ಪೋಸ್ಟ್‌ಗಳು

ಜನವರಿ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಇಮೇಜ್
2018 ಓದುಗರೆಲ್ಲರಿಗೂ ಹೊಸವರ್ಷದ ಶುಭಾಶಯಗಳು ಶ್ರೀ ಎ. ವೆಂಕಟೇಶಮೂರ್ತಿಗಳು ಅತ್ಯುತ್ತಮ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಳೆದ ಶತಮಾನದ 60-70ರ ದಶಕಗಳಲ್ಲಿ ತುಂಬ ಜನಪ್ರಿಯರು, ಆದರಣೀಯರೂ ಆಗಿದ್ದರು. ಅಜ್ಜಂಪುರದ ಶೈಕ್ಷಣಿಕ ಇತಿಹಾಸದ ಆರಂಭದ ದಿನಗಳಲ್ಲಿ ಶ್ರಮವಹಿಸಿ ದುಡಿದವರು.  ಉತ್ತಮ ಕಾರ್ಯಗಳನ್ನು ಮಾಡಿದವರನ್ನು ಸ್ಮರಿಸುವುದೇ ಅಪರೂಪ. ಅಂಥದರಲ್ಲಿ ಅವರ ನಿಧನಾನಂತರವೂ  ಸ್ಮರಣಸಂಚಿಕೆಯಲ್ಲಿ  ನೆನಪಿಸಿಕೊಂಡು ತಮ್ಮ ಕೃತಜ್ಞತೆಯನ್ನು ಹೇಳಿರುವುದನ್ನು ದಾಖಲಿಸಿರುವುದು ಅವರ ವ್ಯಕ್ತಿತ್ವದ ಪ್ರಭಾವವನ್ನು ಎತ್ತಿ ತೋರುವಂತಿದೆ.   ಇಂಥ ಸ್ಮರಣೀಯ ಹಿರಿಯರನ್ನು ಕುರಿತು, ನರಸಿಂಹರಾಜಪುರದ ಅವರ ವಿದ್ಯಾರ್ಥಿಗಳು ಹೊರತಂದಿರುವ ಸ್ಮರಣಸಂಚಿಕೆಯ ಪುಟವೊಂದನ್ನು ನಮ್ಮೊಂದಿಗೆ ಹಂಚಿಕೊಂಡಿರುವವರು,  ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅವರ ಪುತ್ರಿ ಶ್ರೀಮತಿ ಗಾಯತ್ರಿ ಶಿವಸ್ವಾಮಿ.   “ ಅಂತರಜಾಲದಲ್ಲಿ ಅಜ್ಜಂಪುರ ” ಬ್ಲಾಗ್ ನ ಅಜ್ಜಂಪುರದ ಹಿರಿಯರ ಕುರಿತ ಲೇಖನಗಳನ್ನು ಓದಿ ಪ್ರಭಾವಿತರಾಗಿ,  ಚಿತ್ರ-ಮಾಹಿತಿಗಳನ್ನು ಒದಗಿಸಿದ್ದಾರೆ. ನಾನು ನಮ್ಮ ಓದುಗರಲ್ಲಿ ಸದಾ ಮಾಡಿಕೊಳ್ಳುತ್ತಿದ್ದ ಮನವಿಗೆ ಓರ್ವರಾದರೂ ಸ್ಪಂದಿಸಿದರೆನ್ನುವ ಸಂತೋಷ ನನ್ನದು. ಈ ವಿವರಣೆ ಇತರರಿಗೂ ಸ್ಫೂರ್ತಿ ನೀಡಲಿ ಎಂದು ಆಶಿಸುತ್ತೇನೆ. ಶಂಕರ ಅಜ್ಜಂಪುರ ಸಂಪಾದಕ, “ ಅಂತರಜಾಲದಲ್ಲಿ ಅಜ್ಜಂಪುರ ” ದೂರವಾಣಿ – 99866 72484 ಈ-ಮೇಲ್ –