ಪೋಸ್ಟ್‌ಗಳು

2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

113. ಆಸಂದಿ ನಾಡು: ಸಂಸ್ಕೃತಿ, ಪರಂಪರೆ, ಇತಿಹಾಸದ ಬೀಡು!

ಇಮೇಜ್
ನಾನು  ಅಜ್ಜಂಪುರದಲ್ಲಿ ಬಾಲ್ಯವನ್ನು ಕಳೆದೆನಾದರೂ ಸುತ್ತಮುತ್ತಲಿನ ಗ್ರಾಮಗಳನ್ನು ನೋಡಿರಲಿಲ್ಲ. ಅದಕ್ಕೆ ಸಂದರ್ಭಗಳಿರಲಿಲ್ಲ ಎನ್ನುವುದೇ ಸರಿಯಾದೀತು.  ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲೇ ನಾಲ್ಕು ದಶಕಗಳನ್ನು ಕಳೆದುದಾಯಿತು. ಹಾಗೆಂದು ಊರಿನ ಸಂಪರ್ಕವೇನೂ ತಪ್ಪಿರಲಿಲ್ಲ.  ನಿವೃತ್ತಿಯ ನಂತರ ಹಣ್ಣೆ, ಸೊಲ್ಲಾಪುರ, ಗಡಿಹಳ್ಳಿ, ಅಮೃತಾಪುರ, ಬಗ್ಗವಳ್ಳಿ, ಹಿರೇನಲ್ಲೂರು ಮುಂತಾದ ಗ್ರಾಮಗಳನ್ನು ನೋಡಿದೆ. ಅದೂ ನಾನು ಸಂಪಾದಿಸುತ್ತಿರುವ "ಹೊಯ್ಸಳ ವಾಸ್ತುಶಿಲ್ಪ ಅವಲೋ ಕನ"ದ ಸಲುವಾಗಿ. ಈಗ ಅಜ್ಜಂಪುರ ತಾಲೂಕಾಗಿದೆ. ಅದರ ವ್ಯಾಪ್ತಿಯಲ್ಲಿನ ದೇಗುಲಗಳನ್ನು ನನ್ನ "ಅಂತರಜಾಲದಲ್ಲಿ ಅಜ್ಜಂಪುರ" ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವೆ. ಇದು ಅಜ್ಜಂಪುರ ತಾಲೂಕಿನಲ್ಲಿರುವ ಪುಟ್ಟ ಗ್ರಾಮ. ಇದರ ಇತಿಹಾಸದ ರೋಚಕತೆಯನ್ನು ಊಹಿಸಬೇಕೆಂದರೆ, ಇಲ್ಲಿರುವ ದೇವಾಲಯಗಳ ಸಂಖ್ಯೆಯನ್ನು ನೋಡಿದರೆ ತಿಳಿಯುತ್ತದೆ. ರಾಜಕೀಯವಾಗಿ ಹೊಯ್ಸಳರ ಕಾಲದಿಂದ ಪ್ರಸಿದ್ಧಿಯಲ್ಲಿದ್ದ ಈ ಊರಿನ ಮಹತ್ವ ಕುಂದಿರಬಹುದು. ಆದರೆ ಐತಿಹಾಸಿಕವಾಗಿ ಶ್ರೀಮಂತ ಊರು ಹೌದು. ನನ್ನ ಈ ಯತ್ನಕ್ಕೆ ಬೆಂಬಲವಾಗಿ ಸೋದರಿ ಶ್ರೀಮತಿ ಮಂಜುಳಾ ಹುಲ್ಲಹಳ್ಳಿಯವರು ತಮ್ಮ ಲೇಖನಗಳನ್ನು ನೀಡಿ ಸಹಕರಿಸಿರುವರು. ಅವರಿಗೆ ಕೃತಜ್ಞತೆಗಳು. ಇಲ್ಲಿ ಪ್ರಕಟಿಸಿರುವ ಎಲ್ಲ ಚಿತ್ರಗಳನ್ನು ಆಸಂದಿಯಲ್ಲಿ ನೆಲೆಸಿ ಕನ್ನಡದ ಕಾರ್ಯಕ್ರಮಗಳಿಗೆ ಒತ್ತಾಸೆಯಾಗಿ ನಿಂತು ದುಡಿಯುತ್ತಿರುವ ಶ್ರೀ ಹನುಮಂತಾಚಾರ

112. ಸೊಲ್ಲಾಪುರದ ಸಿದ್ದರಾಮೇಶ್ವರರು: ಬೇಡಿದಾಗ ಮಳೆಬೀಜ ತಂದು ಹರಸುವ ಮಹಾನುಭಾವರು!

ಇಮೇಜ್
 ಸೊಲ್ಲಾಪುರದ ಸಿದ್ದರಾಮೇಶ್ವರರು: ಬೇಡಿದಾಗ ಮಳೆಬೀಜ ತಂದು ಹರಸುವ ಮಹಾನುಭಾವರು!    'ಯೋಗಿಗಳ ಯೋಗಿ, ಶಿವಯೋಗಿ, ಸಿದ್ಧರಾಮನೊಬ್ಬನೆ ನಿಜಯೋಗಿ' ಎಂದು ಸಮಕಾಲೀನ ಶರಣರಾದ ಸೊಡ್ಡಳ  ಬಾಚಾರಸರಿಂದ ಹೊಗಳಿಸಿಕೊಂಡಿರುವ ಸಿದ್ದರಾಮೇಶ್ವರರು ಕುಗ್ರಾಮವಾಗಿದ್ದ ಸೊನ್ನಲಿಗೆಯನ್ನು ಸೊಲ್ಲಾಪುರವೆಂಬ ಅಭಿನವಕೈಲಾಸವಾಗಿ ಕಟ್ಟಿದವರು. ಮಹಾನ್ ಕನಸುಗಾರ ಶಿಲ್ಪಿ ಇವರು. ಕೇವಲ ಕನಸು ಕಾಣುವುದಷ್ಟೇ ಅಲ್ಲ, ಅದನ್ನು ತಕ್ಷಣವೇ ಕಾರ್ಯರೂಪಕ್ಕೆ ತಂದು ಆದರ್ಶಗಳಿಗೆ ವಾಸ್ತವತೆಯ ಸ್ಪರ್ಷ ನೀಡಿದವರು. 'ಶಿವಯೋಗಿಯ ಶರೀರಂ ವೃಥಾ ಸಮೆಯಲಾಗದು, ಅನುಗೊಂಬನಿತು ಕಾಯಕವನು ನಡೆಸುತಿರಬೇಕು' ಎಂಬುದು ಇವರ ಸಾಧನೆಯ ನಿತ್ಯಮಂತ್ರ. ಇಂಥ ಪವಿತ್ರ ಸಂಕಲ್ಪದಿಂದಲೇ ಸಿದ್ದರಾಮೇಶ್ವರರು ಪರಮತೆಯ ಔನ್ನತ್ಯವನ್ನು ಸಾಧಿಸಿದರು. ಹನಿಮೊಸರನ್ನು  ಮಲ್ಲಯ್ಯನಿಗೆ ಸಮರ್ಪಿಸಲಾಗದ ಏಕೈಕ ಕಾರಣದಿಂದ ಶ್ರೀಶೈಲಪರ್ವತದಲ್ಲಿ ಆತ್ಮಾಹುತಿಯನ್ನು ಮಾಡಿಕೊಳ್ಳಹೊರಟ ಬಾಲಕನನ್ನು  ಕಪಿಲಸಿದ್ಧಮಲ್ಲಿಕಾರ್ಜುನ ತನ್ನ ಮಡಿಲಿಗೆ ಆತುಕೊಂಡು ಸಂರಕ್ಷಿಸಿಕೊಂಡ  ಕಥೆಯ ಹಿಂದಿರುವುದೂ ಸಿದ್ದರಾಮರ ದೃಢಸಂಕಲ್ಪ ಮನೋಭಾವವೇ.       ಈ ಮನೋದೃಢತೆಯೇ ಬಡ ಒಕ್ಕಲಿಗರ ಮನೆಯ ಮಗನಾದ ಧೂಳಿಮಾಕಾಳನನ್ನು ಆದರ್ಶ ಶಿವಯೋಗಿಯಾಗಿ ಬೆಳೆಸಿತು. ಕೆರೆಗಳನ್ನು ಕಟ್ಟಿಸುವ, ದೇವಾಲಯಗಳನ್ನು ನಿರ್ಮಿಸುವ, ಅಗ್ರಹಾರಗಳನ್ನು ರೂಪಿಸುವ ಸಮಾಜಮುಖಿ ಚಟುವಟಿಕೆಗಳು ಅವರ ಉಸಿರಾದವು. ಸೊನ್ನಲಿಗೆಯಲ್ಲಿ ಕಪಿಲಸಿದ್ಧ ಮಲ್ಲಿ

111. ಗೊ.ರು.ಚ ಕಾವ್ಯನಾಮದ ಶರಣತೇಜಸ್ವಿ: ನಮ್ಮ ಗೊಂಡೇದಹಳ್ಳಿಯ ಗೌರವ ತಪಸ್ವಿ!

ಇಮೇಜ್
ಆತ್ಮೀಯ ಓದುಗರೇ, 111ನೆಯ ಈ ಸಂಚಿಕೆಯಲ್ಲಿ ಹಿರಿಯರೂ, ವಿದ್ವಾಂಸರು, ಜಾನಪದ ತಜ್ಞರೂ ಆದ ಡಾ. ಗೊ.ರು. ಚನ್ನಬಸಪ್ಪನವರ ಬಗ್ಗೆ ವಿಸ್ತೃತ ಬರಹವನ್ನು ಪ್ರಕಟಿಸಲು ತುಂಬ ಸಂತೋಷವೆನಿಸುತ್ತದೆ. ಶತಾಯುಷದ ಸಮೀಪದಲ್ಲಿರುವ ಈ ಹಿರಿಯರು ತಮ್ಮ ಊರಿನ ಬಗ್ಗೆ, ಜನರು, ಸಂಸ್ಕೃತಿ, ಕಲೆಗಳ ಬಗ್ಗೆ ತಳೆದಿರುವ ಅಭಿಮಾನಗಳು ಅನ್ಯಾದೃಶವಾದುದು.  ಡಾ. ಮಂಜುಳಾ ಹುಲ್ಲಹಳ್ಳಿಯವರು ಶ್ರಮವಹಿಸಿ ಅನೇಕ ಮಾಹಿತಿಗಳನ್ನು ಸಂಗ್ರಹಿಸುರುವುದರಿಂದ ಗೊ.ರು.ಚ. ರ ಬಗ್ಗೆ ಆಕರ ಲೇಖನವಾಗುವಂತಿದೆ.  ಅಜ್ಜಂಪುರ ತಾಲೂಕಿಗೆ ಸೇರಿದ "ಗೊಂಡೇದಹಳ್ಳಿಯ ಗೌರವ ತಪಸ್ವಿ"ಯ ವಿವರಗಳನ್ನು ಓದಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಇದನ್ನು ಸಾಧ್ಯವಾಗಿಸಿದ ಡಾ. ಮಂಜುಳಾ ಅವರಿಗೆ ಕೃತಜ್ಞತೆಗಳು. ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ. ------------------------------------------------------------------------------------------------------ ಗೊ.ರು.ಚ ಕಾವ್ಯನಾಮದ ಶರಣತೇಜಸ್ವಿ: ನಮ್ಮ ಗೊಂಡೇದಹಳ್ಳಿಯ ಗೌರವ ತಪಸ್ವಿ!        ಗೊಂಡೇದಹಳ್ಳಿಯ ರುದ್ರಪ್ಪ ಚನ್ನಬಸಪ್ಪ ಅವರು ನಿಮಗೆ ಗೊತ್ತೇ? ಎಂದು ಚಿಕ್ಕಮಗಳೂರಿನವರನ್ನು ಕೇಳಿ ನೋಡಿ ಊಹೂ, ಯಾರಿಗೂ ಗೊತ್ತಿಲ್ಲ. ಗೊರುಚ ಎನ್ನಿ ಸಾಕು "ಓಹ್, ನಮ್ಮ ಗೊರುಚ" ಎಂದು ಕೇಳಿದವರೆಲ್ಲ ತಲೆಯಾಡಿಸುತ್ತಾರೆ!  ಅಜ್ಜಂಪುರ ತಾಲೂಕಿನ ಪುಟ್ಟಗ್ರಾಮ ಗೊಂಡೇದಹಳ್ಳಿಯ ಗಿರಿಗೌಡ ಸ್ವಾಭಿಮಾನಕ್ಕೇ

110. ವಿಶ್ವ ರಂಗಭೂಮಿ ದಿನಾಚರಣೆ : ಅಜ್ಜಂಪುರದ ಒಂದು ನೆನಪು

ಇಮೇಜ್
  ಆತ್ಮೀಯ ಓದುಗರೇ, ಇಲ್ಲಿ ಅಜ್ಜಂಪುರದ ಹಳೆಯ ನೆನಪೊಂದನ್ನು ಮಿತ್ರ ಅಪ್ಪಾಜಿ ಜಿ.ಬಿ. ಇವರು ಸುಂದರವಾಗಿ ದಾಖಲಿಸಿದ್ದಾರೆ. ಸೂಕ್ಷ್ಮಗ್ರಾಹಿಗಳಿಗೆ ಮಾತ್ರ ಸಾಧ್ಯವಾಗುವ ಇಂಥ ಅನೇಕ ಸ್ಮರಣೆಗಳನ್ನು ಅಪ್ಪಾಜಿ ಈ ಹಿಂದೆಯೂ ನೀಡಿರುವುದುಂಟು. ಡಾ. ಶಿವರಾಮ ಕಾರಂತರು ಅಜ್ಜಂಪುರಕ್ಕೆ ಬಂದಾಗ ಅವರು ಊರಿನ ಕಲಾ ಸೇವಾ ಸಂಘದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಯಥಾರ್ಥವಾಗಿ ನೀಡಲಾಗಿದೆ. ಅಜ್ಜಂಪುರದ ಕಲಾವಿದ ಶ್ರೀ ಸಿದ್ದಪ್ಪನವರ ಬಗ್ಗೆಯೂ ನೆನಪುಗಳಿವೆ. ಅವು ಹಾಗೇ ಹಾರಿಹೋಗದಿರಲೆಂದು ಇಲ್ಲಿ ದಾಖಲಿಸಿರುವೆ.  ಡಾ. ಶಿವರಾಮ ಕಾರಂತರು, ಕಲಾವಿದ ಜಿ.ಸಿ. ಸಿದ್ದಪ್ಪನವರು. ಇಂದು ವಿಶ್ವ ರಂಗಭೂಮಿ ದಿನಾಚರಣೆ : ಅಜ್ಜಂಪುರದ ಒಂದು ನೆನಪು ಪ್ರಖ್ಯಾತ ಕಾದಂಬರಿಕಾರ, ಪ್ರಖರ ಚಿಂತಕ ಕೋಟ ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ‌ ಬಂದ ಹೊಸತರಲ್ಲಿ ನಾಡಿನಾದ್ಯಂತ ಬಿದರೆಯಿಂದ ಕೊಡಗಿನ ತನಕ ಜನರು ಸನ್ಮಾನ ಸಮಾರಂಭ ಏರ್ಪಡಿಸಿ, ಸಂಭ್ರಮಿಸಿದರು. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ನಮ್ಮೂರು ಅಜ್ಜಂಪುರದಲ್ಲಿ ಕೂಡ ಆಗ ಕಾರಂತರಿಗೆ ಸನ್ಮಾನ ನಡೆಯಿತು. ಅಜ್ಜಂಪುರದ ಹವ್ಯಾಸಿ ರಂಗ ಸಂಸ್ಥೆ ಕಲಾ ಸೇವಾ ಸಂಘದ ರಂಗಮಂದಿರದಲ್ಲಿ ಸನ್ಮಾನ. ನಮ್ಮೂರಿನ ಸಂಘಟಕರು ಪ್ರಾಸ್ತಾವಿಕ ಭಾಷಣದಲ್ಲಿ ನಮ್ಮ ಸಂಸ್ಥೆಯ ಜಗಜ್ಯೋತಿ ಬಸವೇಶ್ವರ ನಾಟಕದ ನೂರು ಪ್ರದರ್ಶನಗಳು ನಡೆದಿವೆ ಇತ್ಯಾದಿ ಅಭಿಮಾನದ ಮಾತುಗಳನ್ನು ಹೇಳಿಕೊಂಡರು. ಮೊದಲಿಗೆ ಕಲಾ ಸೇವಾ ಸಂಘದ ಹೆಸರಿನ ಜಾಡನ್ನೇ ಹಿಡಿ

109. ಜನಪ್ರಿಯ ಜಾನಪದ ದೈವ - ಅಂತರಗಟ್ಟೆಯ ಅಂತರಗಟ್ಟಮ್ಮ,

ಇಮೇಜ್
ಆತ್ಮೀಯ ಓದುಗರೇ, ಅಜ್ಜಂಪುರವು ತಾಲೂಕು ಆದ ನಂತರ, ಈ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ದೇಗುಲಗಳು, ಐತಿಹಾಸಿಕ ಸ್ಥಳಗಳನ್ನು ಈ ಬ್ಲಾಗ್ ನಲ್ಲಿ ದಾಖಲಿಸುವ ಕಾರ್ಯ ಇದೀಗ ನಡೆದಿದೆ. ನನ್ನ ಕೋರಿಕೆಯನ್ನು ಮನ್ನಿಸಿ ಚಿತ್ರ-ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವ ಎಲ್ಲ ಸಹೃದಯರಿಗೆ ನನ್ನ ವಂದನೆಗಳು. ಈ ಸಂಚಿಕೆಯಲ್ಲಿ ಈ ವರ್ಷದ ಫೆಬ್ರವರಿ 19ರಂದು ಅಜ್ಜಂಪುರ ತಾಲೂಕಿಗೆ ಸೇರಿದ ಅಂತರಗಟ್ಟೆ ಗ್ರಾಮದಲ್ಲಿ ಜರುಗಿದ ಜಾತ್ರಾ ಮಹೋತ್ಸವವು ಸಂಪನ್ನವಾಯಿತು.  ಅಂತರಗಟ್ಟೆಯ ಅಂತರಗಟ್ಟಮ್ಮನ ಜಾತ್ರೆಯ ನೆನಪು ನನ್ನನ್ನು ಆರು ದಶಕಗಳ ಹಿಂದಕ್ಕೆ ಕರೆದೊಯ್ದಿತು. ಆಗಿನ ಬಸ್ ಸ್ಟಾಂಡ್ ಸಮೀಪದಲ್ಲಿ ನಿಂತು ವೇಗವಾಗಿ ಸಾಗುತ್ತಿದ್ದ ಪಾನಕ ತುಂಬಿದ ಅಲಂಕೃತ ಎತ್ತಿನ ಗಾಡಿಗಳನ್ನು ಎಣಿಸುತ್ತಿದ್ದುದೇ ಒಂದು ಸವಿ ನೆನಪು. ಈಗಲೂ ಆ ಸಂಪ್ರದಾಯ ಮುಂದುವರೆದಿದೆಯಾದರೂ, ಎತ್ತಿನ ಗಾಡಿಗಳ ಭರಾಟೆಯು ಕಾಲಕ್ರಮದಲ್ಲಿ ಕಡಿಮೆಯಾದಂತಿದೆ. ಸುಮಾರು ಹದಿನೈದು ವರ್ಷಗಳ ಹಿಂದೆ ದೇಗುಲದಲ್ಲಿದ್ದ ಮೂಲಮೂರ್ತಿಯು ಭಿನ್ನವಾಗಿಯಿತೆಂಬ ಕಾರಣಕ್ಕಾಗಿ, ನೂತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಹಳೆಯ ವಿಗ್ರಹವನ್ನು ಕೆರೆಪಾಲು ಮಾಡುವ ಸಂಪ್ರದಾಯ ಹಿಂದಿತ್ತು. ಈಗಿನವರು ಹಾಗೆ ಮಾಡದೇ ಅದನ್ನು ಒಂದೆಡೆ ಸಂರಕ್ಷಿಸಿ, ಸುಸ್ಥಿತಿಯಲ್ಲಿ ಇಟ್ಟಿರುವರು. ಇದು ನಿಜಕ್ಕೂ ಉತ್ತಮ ಬೆಳವಣಿಗೆಯೇ ಸರಿ.  ದೇವಾಲಯದ ಆವರಣದಲ್ಲಿ ಅಂತರಘಟ್ಟಮ್ಮನ ತಂಗಿ ಮಾತಂಗಮ್ಮನ ದೇಗುಲವಿದೆ. ಪ್ರಾಚೀನ ದೀಪಸ್ಥಂಬ ಮತ್ತು

108. ಭಾರತದಲ್ಲಿ ಬೇರುಗಳು, ಆಫ್ರಿಕಾದಲ್ಲಿ ಬೆಳವಣಿಗೆ

ಇಮೇಜ್
ಆತ್ಮೀಯ ಓದುಗರೇ, ಅಜ್ಜಂಪುರವು ತಾಲೂಕು ಆದ ನಂತರ ಈ ಬ್ಲಾಗ್ ನಲ್ಲಿ ಪ್ರಕಟವಾಗುತ್ತಿರುವ ಮೊದಲ ಲೇಖನವಿದು. ಈಗ ವ್ಯಾಪ್ತಿಯು ಸಹಜವಾಗಿಯೇ ಹೆಚ್ಚಾಗಿರುವುದರಿಂದ, ತಾಲೂಕಿಗೆ ಸೇರಿದ ಗ್ರಾಮಗಳಲ್ಲಿನ ಪ್ರತಿಭಾನ್ವಿತರನ್ನು, ಪ್ರಾಚೀನ ಸ್ಮಾರಕಗಳು, ದೇವಾಲಯಗಳ ಬಗ್ಗೆ ಪ್ರಕಟಣೆಗೆ ಹೆಚ್ಚಿನ ಅವಕಾಶ ಒದಗಿದೆ. ಹೀಗಾಗಿ ಮುಂದಿನ ಸಂಚಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಲಾಗುವುದು. ಇದಕ್ಕೆ ಓದುಗರು ಮಾಹಿತಿ, ಚಿತ್ರಗಳನ್ನು ನೀಡಿ, ಸಹಕರಿಸಬೇಕೆಂದು ವಿನಂತಿಸುತ್ತೇನೆ. ಭಾರತದಲ್ಲಿ ಬೇರುಗಳು, ಆಫ್ರಿಕಾದಲ್ಲಿ ಬೆಳವಣಿಗೆ (Roots in India, Growth in Africa) ಶೀರ್ಷಿಕೆಯೇ ಈ ಕೃತಿಯ ಹರಹನ್ನು ತೋರುವಂತಿದೆ. ನನ್ನ ಮಿತ್ರ ಎನ್. ಎಸ್. ಸ್ವಾಮಿ, ಈ ಪುಸ್ತಕವನ್ನು ನನಗೆ ನೀಡಿ ಬಹಳ ದಿನಗಳೇ ಆಗಿದ್ದವು. ಅದನ್ನು ಓದಿ, ಆ ಬಗ್ಗೆ ಬರೆಯುವ ಆಲೋಚನೆ ಇದ್ದಿತಾದರೂ, ಅದು ಸಾಧ್ಯವಾಗಿರಲಿಲ್ಲ. ಇಂದು ಫೇಸ್ ಬುಕ್ ನ ಪುಟ ತೆರೆದಾಗ, ಇದರ ಬಗ್ಗೆ ಗೆಳೆಯ ಜಿ.ಬಿ. ಅಪ್ಪಾಜಿ, ಇದರ ಅವಲೋಕನವನ್ನು ಪ್ರಕಟಿಸಿರುವುದು ಕಾಣಿಸಿತು. ಯಾವ ಪರಿಷ್ಕಾರಗಳಿಲ್ಲದೇ ಆ ಲೇಖನವನ್ನು ಇಲ್ಲಿಯೂ ಪ್ರಕಟಿಸಿದ್ದೇನೆ. ಅವರ ಸಹಕಾರಕ್ಕೆ ವಂದನೆಗಳು. - ಶಂಕರ ಅಜ್ಜಂಪುರ ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ --------------------------------------------------------------------------------------------------------------- ಪುಸ್ತಕ ಪರಿಚಯ - ಅಪೂರ್ವ ಅಜ್ಜಂಪು