ಪೋಸ್ಟ್‌ಗಳು

ನವೆಂಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಭಿಜಾತ ಪ್ರತಿಭೆಯ ರಂಗಕರ್ಮಿ : ಮಹಾವೀರ ಜೈನ್

ಇಮೇಜ್
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು. ಲೇಖನ : ಅಪೂರ್ವ ಚಿತ್ರಗಳು : ಶಂಕರ ಅಜ್ಜಂಪುರ ಅಜ್ಜಂಪುರದಲ್ಲಿ ಹಲವು ಜಾತಿ-ವಿಜಾತಿಗಳ ಸಮುದಾಯಗಳಿವೆ. ಪ್ರಾತಿನಿಧ್ಯದ ವಿಷಯಕ್ಕೆ ಬಂದರೆ ಅವರು ತಮ್ಮ ಸಾಧನೆಗಳಿಂದಲೇ ಮೇಲೆ ಬಂದವರು. ಅಂಥ ಹಲವಾರು ಮಹನೀಯರನ್ನು ಈಗಾಗಲೇ ಬ್ಲಾಗ್ ನ ಹಲವು ಲೇಖನಗಳಲ್ಲಿ ಗಮನಿಸಿರುವಿರಿ. ವಿಶೇಷವೆಂದರೆ ಇಲ್ಲಿನ ಮಹಾವೀರ ಜೈನ್ ಅಜ್ಜಂಪುರದ ಏಕಮಾತ್ರ ಜೈನ ಸಮುದಾಯದ ಕುಟುಂಬದ ಪ್ರಮುಖ. ಆದರೆ ಅವರೆಂದೂ ತಮ್ಮ ಧರ್ಮದೊಂದಿಗಾಗಲೀ , ಸಮುದಾಯದೊಂದಿಗಾಗಲೀ ತಮ್ಮನ್ನು ಗುರುತಿಸಿಕೊಂಡವರಲ್ಲ. ಊರಿನ ಸಂಸ್ಕೃತಿ , ಆಚಾರ -ವಿಚಾರ , ವ್ಯವಹಾರಗಳಲ್ಲಿ ಸಮೀಚೀನವಾಗಿ ಬೆರೆತುಹೋಗಿದ್ದಾರೆ. ಹಾಗಾಗಿ ಅವರ ಹೆಸರನ್ನು ಉಲ್ಲೇಖಿಸುವಾಗ ಮಾತ್ರ ಮಹಾವೀರ ಜೈನ್ ಎಂದು ಬರೆಯಬೇಕಲ್ಲದೆ , ಉಳಿದಂತೆ ಅವರು ಬರಿಯ ಮಹಾವೀರ. ಜೀವನ ಸಂಗ್ರಾಮದಲ್ಲೂ ಆತ ಮಹಾವೀರನೇ ಸರಿ. ಏಕೆಂದರೆ ಜೀವನಕ್ಕೆಂದು ಯಾವುದೇ ನಿರ್ದಿಷ್ಟ ವೃತ್ತಿಯನ್ನು ಹಿಡಿಯದೇ , ಆಯಾ ವೃತ್ತಿಗಳು ಕೊಟ್ಟಷ್ಟು ಅನ್ನವನ್ನು ಸಂಪಾದಿಸಿ , ಕಲಾರಾಧಕರಾಗಿ ಮುಂದುವರೆಯುತ್ತಿರುವರು. ಇಂದಿನ ದಿನಗಳಲ್ಲಿ ಅಂಥ ಮೌಲ್ಯಗಳಿಗೆ ಗೌರವ ಇಲ್ಲದಿರಬಹುದು. ಆದರೆ ಕಲೆಯನ್ನು ತಮ್ಮ ಅಭಿವ್ಯಕ್ತಿಯನ್ನಾಗಿಸಿಕೊಂಡು , ಅದರ ಮೂಲಕ ಹಂತ ಹಂತವಾಗಿ ಬೆಳೆದು ನಾಟಕ ಕ್ಷೇತ್ರದ ಅಂತರಾಳವನ್ನು ಬಿಡಿಸಿಡುವಷ್ಟು ಅನುಭವವನ್ನು ಹೊಂದಿದ್ದಾರೆ. ಅವರ ರಂಗ ಪ್ರ