ಪೋಸ್ಟ್‌ಗಳು

ಆಗಸ್ಟ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

ಇಮೇಜ್
ಅಜ್ಜಂಪುರದ ಇತಿಹಾಸದಲ್ಲಿ ಯಾರೂ ಮರೆಯಲಾರದ, ಮರೆಯಬಾರದ ಹೆಸರೆಂದರೆ ಶ್ರೀ ಸುಬ್ರಹ್ಮಣ್ಯ ಶೆಟ್ಟರದು.ಶ್ರೀಯುತ ಎಸ್. ಸುಬ್ರಹ್ಮಣ್ಯ ಶೆಟ್ಟರು ಹುಟ್ಟಿದ್ದು 2.2.1910. ಕಳೆದ ವರ್ಷವೇ ಅವರ ಶತಮಾನೋತ್ಸವ ವರ್ಷ ಆಚರಿಸಲ್ಪಟ್ಟಿತು. ಅವರು ನಿಧನರಾದುದು 12.06.1973 ರಂದು. ಕುಳ್ಳು ಆಕೃತಿ, ಸದಾ ಖಾದಿಧಾರಿ, ತಲೆಯ ಮೇಲೊಂದು ಗಾಂಧಿ ಟೋಪಿ. ಮರೆಯಲಾಗದ ಮಂದಹಾಸ. ಸದಾ ಚಟುವಟಿಕೆಯ, ಸಾಮಾಜಿಕ ಚಿಂತನೆಯ ಕಳಕಳಿಯುಳ್ಳ ಅವರಂಥ ಹಿರಿಯರು ಸರ್ವದಾ ಸ್ಮರಣೀಯರು. ವರ್ತಕರಾಗಿ, ಸಮಾಜ ಸುಧಾರಕರಾಗಿ, ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದ ಅವರ ಜೀವನ ತೆರೆದಿಟ್ಟ ಪುಸ್ತಕದಂತಿತ್ತು. ಅಜ್ಜಂಪುರದ ಸಾರ್ವಜನಿಕ ಜೀವನದಲ್ಲಿ ತಾವು ನಂಬಿದ ಮೌಲ್ಯಗಳನ್ನು ಯಾವ ಅಬ್ಬರ-ಆವುಟಗಳಿಲ್ಲದೆ ಜನರಲ್ಲಿ ಬಿತ್ತಿಹೋದ ಅವರ ಶತಮಾನೋತ್ಸವದ ಸಂದರ್ಭದಲ್ಲಿ  ಶ್ರೀ ಸುಬ್ರಹ್ಮಣ್ಯ ಶೆಟ್ಟರನ್ನು ಗೆಳೆಯ ಮಂಜುನಾಥ ಅಜ್ಜಂಪುರ ನೆನಪಿಸಿಕೊಂಡಿದ್ದಾರೆ. ಅವರ ಬರಹ ಇಲ್ಲಿದೆ, ನಿಮಗಾಗಿ. ನಾವೆಲ್ಲ ಚಿಕ್ಕವರಿದ್ದಾಗ, ನಾವು ಯಾವ ಊರಿಗೇ ಹೋಗಲಿ, ಅಜ್ಜಂಪುರ ಎಂದೊಡನೆ, ಜನ ಶಿವಾನಂದಾಶ್ರಮವನ್ನು, ಕಲಾ ಸೇವಾ ಸಂಘವನ್ನು, ಸುಬ್ರಹ್ಮಣ್ಯ ಶೆಟ್ಟರನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಶೆಟ್ಟರ ವ್ಯಕ್ತಿತ್ವವೇ ಅಂಥದು. ಊರಿನ ಜನಸಂಖ್ಯೆಯಲ್ಲಿ ಒಂದೆರಡು ಶತಾಂಶಗಳ ಪ್ರಾತಿನಿಧ್ಯವೂ ಇರದ, ಇಂದಿನ ಪರಿಭಾಷೆಯಲ್ಲಿ ಮೈನಾರಿಟಿ ಕಮ್ಯುನಿಟಿ ಎನ್ನಬಹುದಾದ ವ್ಯಾಪಾರಿ ಸಮುದಾಯದಲ್ಲಿ ಹುಟ್ಟ

03. ಇವರು ನಮ್ಮ ಹಿರಿಯರು

ಇಮೇಜ್
ಆತ್ಮೀಯರೇ, ಈ ಮಾಲಿಕೆಯಲ್ಲಿ ಎರಡನೇ ಕಂತಿನ ಲೇಖನ ಇಲ್ಲಿದೆ. ಇದೇ ರೀತಿ ನಿಮಗೆ ಪರಿಚಯವಿರುವ ಅಜ್ಜಂಪುರದ ಹಿರಿಯರ ಬಗೆಗೆ ಬರೆದು ಕಳಿಸಲು ಕೋರುತ್ತೇನೆ. ಇದರೊಂದಿಗೆ ಚಿತ್ರಗಳೂ ಇರಲಿ.   ಶ್ರೀ ಆರ್. ಕೃಷ್ಣಭಟ್ಟರು ಆರ್ಕೆ ಎಂದೇ ಜನಪ್ರಿಯರಾಗಿದ್ದ ಶ್ರೀ ಆರ್. ಕೃಷ್ಣಭಟ್ಟರು ಅಜ್ಜಂಪುರದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಅವರಿಗೆ ಕನ್ನಡದಂತೆಯೇ ಸಂಸ್ಕೃತದಲ್ಲೂ ಪ್ರೌಢಿಮೆಯಿತ್ತು. ಉತ್ತಮ ವೇದವಿದರಾಗಿದ್ದರು.  ತಲೆಯ ಮೇಲೆ ರುಮಾಲು, ಕಚ್ಚೆ ಪಂಚೆ, ಕೈಯಲ್ಲೊಂದು ಕೊಡೆ ಹಿಡಿದು ಗಂಭೀರವದನರಾಗಿ ಶಾಲೆಗೆ ಹೋಗುತ್ತಿದ್ದ ದೃಶ್ಯ ನೆನಪಿಗೆ ಬರುತ್ತದೆ. ತಲೆಗೆ ಪೇಟ ಧರಿಸುತ್ತಿದ್ದ ಸಂಪ್ರದಾಯಕ್ಕೆ ಬಹುಶಃ ಅಜ್ಜಂಪುರದ ಕೊನೆಯ ಪ್ರತಿನಿಧಿ ಎಂದುಕೊಳ್ಳುತ್ತೇನೆ. ದುರಾದೃಷ್ಟವೆಂದರೆ ಆಗೆಲ್ಲ ಕನ್ನಡಕ್ಕೆಂದೇ ಪರಿಣತರಾದವರು ಇರುತ್ತಿದ್ದರೂ, ಅವರ ಜ್ಞಾನವನ್ನು ಹಂಚಿಕೊಳ್ಳಲು , ಹರಡಲು ಬೇಕಿದ್ದ ವಾತಾವರಣ ಆಗ ಇರಲಿಲ್ಲ. ಈಗೆಲ್ಲ ಕನ್ನಡದ ಆಭಿಮಾನದ ಮಾತನಾಡುತ್ತೇವೆ. ಆದರೆ ಹಾಗೆ ಮಾಡದೆಯೂ ಕನ್ನಡದ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡಿದವರಲ್ಲಿ ಆರ್ಕೆ ಕೂಡ ಒಬ್ಬರು.   * * * * * * * ಶ್ರೀ ಕೋಟೆ ಅನಂತರಾಯರು ಕೋಟೆ ಆಂಜನೇಯ ದೇವಾಲಯದ ಅರ್ಚಕರಾಗಿದ್ದ ಶ್ರೀ ಕೋಟೆ ಅನಂತರಾಯರ ಹೆಸರಿನಲ್ಲಿ ಕೋಟೆಯಿದೆಯಾದರೂ ಅವರು ಇದ್ದದ್ದು ಪೇಟೆಯಲ್ಲಿ. ಬ್ರಾಹ್ಮಣ್ಯ, ಪೂಜೆ, ಆಚರಣೆಗಳಲ್ಲಿ ತುಂಬ ಶ್ರದ್ಧಾಳು. ಕೆಂಪು ಮೈಬಣ