77. ಕ್ವಿಟ್ ಇಂಡಿಯಾ ಚಳವಳಿ - ಕಮ್ಮತಿಗೆ ಚನ್ನಬಸಪ್ಪನವರ ನೆನಪುಗಳು
ಇವರು ನಮ್ಮ ಊರಿನ ಹಿರಿಯರು. ಕಮ್ಮತಿಗೆ ಚನ್ನಬಸಪ್ಪ. ವೃತ್ತಿಯಿಂದ ಕಿರಾಣಿ ವ್ಯಾಪಾರದಾರರಾಗಿದ್ದರೂ, ಸಾಹಿತ್ಯ, ವಿಚಾರವಾದ, ಧಾರ್ಮಿಕ ನಿಷ್ಠೆ, ವೈಜ್ಞಾನಿಕ ವಿಚಾರಧಾರೆ ಮುಂತಾಗಿ ಅವರ ಆಸಕ್ತಿಗಳು ಹಲವು ಕಡೆ ಹಂಚಿಹೋಗಿದ್ದವು. ಹೆಚ್ಚಿನ ವಿದ್ಯಾಭ್ಯಾಸವಿಲ್ಲದಿದ್ದರೂ, ವೈಚಾರಿಕವಾಗಿ ಚಿಂತಿಸಿ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ನಮೂದಿಸುತ್ತಿದ್ದ ಚನ್ನಬಸಪ್ಪ ಕೇವಲ ತಮ್ಮ ಸಮುದಾಯದಲ್ಲಿ ಮಾತ್ರ ಪ್ರಸಿದ್ಧರಾಗಿರದೇ, ಇಡೀ ಊರಿನ ಗಮನ ಸೆಳೆದವರು. ಈ ಹಿಂದೆ ಪ್ರಕಟಿಸಿರುವ ಗೌ.ರು. ಓಂಕಾರಯ್ಯನವರ ನೆನಪುಗಳಂತೆಯೇ, ಅಜ್ಜಂಪುರದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಅಜ್ಜಂಪುರದಲ್ಲಿ ನಡೆದ ಚಟುವಟಿಕೆಗಳ ಸಂಗ್ರಹಯೋಗ್ಯ ಲೇಖನದ ಮುದ್ರಿತ ಅವತರಣಿಕೆಯನ್ನು ಮಿತ್ರ ಅಪೂರ್ವ ಬಸು ಹುಡುಕಿ ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳು. ಶಂಕರ ಅಜ್ಜಂಪುರ ಸಂಪಾದಕ ದೂರವಾಣಿ - 99866 72483 ಇ-ಮೇಲ್ - shankarajp@gmail.com ---------------------------------------------------------------------------------------------------------------------------------------- --------------------------- ಕಮ್ಮತಿಗೆ ಚನ್ನಬಸಪ್ಪ ಅಜ್ಜಂಪುರದಲ್ಲಿ ವರ್ತಕರಾಗಿದ್ದವರು. ಅವರು ಜನಿಸಿದ್ದು 12-01-1917ರಲ್ಲಿ. ಈ ವರ್ಷದವರೆಗೆ ಬದುಕಿದ್ದಿದ್ದರೆ ನೂರ...