ಪೋಸ್ಟ್‌ಗಳು

2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

126. ಅಪೂರ್ವ ಕಥೆ ಕವನಗಳ ಅವಲೋಕನ

ಇಮೇಜ್
ಗೆಳೆಯ ಅಪೂರ್ವ ಅಜ್ಜಂಪುರ ಇವರ "ಒಂದಷ್ಟು ಕಥೆಗಳು ಕವಿತೆಗಳು" - ಈ ಪುಸ್ತಕದ ಅವಲೋಕನವು ಇತ್ತೀಚೆಗೆ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಅದರ ಅವಲೋಕನದ ವರದಿ ಇಲ್ಲಿದೆ.  ಅವರು ನನ್ನ ಮಿತ್ರರು ಎಂಬ ಅಭಿಮಾನ ಒಂದು ಕಡೆ ಇದ್ದರೆ, ಈ ಪುಸ್ತಕದ ಪ್ರಕಟಣಾಪೂರ್ವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾದುದು ಕೂಡ ನನಗೆ ಸ್ಮರಣೀಯ ಸಂಗತಿ.  ಊರ ಲೇಖಕನ ಪುಸ್ತಕವು ಊರಿನಲ್ಲೇ ಅವಲೋಕನಗೊಂಡಿರುವುದು ಕೂಡ ವಿಶೇಷ ಹೌದು! ಚಿತ್ರ - ವರದಿಗಳು ಇಲ್ಲಿವೆ. ಸಂಪಾದಕ ಶಂಕರ ಅಜ್ಜಂಪುರ ಅಂತರಜಾಲದಲ್ಲಿ ಅಜ್ಜಂಪುರ ******************************* "ಅಪೂರ್ವ ಬರೆದದ್ದು ಒಂದಷ್ಟಾದರೂ ಅವು ಅಪರೂಪದ ಸಣ್ಣಕತೆಗಳು, ಕವಿತೆಗಳು!" ಈ ಮಾತು ಹೇಳಿದವರು ಕನ್ನಡ ಪ್ರಾಧ್ಯಾಪಕರಾದ ಪ್ರೊ.ಮಹಾಲಿಂಗಪ್ಪ. ಸಂದರ್ಭ :  ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪ರ ಮೇ ತಿಂಗಳ ೨೪, ಶುಕ್ರವಾರದಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿ ಮತ್ತು ಸ.ಪ್ರ.ದ.ಕಾಲೇಜು ಸಂಯುಕ್ತವಾಗಿ ಆಯೋಜಿಸಿದ 'ಒಂದಷ್ಟು ಕಥೆ, ಕವಿತೆಗಳು' ಒಂದು ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಅಭಿಪ್ರಾಯ ವ್ಯಕ್ತಪಡಿಸಿದರು. 'ಒಂದು ನಿಧಿಯ ಸುತ್ತ' ಕತೆಯಲ್ಲಿ ಜಾನಪದ, ಐತಿಹಾಸಿಕ ಹಿನ್ನೆಲೆಯಲ್ಲಿ ವರ್ತಮಾನದ ಪ್ರಸಂಗವು ಬಿಚ್ಚಿಕೊಳ್ಳುತ್ತದೆ. ಕತೆಯು ನಡೆಯುವ 'ಅಸಾವತಿ'ಯು ಗಂಗರ