ಪೋಸ್ಟ್‌ಗಳು

ಜುಲೈ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

74. ಅವಿಸ್ಮರಣೀಯ ಅಮೆರಿಕಾ

ಇಮೇಜ್
ಆತ್ಮೀಯರೇ, ಈ 74ನೇ ಸಂಚಿಕೆಯಲ್ಲಿ ಅಜ್ಜಂಪುರದವರೇ ಆದ ಶ್ರೀ ಎ.ಎಸ್. ಕೃಷ್ಣಮೂರ್ತಿಯವರ ಕೃತಿ  "ಅವಿಸ್ಮರಣೀಯ ಅಮೆರಿಕಾ" - ಇದನ್ನು ಪರಿಚಯಿಸಿದ್ದಾರೆ ಮಿತ್ರ ಅಪೂರ್ವ ಬಸು. ಅಜ್ಜಂಪುರದಿಂದ ಅಮೆರಿಕವಲ್ಲದೆ, ನಾನೂ ಸೇರಿದಂತೆ ಇತರ ವಿದೇಶಗಳಿಗೆ ಹೋಗಿಬಂದವರು ನಮ್ಮ ನಡುವೆ ಹಲವರಿದ್ದಾರೆ. ಅವರೆಲ್ಲರೂ ತಮ್ಮ ಅನುಭವಗಳನ್ನು ದಾಖಲಿಸಿರುವುದು ಕಡಿಮೆ. ನಾನು ಎರಡು ಬಾರಿ ಅಮೆರಿಕಕ್ಕೆ ಹೋಗಿಬಂದೆ. ಮೊದಲ ಭೇಟಿಯಲ್ಲಿ 37ಲೇಖನಗಳೂ, ಎರಡನೇ ಭೇಟಿಯಲ್ಲಿ 28 ಲೇಖನಗಳನ್ನುಬರೆದೆನಾದರೂ, ಅವೆಲ್ಲ ಫೇಸ್ ಬುಕ್ ನಲ್ಲಿ ಪ್ರಕಟಗೊಂಡವು. ಪುಸ್ತಕವನ್ನು ಪ್ರಕಟಿಸುವ ಸಾಹಸಕ್ಕೆ ನಾನಿನ್ನೂ ಮುಂದಾಗಿಲ್ಲ. ಅಂಥ ಸಾಹಸ ಮಾಡಿ ಯಶಸ್ವಿಯಾಗಿರುವ ಕೃಷ್ಣಮೂರ್ತಿಯವರಿಗೆ ಅಭಿನಂದನೆಗಳು.  ಅಪೂರ್ವರು ಗುರುತಿಸಿರುವಂತೆ ಕೃಷ್ಣಮೂರ್ತಿಯವರ ಭಾಷೆ, ನಿರೂಪಣಾ ಶೈಲಿಗಳು ಅತ್ಯಂತ ಸಹಜ ಮತ್ತು ಸರಳವಾಗಿರುವುದರಿಂದ ಎಲ್ಲರ ಮನವನ್ನೂ ರಂಜಿಸುತ್ತದೆ. ಈ ಕೃತಿಯ ಉದ್ದಕ್ಕೂ ಊರಿನ ನೆನಪು ಅಲ್ಲಲ್ಲಿ ದಾಖಲಾಗಿರುವುದು ಅವರ ಅಭಿಮಾನದ ಸಂಕೇತ. ಅವರ ಬಾಲ್ಯದ ನೆನಪುಗಳಿರುವ ಮೊದಲ ಅಧ್ಯಾಯ, ಅಂದಿನ ಅಜ್ಜಂಪುರವನ್ನುತೆರೆದಿಟ್ಟಿದೆ. ಸ್ವಾರಸ್ಯದ, ವಿರಾಮದ ಓದಿಗೆಂದು ಆಯ್ದುಕೊಳ್ಳಬಹುದಾದ ಈ ಕೃತಿಯನ್ನು ಪ್ರೀತಿಯಿಂದ ಅಪೂರ್ವ ಬಸು ಪರಿಚಯಿಸಿದ್ದಾರೆ. ನಿಮ್ಮ ಪ್ರತಿಕ್ರಿಯೆಗಳೇ, ಬ್ಲಾಗ್ ನ ಲೇಖಕರಿಗೆ, ಸಂಪಾದಕರಿಗೆ ಸ್ಫೂರ್ತಿ. ನಾಲ್ಕು ಸಾಲು ಬರೆಯುವ ಮನಸ್ಸುಮಾಡಿ.