ಪೋಸ್ಟ್‌ಗಳು

ಜುಲೈ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನೆನಪಿನಂಗಳದಿಂದ.............

ಇಮೇಜ್
ಆತ್ಮೀಯರೇ,  ಜೂನ್ 30 ನನ್ನ 60ನೇ ಜನ್ಮದಿನ, ಜತೆಗೆ ವೃತ್ತಿ ಜೀವನಕ್ಕೆ ವಿದಾಯ  ಕೂಡ.  ಮುಂದಿನ ವಿಶ್ರಾಂತ ಜೀವನದಲ್ಲಿ ಇ-ಚಟುವಟಿಕೆಗಳಲ್ಲಿ ಇನ್ನಷ್ಟು ಸಕ್ರಿಯನಾಗಿರಲು ಅವಕಾಶ !  ಸದ್ಯಕ್ಕೆ    ಸಕ್ರಿಯವಾಗಿಲ್ಲದ ನನ್ನ ಇನ್ನೊಂದು   ಬ್ಲಾಗ್  "ನಾನು-ನೀವು" - ಇದರಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಇರಾದೆಯೂ ಇದೆ. ನಿಮ್ಮ  ಜತೆ ನನ್ನ ಪಯಣ ಮುಂದುವರೆಯುತ್ತಿರಲಿ  !  ವಂದನೆಗಳೊಡನೆ, ಶಂಕರ ಅಜ್ಜಂಪುರ ಈ ಸಂಚಿಕೆಯಲ್ಲಿ ಬರಹಕ್ಕಿಂತ ಹೆಚ್ಚು ಚಿತ್ರ ಸಂಗ್ರಹವಿದೆ. ಆಂಜನೇಯ ದೇವಾಲಯದ ನವೀಕರಣ ಸಂದರ್ಭದಲ್ಲಿ ಮೂಲೆ ಸೇರಿ ಹೋಗಬಹುದಾಗಿದ್ದ  ಈ ಚಿತ್ರಗಳನ್ನು , ಇಂಥ ವಿಷಯಗಳ ಬಗ್ಗೆ ನನ್ನಷ್ಟೇ ಆಸ್ಥೆ ಹೊಂದಿರುವ ದೇವಾಲಯದ ಈಗಿನ ಅರ್ಚಕರಾದ ಬಿ.ಎನ್. ಮಾಧವ ರಾವ್ ಇವರ ಸಹಕಾರದಿಂದ    ನಾನು   ಸಂಗ್ರಹಿಸಿದೆ. ನಂತರ ಇವುಗಳನ್ನು ಗಣಕಯಂತ್ರದಲ್ಲಿ   ಸೂಕ್ತವಾಗಿ   ಪರಿಷ್ಕರಿಸಿ    ಇಲ್ಲಿ ಪ್ರಕಟಿಸಿರುವೆ.   ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದಲ್ಲಿ 1980 ರಲ್ಲಿ ನಡೆದ ರಾಮತಾರಕ ಹೋಮ ಮತ್ತು ಅಜ್ಜಂಪುರಕ್ಕೆ ಶೃಂಗೇರಿಯ ಶ್ರೀಗಳು ಭೇಟಿ ನೀಡಿದಾಗಿನ  ಚಿತ್ರಗ ಳು   ಇಲ್ಲಿ ವೆ. ಇದರಲ್ಲಿ ನಿಮ್ಮ ಪರಿಚಿತರು ಅನೇಕರಿರಬಹುದು , ಅವರಲ್ಲಿ ಕೆಲವರು ಈಗ ನಮ್ಮೊಡನೆ ಇಲ್ಲದಿರಬಹುದು.   ಇಂದು ಶೃಂಗೇರೀ ಶ್ರೀಗಳು ಅಜ್ಜಂಪುರಕ್ಕೆ ಬಂದರೆ ,   ಈ ಚಿತ್ರಗಳಲ್ಲಿ ಕಾಣುವ ಸಾಂಪ್ರದಾಯಿಕ ಉಡುಪಾಗಲೀ , ಹಿರಿಯರ ಮುಖದಲ್ಲಿ