ಪೋಸ್ಟ್‌ಗಳು

ಡಿಸೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

13. ಪಟ್ಟಣಗೆರೆ ಸೋದರರು

ಇಮೇಜ್
  ವೆಂಕಟಕೃಷ್ಣಯ್ಯ, ವೆಂಕಟರಾಮಯ್ಯ, ವೆಂಕಟೇಶಯ್ಯ ಮತ್ತು ಹಿರಿಯಣ್ಣಯ್ಯ ಪಟ್ಟಣಗೆರೆ ವೆಂಕಟದಾಸಪ್ಪ ಪಟ್ಟಣಗೆರೆ ವೆಂಕಟದಾಸಪ್ಪ ನವರು ಅಜ್ಜಂಪುರದಲ್ಲಿದ್ದವರು. ಅವರು ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ಕೆಲಸಮಾಡುತ್ತಿದ್ದವರು. ಅವರ ಪತ್ನಿ ಗೌರಮ್ಮನವರು. ವೆಂಕಟದಾಸಪ್ಪ ದಂಪತಿಗಳ ಜೀವನ ಬಡತನದಿಂದ ಕೂಡಿದ್ದಾದರೂ, ಅದೊಂದು ಕೊರತೆ ಎಂದು ಎನ್ನಿಸದಂತೆ ಬದುಕಿದರು. ಇವರನ್ನು ನಾನು ನೋಡುವಾಗ ಅವರೀರ್ವರೂ ವೃದ್ಧಾಪ್ಯ ತಲುಪಿದ್ದರು.  ಅವರಿಗೆ ೬ ಜನ ಮಕ್ಕಳು. ಅವರೆಂದರೆ ಗಂಡುಮಕ್ಕಳಾದ ವೆಂಕಟಕೃಷ್ಣಯ್ಯ, ವೆಂಕಟರಾಮಯ್ಯ, ವೆಂಕಟೇಶಯ್ಯ ಮತ್ತು ಹಿರಿಯಣ್ಣಯ್ಯ ಹಾಗೂ ಹೆಣ್ಣಮಕ್ಕಳು ವಿಶಾಲಾಕ್ಷಮ್ಮ ಮತ್ತು ರುಕ್ಮಿಣಮ್ಮ.  ಇವರೆಲ್ಲರ ಪ್ರಸ್ತಾಪವೇಕೆಂದರೆ ಇವರೆಲ್ಲರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರೂ, ಕೆಲವು ಕ್ಷೇತ್ರಗಳಲ್ಲಿ ವಿಶೇಷ ತಿಳುವಳಿಕೆ ಹೊಂದಿದ್ದವರು. ಅವರ ಸಾಧನೆಯನ್ನು ಗುರುತಿಸುವ ಕೆಲಸ ನಡೆಯಲಿಲ್ಲವಾದರೂ, ಅವರೆಲ್ಲರೂ ಮಾನವ ಪ್ರೀತಿ, ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಅಪಾರ ಅಭಿಮಾನ ಹೊಂದಿದವರು ಮತ್ತು ಜನಾನುರಾಗಿ ವ್ಯಕ್ತಿತ್ವವುಳ್ಳವರು.  ಹಿರಿಯರಾದ ವೆಂಕಟಕೃಷ್ಣಯ್ಯನವರು ತಮ್ಮ ಜೀವಿತದ ಬಹುಕಾಲವನ್ನು ಮೈಸೂರಿನಲ್ಲೇ ಕಳೆದರು. ರಾಮಾಯಣ ಮತ್ತು ಮಹಾಭಾರತಗಳೆರಡೂ ಅವರಿಗೆ ಅತ್ಯಂತ ಪ್ರಿಯವಾದ ವಿಷಯಗಳು. ಈ ಮಹಾಕಾವ್ಯಗಳ ಬಗ್ಗೆ ಅಧ್ಯಯನ ನಡೆಸಿ, ಕೈ ಬರವಣಿಗೆಯಲ್ಲಿ ತಮ್ಮ ಅಧ್ಯಯನವನ್ನು ದಾಖಲಿಸಿದರು. ಆದರೆ ಅ

12. ಅಜ್ಜಂಪುರ ಗ್ರಾಮದೇವತೆ ಕಿರಾಳಮ್ಮ - ಐತಿಹ್ಯ - ಸ್ಥಳಪುರಾಣ - ಚರಿತ್ರೆ

ಇಮೇಜ್
ಅಜ್ಜಂಪುರಕ್ಕೆ ಸಂಬಂಧಿಸಿದ ಈ ಬ್ಲಾಗ್ ಗ್ರಾಮದೇವತೆಯಿಂದಲೇ ಆರಂಭವಾಗುವಂತಿದ್ದರೆ ಔಚಿತ್ಯಪೂರ್ಣವಾಗಿರುತ್ತಿತ್ತು. ಪ್ರಸ್ತುತ ಲೇಖನವನ್ನು ಬಹಳ ಹಿಂದೆಯೇ ಗೆಳೆಯ ಮಂಜುನಾಥ ಅಜ್ಜಂಪುರ ಸಿದ್ಧಪಡಿಸಿಟ್ಟಿದ್ದರು. ಆದರೆ ಅದು ದೊರೆತದ್ದು ಈಗ.  ಆರಂಭಕ್ಕೇ ಪ್ರಕಟಿಸಬೇಕಿದ್ದ ಈ ಲೇಖನ ತಡವಾಗಿಯಾದರೂ ಪ್ರಕಟವಾಗುತ್ತಿದೆ.  ನೀವೆಲ್ಲರೂ ಗಮನಿಸಿರಬಹುದಾದಂತೆ ವಿಕಿಪೀಡಿಯಾ ನೀಡಿರುವ ಮಾಹಿತಿಯಲ್ಲಿ ಅಜ್ಜಂಪುರಕ್ಕೆ ಕೇರಳ ಎಂಬ ಹೆಸರಿತ್ತು. ಕೇರಳ, ಕಿರಾಳಿಪುರ ಇತ್ಯಾದಿ ಬದಲಾವಣೆಗಳಾಗಿ, ಈಗಿರುವ "ಅಜ್ಜಂಪುರ" ಎಂಬ ಹೆಸರು ಹೇಗೆ ಬಂದಿತೆಂಬುದರ ಬಗ್ಗೆಯೂ ಈ ಹಿಂದೆ ಅವರೇ ಬರೆದಿರುವ ಲೇಖನವಿದೆ. ಈ ವಿಷಯದ ಬಗ್ಗೆ ಇನ್ನಷ್ಟು ಐತಿಹಾಸಿಕ ಮಾಹಿತಿಗಳು ದೊರೆಯುವಂತಾದರೆ ಕಳಿಸಿಕೊಡಿ.  ಈ ಲೇಖನದ ಜತೆಯಲ್ಲಿ ನಾನು ಸಂಗ್ರಹಿಸಿದ ಕಿರಾಳಮ್ಮ ದೇವಿಯ ಈಗಿರುವ ವಿಗ್ರಹ, ಉತ್ಸವ ಮೂರ್ತಿಯ ಚಿತ್ರಗಳು, ಮಂಜುನಾಥ ಅಜ್ಜಂಪುರ ಇವರು ಇತ್ತೀಚೆಗೆ ತೆಗೆದಿರುವ ಕಿರಾಳಮ್ಮ ದೇವಾಲಯದ ಛಾಯಾಚಿತ್ರಗಳಿವೆ.                                                  ಗರ್ಭ ಗುಡಿಯಲ್ಲಿರುವ ಕಿರಾಳಮ್ಮನ ಮೂಲ ವಿಗ್ರಹ   ಕಿರಾಳಮ್ಮನ ಉತ್ಸವ ಮೂರ್ತಿ  ಅಜ್ಜಂಪುರ ಗ್ರಾಮದೇವತೆ ಕಿರಾಳಮ್ಮ ಐತಿಹ್ಯ - ಸ್ಥಳಪುರಾಣ - ಚರಿತ್ರೆ ಕರ್ನಾಟಕ ಸರಕಾರವು ಜಿಲ್ಲಾವಾರು ಗೆಜೆಟಿಯರ್ (ಗೆಜೆಟ್ ಅಲ್ಲ, ಗೆಜೆಟಿಯರ್ - ಭೂವಿವರ ಸಂಗ್ರಹ) ಪ್

11. ಭಗವದ್ಗೀತಾ ಅಧ್ವರ್ಯು

ಇಮೇಜ್
ಅಜ್ಜಂಪುರದ ಶಿವಾನಂದಾಶ್ರಮ  ಮತ್ತು  ಶ್ರೀ ಶಂಕರಾನಂದ ಸ್ವಾಮೀಜಿ   ಅಜ್ಜಂಪುರದ ಶ್ರೀ ಸತ್ಯನಾರಾಯಣ ಶೆಟ್ಟರು ಅಜ್ಜಂಪುರದಲ್ಲಿ ಪ್ರಸಿದ್ಧ ವರ್ತಕರು. ಅವರ ಸಹೋದರ ಶ್ರೀ ಸುಬ್ರಹ್ಮಣ್ಯ ಶೆಟ್ಟರನ್ನು ಹಿಂದಿನ ಸಂಚಿಕೆಗಳಲ್ಲಿ ಪರಿಚಯಿಸಲಾಗಿದೆ.  ಇವರನ್ನು ಕಳೆದ ಡಿಸೆಂಬರ್‌ನಲ್ಲಿ ಅವರ ಅಳಿಯ ಹಾಗೂ ನನ್ನ ಗೆಳೆಯ ರಮಾನಂದರ ಮನೆಯಲ್ಲಿ ಸಂದರ್ಶಿಸಿದೆ. ಅವರಿಗೆ ಈಗ ವಯಸ್ಸು ೯೦. ಅವರ ಅದ್ಭುತ ನೆನಪಿನ ಶಕ್ತಿ ಮತ್ತು ಚಟವಟಿಕೆಗಳಿಗೆ ವಯಸ್ಸು ಅಡ್ಡಿಬಂದಿಲ್ಲ.  ಅಜ್ಜಂಪುರ ಸತ್ಯನಾರಾಯಣ ಶೆಟ್ಟರು ಮತ್ತು ಶಂಕರ ಅಜ್ಜಂಪುರ  ತಮ್ಮ ಅಗಾಧ ನೆನಪಿನ ಸಂಗ್ರಹದಿಂದ ಅಜ್ಜಂಪುರದ ಶಿವಾನಂದಾಶ್ರಮದ ಇತಿಹಾಸವನ್ನು ಕೆಲವೊಮ್ಮೆ ಉತ್ಸಾಹದಿಂದ, ಕೆಲವೊಮ್ಮೆ ಅದರ ಈಗಿನ ದುಸ್ಥಿತಿಗಾಗಿ ಮರುಗಿ ಹೇಳಿರುವ ವಿವರಗಳು ಇಲ್ಲಿವೆ. ಸತ್ಯನಾರಾಯಣ ಶೆಟ್ಟರ ನೆನಪುಗಳ ನಿರಂತರ ಹರಿವಿನೊಡನೆ, ಅವರ ಸೊಗಸಾದ ಮತ್ತು ಶುದ್ಧವಾದ ಕನ್ನಡದ ನಿರೂಪಣೆಯನ್ನು ಧ್ವನಿಮುದ್ರಿಸಿಕೊಂಡು, ಅದನ್ನು ಬರಹರೂಪಕ್ಕೆ ತಂದಿರುವುದಷ್ಟೇ ನಾನು ಮಾಡಿರುವ ಕೆಲಸ.  "ಯಾರಾದರೂ ಈ ಕೆಲಸ ಮಾಡಬೇಕಿತ್ತು, ಅದನ್ನು ನೀವು ಮಾಡುತ್ತಿದ್ದೀರಿ, ಕಂಪ್ಯೂಟರಿನಲ್ಲಿ ದಾಖಲಿಸಿದ್ದು ಯಾವ ಕಾಲಕ್ಕೂ ಇರುತ್ತದೆ ಎಂದು ಹೇಳುವುದನ್ನು ಕೇಳಿದ್ದೇನೆ. ನಿಮ್ಮ ಪ್ರಯತ್ನ ಯಶಸ್ವಿಯಾಗಲಿ" ಎಂದು ತುಂಬುಹೃದಯದಿಂದ ಈ ಹಿರಿಯರು ಹರಸಿದ್ದಾರೆ.  ಈ ಲೇಖನದೊಂದಿಗೆ ಇರುವ ಚಿತ್ರಗಳನ್ನು ಗೆ

10. ವಿಶಿಷ್ಟ ವನಪಾಲಕ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ (ಭಾಗ-2)

ಇಮೇಜ್
 ಭಾಗ 2 ಅಜ್ಜಂಪುರ ಕೃಷ್ಣಸ್ವಾಮಿಗಳ ಬಗ್ಗೆ ಎರಡನೆ ಕಂತಿನ ಲೇಖನ ಇಲ್ಲಿ ಪ್ರಕಟವಾಗಿದೆ. ಈ ಸಂಚಿಕೆಯಲ್ಲಿ ಅವರ ಆತ್ಮಕಥೆ "ಬಾಳ ಹರಿವು" ಗ್ರಂಥದಿಂದ ಅಜ್ಜಂಪುರ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಸಂಬಂಧಿಸಿದಂತೆ ಇರುವ ವಿವರಗಳನ್ನು ನೀಡಲಾಗಿದೆ. ಈ ಪುಸ್ತಕವನ್ನು ಓದುತ್ತಿದ್ದರೆ , ಸರಿಸುಮಾರು , ಶತಮಾನದ ಹಿಂದಿನ ಜೀವನಶೈಲಿ ಮತ್ತು ರೂಢಿಗತ ಸಂಪ್ರದಾಯಗಳು , ಶಿಷ್ಟಾಚಾರಗಳ ಪರಿಚಯ ಇಂದಿನ ತಲೆಮಾರಿಗೆ ತಿಳಿಯುವಂತಿದೆ."ಅವರ ಭಾಷಾ ಶೈಲಿ , ನಿರೂಪಣೆಗಳನ್ನು  ಓದುಗರು ಆಸ್ವಾದಿಸುತ್ತಾರೆಂಬ ನಂಬಿಕೆ ನನ್ನದು. ನಾನು ಅವರನ್ನು ಸಂದರ್ಶಿಸಿ , ಬ್ಲಾಗ್‌ನಲ್ಲಿ ಅವರ ಬಗೆಗೆ ಲೇಖನ ಬರೆಯುತ್ತೇನೆಂದು ಹೇಳಿದಾಗ , ಅವರು " ನನ್ನ ಬಗ್ಗೆ ತಾವೇನಾದರೂ ಬರೆಯುವ ಸಂದರ್ಭವಿದ್ದರ ಅದು ಬೇಡ ಎಂಬುದೇ ನನ್ನ ಮನವಿ. ಇದನ್ನು ನಾನು ಸೌಜನ್ಯಕ್ಕಾಗಿ ಬರೆಯುತ್ತಿಲ್ಲ. ದಿಗ್ಗಜರ ಮುಂದೆ , ಸಾಮಾನ್ಯರಲ್ಲಿ ನಾನು ಹತ್ತರಲ್ಲಿ ನಾನು ಒಬ್ಬ , ಬ್ಲಾಗ್‌ನಲ್ಲಿ ಮೂಡಿಬರುವಷ್ಟು ಹಿರಿಮೆಯಿಲ್ಲ " ಎಂದು ಹೇಳಿದ್ದಲ್ಲದೆ , ಪತ್ರವನ್ನೂ ಬರೆದರು. ಹಿಂದಿನ ಸಂಚಿಕೆಯನ್ನು ಓದಿದ ಅನೇಕ ಹಿರಿಯರು ನನಗೆ ಫೋನ್ ಮಾಡಿ , ತೀರ ಅಪರೂಪದ ವ್ಯಕ್ತಿಯನ್ನು , ನಾವು ಕೇವಲ ಕೇಳಿತಿಳಿದಿದ್ದ ಮಹನೀಯರ ಬಗ್ಗೆ ಇಂಥ ಪರಿಚಯಾತ್ಮಕ ಲೇಖನ ಬರೆದುದು , ಅತ್ಯಂತ ಸಮರ್ಪಕ , ಎಂದು ತಿಳಿಸಿದರು. ಇದೀಗ ಮುಂದೆ ಓದಿ. ನಿಮ್ಮ ಪ್ರತಿಕ್ರಿಯೆಗಳನ್ನು ದಾಖಲಿಸಿ.