ಪೋಸ್ಟ್‌ಗಳು

ಫೆಬ್ರವರಿ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

23. ಈರ್ವರು ಹಿರಿಯರು

ಇಮೇಜ್
ಜೋಗಿ ತಿಮ್ಮಯ್ಯ ೧೯೩೦-೪೦ರ   ದಶಕದಲ್ಲಿ   ಅಜ್ಜಂಪುರ ಜೋಗಿ ತಿಮ್ಮಯ್ಯನವರು ಧನಿಕರು. ಲೇವಾದೇವಿಯ ವ್ಯವಹಾರ ಇಟ್ಟಕೊಂಡಿದ್ದರು. ಪ್ರತಿ ವಾರಕ್ಕೆ ನೂರು ರೂಪಾಯಿಗಳಿಗೆ ಹತ್ತು ರೂಪಾಯಿ ಬಡ್ಡಿ ಪಡೆಯುತ್ತಿದ್ದರು. ಆದರೆ ಅದೆಲ್ಲಕ್ಕೂ ಕಾಗದ ಪತ್ರಗಳ ಜಂಜಾಟವಿರುತ್ತಿರಲಿಲ್ಲ. ಕೇವಲ ನಂಬಿಕೆ , ವಿಶ್ವಾಸಗಳೇ ಆಧಾರ. ವ್ಯಕ್ತಿಯ ಪ್ರಾಮಾಣಿಕತೆಯನ್ನು ಸರಿಯಾಗಿ ಗುರುತಿಸಿ ಅವರೊಡನೆ ವ್ಯವಹರಿಸುತ್ತಿದ್ದರು.  ಅವರನ್ನು ರಾಮೇ ತಿಮ್ಮಣ್ಣನೆಂದೂ ಕರೆಯುತ್ತಿದ್ದರು. ಹೆಚ್ಚು ವಿದ್ಯಾಭ್ಯಾಸ ಮಾಡಿರದ ತಿಮ್ಮಯ್ಯನವರಲ್ಲಿ ಜೀವಕಾರುಣ್ಯ ಹೆಚ್ಚಾಗಿತ್ತು. ಎತ್ತುಗಳು , ಹಸುಗಳು ರೈತರ ಜೀವನಾಡಿಯೆಂದು ತಿಳಿದಿದ್ದರು. ಅವುಗಳ ಆರೋಗ್ಯ ಚೆನ್ನಾಗಿದ್ದರೆ , ರೈತನ ಜೀವನವೂ ಹಸನಾಗಿರುತ್ತದೆಂಬುದು ಅವರ ನಂಬಿಕೆ. ಇದಕ್ಕೆಂದೇ ಅಜ್ಜಂಪುರದಲ್ಲಿ ಪಶುವೈದ್ಯ ಶಾಲೆಯನ್ನು ನಿರ್ಮಿಸಲು ಮುಂದಾಗಿ , ಅದರಲ್ಲಿ ಯಶಸ್ವಿಯಾದರು. ಇತ್ತೀಚೆಗೆ ಒಂದು ಚಿತ್ರವನ್ನು ನೋಡಿದೆ. ಅದರಲ್ಲಿ ಜೋಗಿ ತಿಮ್ಮಯ್ಯನವರು ,  ಸುಬ್ರಹ್ಮಣ್ಯಶೆಟ್ಟರು   ಮತ್ತು    ಶೆಟ್ರು ಸಿದ್ದಪ್ಪನವರ   ಭಾವಚಿತ್ರಗಳನ್ನು ಒಟ್ಟಾಗಿ ಜೋಡಿಸಿಟ್ಟಿರುವ ಅರ್ಥಪೂರ್ಣ ಚಿತ್ರವದು. ಅಜ್ಜಂಪುರದ ಬೆಳವಣಿಗೆಗೆ ಪ್ರತ್ಯಕ್ಷ-ಪರೋಕ್ಷವಾಗಿ ನೆರವಾದ ಈ ಮಹನೀಯರನ್ನು ಇಂದಿನ ಪೀಳಿಗೆ ಸ್ಮರಿಸಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ. ಚಿತ್ರ ಕೃಪೆ :    ವೆಂಕಟೇಶ್ , ಪವಿತ್ರ ಪ್ರಿಂಟರ್ಸ್ , ಅಜ್ಜಂಪುರ.