94. ಅಜ್ಜಂಪುರ ಕೋಟೆ ಶ್ರೀ ಆಂಜನೇಯ ದೇವಾಲಯದ ದ್ವಿತೀಯ ವಾರ್ಷಿಕ ಹನುಮ ಜಯಂತಿ
ಎಲ್ಲರಿಗೂ 2019ನೇ ವರ್ಷದ ಶುಭಾಶಯಗಳು ಅಜ್ಜಂಪುರದಲ್ಲಿ ಕಳೆದ ವರ್ಷ ಹನುಮ ಜಯಂತಿಯು ನಡೆದ ಸಂಭ್ರಮವನ್ನು ನೆನಪಿಸಿಕೊಂಡರೆ, ನ ಭೂತೋ, ನ ಭವಿಷ್ಯತಿ ಎಂಬತಿತ್ತು. ನ ಭೂತೋ-ಇದನ್ನು ಒಪ್ಪಿಕೊಳ್ಳೋಣ, ಆದರೆ ನ ಭವಿಷ್ಯತಿ ಎಂಬಂತೆ ಆಗಲಿಲ್ಲ. ಈ ವರ್ಷವೂ ಅದೇ ಉತ್ಸಾಹದಿಂದ ನಡೆಸಲಾಗಿದೆ. ಈ ಸಂಬಂಧವಾಗಿ ನಾನು ಅವಧೂತ ಬಳಗದ ಕೆಲವರನ್ನು ಮಾತನಾಡಿಸಿದ್ದುಂಟು. "ಭಗವಂತನ ಸೇವೆ ನಡೆಯಲು ಒದಗಿದ ಪ್ರೇರಣೆಯನ್ನು ನಾವು ಮರೆಯಲಾರೆವು. ನಮ್ಮ ನಿರೀಕ್ಷೆಗೂ ಮೀರಿ ಈ ಉತ್ಸವ ನಡೆದದ್ದು ನಮ್ಮಲ್ಲಿ ಹುಮ್ಮಸ್ಸನ್ನು ತುಂಬಿದೆ" ಎಂದು ಹೇಳಿಕೊಂಡರು. ಊರಿನ ಸಂಭ್ರಮಕ್ಕೆ, ಜನಗಳ ಭಾಗವಹಿಸುವಿಕೆಗೆ ಇಂಥ ಉತ್ಸವಗಳು, ಜಾತ್ರೆಗಳು, ಮೆರವಣಿಗೆಗಳು ಎಲ್ಲವೂ ಅವಶ್ಯಕವೇ ಸರಿ. ಅದನ್ನು ಒಂದೇ ಕ್ರಮದಲ್ಲಿ ನಿರ್ವಹಿಸುವ ವ್ಯವಸ್ಥೆ ಇರುವಂತಾದರೆ, ಅದು ಸಾಂಸ್ಕೃತಿಕ, ಧಾರ್ಮಿಕ ಕಲಾಪಗಳಿಗೆ ನೀಡುವ ಮಹತ್ವದ ಕೊಡುಗೆಯಾದೀತು. ಇಂಥ ಉತ್ಸವ, ಆಚರಣೆಗಳು ಊರೊಟ್ಟಿನ ಜನರನ್ನು ಒಂದುಗೂಡಿಸಲು ನೆರವಾಗುತ್ತದೆ. ಅದನ್ನುಅಜ್ಜಂಪುರದ ಯುವಪೀಳಿಗೆ ಅರ್ಥೈಸಿಕೊಂಡು ಮುಂದುವರೆಸುವಂತಾಗಲಿ ಎನ್ನುವುದು ಆಶಯ. ಚಿತ್ರ-ಲೇಖನಗಳನ್ನು ಗೆಳೆಯ ಅಪೂರ್ವ ಅಜ್ಜಂಪುರ ಸಿದ್ಧಪಡಿಸಿದ್ದಾರೆ. ಅವರಿಗೆ ವಂದನೆಗಳು. ಶಂಕರ ಅಜ್ಜಂಪುರ ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ - 99866 72483 ಮಿಂಚಂಚೆ - shankarajp@gmail.com ---------------------...