ಪೋಸ್ಟ್‌ಗಳು

ಜನವರಿ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶ್ರೀ ವಿಠಲ ರುಕ್ಮಾಯೀ ಮಂದಿರ, ಅಜ್ಜಂಪುರ

ಇಮೇಜ್
                                        ಎಲ್ಲರಿಗೂ 2017 ನೂತನ ವರ್ಷದ ಶುಭಾಶಯಗಳು ಅಜ್ಜಂಪುರದ ದೇವಾಲಯಗಳ ಬಗ್ಗೆ ಲೇಖನಗಳು ಆಗೀಗ ಪ್ರಕಟವಾಗುತ್ತಿದೆಯಷ್ಟೆ. ನಾನು ಅಜ್ಜಂಪುರಕ್ಕೆ ಬಂದಾಗಲೆಲ್ಲ, ಒಂದಲ್ಲ ಒಂದು ದೇವಾಲಯಗಳ ಬಗ್ಗೆ ಮಾಹಿತಿ ಪಡೆದು ಲೇಖನಗಳನ್ನು ಪ್ರಕಟಿಸುವುದು ವಾಡಿಕೆ. ಇತ್ತೀಚಿನ ನನ್ನ ಭೇಟಿಯಲ್ಲಿ ಅಜ್ಜಂಪುರದಲ್ಲಿರುವ ನನ್ನ ಬಾಲ್ಯ ಮಿತ್ರ, ಬಟ್ಟೆಗಳ ವರ್ತಕ ಶ್ರೀ ಮೈಲಾರಿ ರಾವ್ ಅವರನ್ನು ಅವರ ಸಮುದಾಯದ ದೇವಾಲಯದ ಕುರಿತು ಮಾಹಿತಿಗಳಿಗೆಂದು ಕೇಳಿದಾಗ, ವಿವರಗಳನ್ನು ನೀಡಿದರು. ಇದನ್ನು ಆಧರಿಸಿದ ಲೇಖನ ಇಲ್ಲಿದೆ. ಇದಕ್ಕೆ ಚಿತ್ರಗಳ ಅವಶ್ಯಕತೆಯೆಂದಾಗ ಎಂದಿನಂತೆ ಮಿತ್ರ ಅಪೂರ್ವ ಬಸು ನೆರವಿಗೆ ಬಂದರು. ತಮ್ಮ ಸಂಗ್ರಹದಿಂದ ಚಿತ್ರಗಳನ್ನು ಕಳಿಸಿದರು.  ಇನ್ನೂ ಹಲವು ಸಮುದಾಯಗಳ ದೇವಾಲಯ, ಕಲ್ಯಾಣ ಮಂಟಪ ಮುಂತಾದವುಗಳ ಬಗ್ಗೆ ಬರೆಯುವುದಿದೆ. ಕಂಪ್ಯೂಟರ್ ತಿಳುವಳಿಕೆಯುಳ್ಳ ನಮ್ಮೂರ ಯುವಜನರು ಈ ಲೇಖನಗಳನ್ನು ತಮ್ಮ ಬಿಡುವಿನ ವೇಳೆಯಲ್ಲಿ ಮನೆಯಲ್ಲಿನ ಹಿರಿಯರಿಗೆ ತೋರಿಸುವುದರಿಂದ, ಅವರ ತಮ್ಮ ನೆನಪುಗಳನ್ನು ಹಂಚಿಕೊಳ್ಳಲು ಸಹಾಯಕವಾಗುತ್ತದೆ. ಇಂಥದೊಂದು ಕೆಲಸವನ್ನು ನಮ್ಮ ಯುವಜನತೆ ಮಾಡಲಿ ಎನ್ನುವುದು ಆಶಯ. -ಶಂಕರ ಅಜ್ಜಂಪುರ ದೂರವಾಣಿ - 99866 72483 ------------------------------------------------------------------------------------------------------------------