ಪೋಸ್ಟ್‌ಗಳು

ಮೇ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಜ್ಜಂಪುರದ ಅಧಿದೇವತೆ ಕಿರಾಳಮ್ಮ – ಐತಿಹ್ಯ ಮತ್ತು ಆಚರಣೆಗಳ ಪಕ್ಷಿನೋಟ

ಇಮೇಜ್
ಆತ್ಮೀಯ ಓದುಗರೇ, ಕಳೆದ ಶುಕ್ರವಾರ ದಿನಾಂಕ 22-04-2016ರಂದು ಅಜ್ಜಂಪುರದ ಕಿರಾಳಮ್ಮನ ಜಾತ್ರೆ, ರಥೋತ್ಸವಗಳು ಸಂಪನ್ನಗೊಂಡವು. ನಮ್ಮ ಗ್ರಾಮದೇವತೆಯ ಉತ್ಸವದ ಹಿನ್ನೆಲೆ, ಆಚರಣೆಗಳು ಮತ್ತು ಅದಕ್ಕಿರುವ ಪರಂಪರಾಗತ ಅಂಶಗಳನ್ನು ಗೆಳೆಯ ಅಪೂರ್ವ (ಅಪ್ಪಾಜಿ ಜಿ.ಬಿ.) ಇವರು ಈ ಲೇಖನದಲ್ಲಿ ದಾಖಲಿಸಿದ್ದಾರೆ. ಗ್ರಾಮದೇವತೆಯ ಪರಂಪರೆಯೆನ್ನುವುದು ಪ್ರಾಚೀನವಾದುದು. ಅಂಥ ವಿಷಯದಲ್ಲಿ ತಮಿಳು ಪರಂಪರೆಯ ಸ್ವಾಮೀಜಿಯೋರ್ವರು ತಮ್ಮ ಪ್ರತಿಷ್ಠೆಯನ್ನೋ, ನಂಬಿಕೆಯನ್ನೋ ಊರ ಜನರ ಮೇಲೆ ಹೇರಲು ಹೊರಟು ಅದು ವಿಫಲವಾದ ಪ್ರಸಂಗ ಹೇಗೆ ಪರ್ಯವಸಾನವಾಯಿತೆಂಬುದರ ವಿವರಗಳನ್ನು ಕಾಣಬಹುದು. ಅದೇ ಹೊತ್ತಿಗೆ ನಾಯಕರೆನಿಸಿಕೊಂಡವರು ತಮ್ಮ ಊರ ದೇವತೆಯ ಬಗ್ಗೆ ತಳೆದ ನಿರಭಿಮಾನದಿಂದಾಗಿ ಪೇಚಿಗೆ ಸಿಲುಕಿದ ಘಟನೆಯೂ ನಡೆಯಿತು. ಇದಕ್ಕೆ ಪೂರಕವಾಗಿ, ಈ ಬ್ಲಾಗ್ ನ ಹಿಂದಿನ ಸಂಚಿಕೆಯೊಂದರಲ್ಲಿ ಪ್ರಕಟವಾಗಿರುವ ಶ್ರೀ ಶೆಟ್ಟರ ಸಿದ್ಧಪ್ಪನವರ ಪತ್ರವನ್ನೂ ನೆನಪಿಸಿಕೊಳ್ಳಬಹುದು. ಅಲ್ಲಿ ಅವರ ಹಠ ಮತ್ತು ಸ್ವಾಭಿಮಾನಗಳು ಪ್ರಕಟವಾಗಿವೆಯಾದರೆ, ಈ ಪ್ರಸಂಗದಲ್ಲಿ ಪರಂಪರೆಯನ್ನು ಕೆದಕಲು ಹೋಗಿದ್ದಕ್ಕೆ ಉಂಟಾದ ಪರಿಣಾಮಗಳು ಗೋಚರಿಸುತ್ತವೆ. ಇವೆಲ್ಲ ಚಿಕ್ಕ ಸಂಗತಿಗಳೇ ಇರಬಹುದು. ಆದರೆ ಒಂದು ಊರಿನ ದೈವದ ವಿಷಯದಲ್ಲಿ ತಳೆಯುವ ಸಾರ್ವಜನಿಕ ನಿಲುವುಗಳು, ಜನರ ಹಿತಾಸಕ್ತಿಗೆ ಪೂರಕವಾಗಿರುವುದು ಅತ್ಯವಶ್ಯ ಎನ್ನುವುದನ್ನಂತೂ ಈ ಘಟನಾವಳಿಗಳು ತಿಳಿಸುತ್ತವೆ. ಜಾತ್ರೆಯ ದೃಶ್ಯಗಳು, ಸಿಡಿ