ಪೋಸ್ಟ್‌ಗಳು

ಡಿಸೆಂಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಜ್ಜಂಪುರದ ಹೆಮ್ಮೆಯ ಪುತ್ರ ಮತ್ತು ಸೊಸೆ :ಅಜ್ಜಂಪುರ ರಂಗಪ್ಪ ಘನಶ್ಯಾಮ್, ಐ.ಎಫ್.ಎಸ್. ಹಾಗೂ ಶ್ರೀಮತಿ ರುಚಿ ಘನಶ್ಯಾಮ್. ಐ.ಎಫ಼್.ಎಸ್.

ಇಮೇಜ್
ಆತ್ಮೀಯ ಓದುಗರೇ, ನಮ್ಮ ನಡುವೆ ಇರುವ ಅನೇಕರ ಸಾಧನೆಗಳ ಪರಿಚಯ ನಮಗಿರುವುದಿಲ್ಲ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಿಂದ ಬಂದವರ ಸಾಧನೆಗಳು ಪ್ರಕಟವಾಗಬೇಕಾದರೆ, ಅದಕ್ಕೆ ವಿಶೇಷ ಬೆಂಬಲಗಳು ಬೇಕಾಗುತ್ತದೆಯೆನ್ನುವುದು ವಾಸ್ತವ. ಆದರೆ ಸಾಧನೆಗೆ ಮನ್ನಣೆಯಂತೂ ದೊರೆಯುತ್ತದೆಯೆ ನ್ನು ವುದು ನಿಶ್ಚಿತ. ಹಾಗೆ ನಮ್ಮ ಊರಿನ ಘನತೆಯನ್ನು ಹೆಚ್ಚಿಸಿದವರ ಸಂಖ್ಯೆ ಬೇಕಾದಷ್ಟಿದೆ. ಅಜ್ಜಂಪುರದ ಸಾಧಕರನ್ನು ಗುರುತಿಸಿ, ಪರಿಚಯಿಸುವುದೇ ಈ ಬ್ಲಾಗ್ ನ ಉದ್ದೇಶವಾಗಿರುವುದರಿಂದ, ಓದುಗರ ಸಹಕಾರ ಈ ನಿಟ್ಟಿನಲ್ಲಿ ಅತ್ಯವಶ್ಯ. ಅಂಥ ಕೆಲಸವನ್ನು ನನ್ನ ಕೆಲವಾರು ಗೆಳೆಯರು ಮಾಡಿದ್ದಾರೆ, ಮಾಡುತ್ತಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಲಿ ಎನ್ನುವುದು ಆಶಯ.  ಪ್ರಸ್ತುತ ಚಿತ್ರ ಸಹಿತ  ಲೇಖನವನ್ನು ಗೆಳೆಯ ಅಜ್ಜಂಪುರ ಮಲ್ಲಿಕಾರ್ಜುನ ಅವರು ಸಿದ್ಧಪಡಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಊರಿನ ಬಗ್ಗೆ ಅಪಾರ ಅಭಿಮಾನ ತಳೆದವರು. ಅಜ್ಜಂಪುರದ ಬಗ್ಗೆ ಅವರು ಬರೆದಿರುವ ಕೆಲವು ಕಿರುಬರಹಗಳು ನಾಡಿನ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವುಗಳನ್ನೂ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ನೀವು ಅವರಿಗೊಂದು ಅಭಿನಂದನೆ ಹೇಳಲು ಅವರ ಸಂಪರ್ಕ ಸಂಖ್ಯೆ 9480150542. -ಶಂಕರ ಅಜ್ಜಂಪುರ ಬ್ಲಾಗ್ ನ ಹಿಂದಿನ ಸಂಚಿಕೆಗಳಲ್ಲಿ ಶತಾಯುಷಿಯಾಗುವ ಹಾದಿಯಲ್ಲಿರುವ ಹಿರಿಯರಾದ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ (ಭಾ