ಪೋಸ್ಟ್‌ಗಳು

ಮಾರ್ಚ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

24. ಶ್ರೀ ಅಜ್ಜಂಪುರ ಲಕ್ಷ್ಮಣಶಾಸ್ತ್ರಿ ಸುಬ್ರಹ್ಮಣ್ಯ ಶಾಸ್ತ್ರಿಗಳು

ಇಮೇಜ್
ಶ್ರೀ ಅ.ಲ.ಸು. ಶಾಸ್ತ್ರಿ ದಂಪತಿಗಳು  ಶ್ರೀ ಶಾಸ್ತ್ರಿಗಳ ಜತೆ ಸಂದರ್ಶನ  ನಮ್ಮೊಡನಿರುವ ಅಜ್ಜಂಪುರದ ಅತ್ಯಂತ ಹಿರಿಯರೆಂದರೆ ಬಹುಶಃ ಶ್ರೀ ಅಜ್ಜಂಪುರ ಲಕ್ಷ್ಮಣಶಾಸ್ತ್ರಿ ಸುಬ್ರಹ್ಮಣ್ಯ ಶಾಸ್ತ್ರಿಗಳು. ಅಗಸ್ಟ್ ೧೦ , ೧೯೧೯ರಲ್ಲಿ ಜನಿಸಿದ ೯೪ರ ಹರೆಯದ ಶಾಸ್ತ್ರಿಗಳು ಮೂಲತಃ ಅಜ್ಜಂಪುರದವರೆನ್ನುವುದು ಇಂದಿನ ತಲೆಮಾರಿಗೆ ತಿಳಿಯದಿರುವ ಸಂಗತಿ. ನಾನು ಅವರನ್ನು ಹಿಂದೊಮ್ಮೆ ನೋಡಿದ್ದೆ ಮತ್ತು ಅವರ ಬಗ್ಗೆ ಕೇಳಿದ್ದೆನಾದರೂ , ಅವರ ಸಾಧನೆಯ ಹಲವು ಮುಖಗಳ ಪರಿಚಯವಿರಲಿಲ್ಲ.  ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಈ ವಿದ್ವಾಂಸರನ್ನು ಪರಿಚಯಿಸುವ ಉದ್ದೇಶದಿಂದ ಅವರ ಪುತ್ರ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀ ಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು ತಮ್ಮ ತಂದೆಯನ್ನು ಕುರಿತಾದ ಮಾಹಿತಿಗಳನ್ನು ನೀಡಿದರು. ಇದಲ್ಲದೆ ನಾನು  ಇತ್ತೀಚೆಗೆ  ಕಡೂರಿಗೆ ತೆರಳಿ  ಶಾ ಸ್ತ್ರಿಗಳನ್ನು ಸಂದರ್ಶಿಸಿದೆ.  ಅದನ್ನಿಲ್ಲಿ ಪ್ರಕಟಿಸಿರುವೆ. ಶ್ರೀ ಅಳಸಿಂಗ ಪ್ರಶಸ್ತಿ  ಶಾಸ್ತ್ರಿಗಳು ತಮ್ಮ ಬಾಲ್ಯವನ್ನು ಮಚ್ಚೇರಿಯ ಸಮೀಪದ ವಗ್ಗನಹಳ್ಳಿ ಎಂಬಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ , ಕಡೂರಿನ ಸರಕಾರೀ ಶಾಲೆಯಲ್ಲಿ ಮಾಧ್ಯಮಿಕ ಶಾಲೆಗೆ ಸೇರಿದರು. ಅಂದಿನ ದಿನಗಳಲ್ಲಿ ವೇದಜ್ಞಾನಕ್ಕೆ ತುಂಬ ಮಹತ್ವವಿತ್ತು. ವೇದವಿದರಾದ ಜನರೂ ಹೆಚ್ಚಿದ್ದ ವಾತಾವರಣದಲ್ಲಿ ವೇದಪಾಠವನ್ನು ಬೇಲೂರಿನಲ್ಲಿ ಸತತ ಏಳು ವರ್ಷ