ರಾಮದ ಬಗ್ಗೆ ನನಗೇನೂ ತಿಳಿದಿರಲಿಲ್ಲ ಮತ್ತು ಅಲ್ಲಿಗೆ ಹೋಗಿದ್ದೂ ಇಲ್ಲ. ಆಗೆಲ್ಲ ಆಗದ ಸಂಗತಿಗಳು ವಯಸ್ಸು 64ನ್ನು ತಲುಪುವಾಗ ಸಂಭವಿಸಿತೆನ್ನುವುದು ನಿಜವಾದರೂ, ಹಣ್ಣೆ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳನ್ನು ಭೇಟಿಯಾಗುವುದು ಸಾಧ್ಯವೇ ಆಗಲಿಲ್ಲವೆಂಬ ವಿಷಾದ ಇನ್ನೂ ಆವರಿಸಿದೆ.  ಅವರ ಬಗ್ಗೆ ಅಲ್ಪಸ್ವಲ್ಪ ಕೇಳಿ ತಿಳಿದಿದ್ದೆನಾದರೂ,ಅವರನ್ನು 2007ರಲ್ಲಿ ನಡೆದ, ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕದ ಸಂದರ್ಭದಲ್ಲಿ ನೋಡಿ, ಮಾತನಾಡಿಸಿದ್ದೆ. ಅವರೊಬ್ಬ ಪರಿಸರಪ್ರೇಮಿ, ಸಾಹಿತ್ಯದಲ್ಲಿ ಅಭಿರುಚಿಯಿದ್ದವರು ಹಾಗೂ ಮತಧರ್ಮಕ್ಕೆ ಸಂಬಂಧಿಸಿದಂತೆ ಜಿಗುಟು ನಿಲುವು ಹೊಂದಿದವರಲ್ಲ ಎಂಬ ಕಾರಣಗಳಿಗೆ ಅವರ ಬಗ್ಗೆ ಅಭಿಮಾನ. ಕುಂಭಾಭಿಷೇಕದ ಸಂದರ್ಭದಲ್ಲಿ 'ವರ್ಣ ಮಾತ್ರ ಕಲಿಸಿದಾತಂ ಗುರು' ಎಂದು ಅವರು ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯನವರನ್ನು ನೆನಪಿಸಿಕೊಂಡರು. 'ಅವರ ಮಗ ಬಂದಿದ್ದಾರೆಂದು ಕೇಳಿದೆ' ಎಂದು ನನ್ನನ್ನು ಕುರಿತು ಹೇಳಿ ವೇದಿಕೆಗೆ ಆಹ್ವಾನಿಸಿದ್ದರು.  ಅವರ ಸ್ನೇ