ಪೋಸ್ಟ್‌ಗಳು

ಏಪ್ರಿಲ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

85. ಅಜ್ಜಂಪುರ ರಾಮರಾವ್

ಇಮೇಜ್
ಶ್ರೀ ಎ. ರಾಮರಾವ್ ರೊಂದಿಗೆ ಶಂಕರ ಅಜ್ಜಂಪುರ ಇವರನ್ನು ಅಜ್ಜಂಪುರದ ಪ್ರೌಢಶಾಲೆಯ ಬಗ್ಗೆ ಬರೆದಿರುವ ಲೇಖನ ನಮ್ಮ ಅಧ್ಯಾಪಕರು ಮಾಲಿಕೆಯಲ್ಲೇ ಸ್ಮರಿಸಬೇಕಿತ್ತಾದರೂ, ಮಾಹಿತಿಗಳ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ. 1960ರ ರಾಮರಾಯರಿಗೂ, ಈಗಿರುವ ಅವರ ಚಹರೆಗೂ ಅಜಗಜಾಂತರ ವ್ಯತ್ಯಾಸವಾದರೂ, ಆಗಿನ ವಿದ್ಯಾರ್ಥಿಗಳಾದ ನಮ್ಮ ಕಣ್ಣಲ್ಲಿ ಅವರ ದೊಡ್ಡ ಮೀಸೆ, ಎತ್ತರದ ನಿಲುವುಗಳೇ ಸ್ಥಾಯಿಯಾಗಿ ನಿಂತಿವೆ. ನಾನು ಅಜ್ಜಂಪುರವನ್ನು 1968-69ರಲ್ಲಿ ಬಿಟ್ಟ ನಂತರ ಅವರನ್ನು ಭೇಟಿಯಾಗುವುದು ಸಾಧ್ಯವಾಗಲೇ ಇಲ್ಲ. ಇಷ್ಟಾಗಿ ಅವರು ಬೆಂಗಳೂರಿನಲ್ಲೇ ಇರುತ್ತಿದ್ದರೂ, ಹೆಚ್ಚಿನ ವಿವರಗಳಾಗಲೀ, ಸಂದರ್ಭಗಳಾಗಲೀ ಒದಗದ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಒಂದೊಮ್ಮೆ ಫೇಸ್ ಬುಕ್ ನೋಡುತ್ತಿರುವಾಗ ಅಲ್ಲಿ ಕಂಡು ಬಂದ ಹೆಸರು ಮೇಘನಾ ಅಜ್ಜಂಪುರ ಎಂದಿತ್ತು. ಅಜ್ಜಂಪುರವೆಂಬ ಉಲ್ಲೇಖ ಎಲ್ಲಿ ಕಂಡುಬಂದರೂ ಅದನ್ನು ಅನುಸರಿಸಿ ಹೋಗಿ, ಅವರು ಯಾರೆಂಬುದನ್ನು ತಿಳಿಯುವ ಉಮೇದಿನಿಂದಾಗಿಯೇ ಇಷ್ಟು ಲೇಖನಗಳನ್ನು ಬರೆಯಲು, ಬರೆಸಲು ಸಾಧ್ಯವಾಯಿತು. ಅದರಂತೆ ನಾನು ಆ ಹೆಸರನ್ನು ಅನುಸರಿಸಿ ಹೋದಾಗ ಅಮೆರಿಕಾದಲ್ಲಿರುವ ಮೇಘನಾ ಎ.ಆರ್.ಆರ್. ಎಂದೇ ವಿದ್ಯಾರ್ಥಿವೃಂದದಲ್ಲಿ ಖ್ಯಾತರಾಗಿದ್ದ ನಮ್ಮ ಉಪಾಧ್ಯಾಯರಾಗಿದ್ದ ಎ. ರಾಮರಾಯರ ಪುತ್ರಿ ಎಂದು ತಿಳಿಯಿತು.  ನಂತರ ಅವರಿಂದ ಫೋನ್ ನಂಬರು ತಿಳಿದು ರಾಮರಾಯರೊಂದಿಗೆ ಸಾಧಿಸಿದ ಸಂಪರ್ಕ ಅವರನ್ನು ಇನ್ನಷ್ಟು ಹತ್ತಿರ ತಂದಿತು. ಕಳೆ