ಪೋಸ್ಟ್‌ಗಳು

ಜನವರಿ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪರ್ವತರಾಯನ ಕೆರೆ

ಇಮೇಜ್
ಆತ್ಮೀಯರೇ, ಈ ಬಾರಿಯ ಸಂಚಿಕೆಯಲ್ಲಿ ಅಜ್ಜಂಪುರದ ಪರ್ವತರಾಯನ ಕೆರೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಕೆರೆಗೆ ಈ ಹೆಸರು ಬರಲು ಕಾರಣವಾದ ಬಗ್ಗೆ ನಾನು ಮತ್ತು ನನ್ನ ಮಿತ್ರ ಜಿ.ಬಿ. ಅಪ್ಪಾಜಿ (ಅಪೂರ್ವ) ದೂರವಾಣಿಯಲ್ಲಿ ಚರ್ಚಿಸುತ್ತಿದ್ದೆವು. ಅಜ್ಜಂಪುರ ಸಮೀಪದ ಬುಕ್ಕಾಂಬುಧಿಗೆ ವಿಜಯನಗರದ ಸಂಪರ್ಕದ ಬಗ್ಗೆ ಒಂದು ಹಂತದಲ್ಲಿ ಅವರು ಪ್ರಸ್ತಾಪಿಸಿದರು. ಹೊಯ್ಸಳೋತ್ತರ ದೇವಾಲಯಗಳನ್ನು ವಿಜಯನಗರದ ಅರಸರು ಜೀರ್ಣೋದ್ಧಾರ ಮಾಡಿರುವ ಕುರುಹುಗಳು ಅಜ್ಜಂಪುರದಲ್ಲೂ ಕಂಡುಬರುತ್ತದೆಯಾಗಿ ನಮ್ಮೂರ ಕೆರೆಯನ್ನು ಅಭಿವೃದ್ಧಿಪಡಿಸಿದಾತನು ವಿಜಯನಗರಕ್ಕೆ ಸಂಬಂಧಿಸಿದ ಪರ್ವತರಾಯನೆಂಬ ಊಹೆಗೆ ತಲುಪಿದೆವು. ಓದುಗರಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿದ್ದಲ್ಲಿ ಹಂಚಿಕೊಳ್ಳಲು ಕೋರುತ್ತೇನೆ. (ಚಿತ್ರಕೃಪೆ - ಮಂಜುನಾಥ ಅಜ್ಜಂಪುರ ಮತ್ತು ಜಿ.ಬಿ. ಅಪ್ಪಾಜಿ) ಪರ್ವತರಾಯನ ಕೆರೆ ಎಲ್ಲ ಊರುಗಳಿಗಿರುವಂತೆ ಅಜ್ಜಂಪುರಕ್ಕೂ ಒಂದು ಕೆರೆ ಇದೆ. ಅದಕ್ಕೆ ಅದ್ಭುತವಾದ ಹೆಸರೂ ಇದೆ. ಅದರ ಹೆಸರು ಪರ್ವತರಾಯನ ಕೆರೆ. ಈ ಪರ್ವತರಾಯ ವಿಜಯನಗರ ಕಾಲಕ್ಕೆ ಸೇರಿದವನಿರಬೇಕು. ಅಜ್ಜಂಪುರದ ಸಮೀಪದ ಬುಕ್ಕಾಂಬುಧಿ, ವಿಜಯನಗರದ ಇತಿಹಾಸದೊಂದಿಗೆ ತಳುಕುಹಾಕಿಕೊಂಡಿರುವ ದಾಖಲೆಗಳಿವೆ. ಅದೇ ರೀತಿ, ಅಜ್ಜಂಪುರದ ಕೋಟೆಯಲ್ಲಿರುವ  ಕೆರೆಹಿಂದಿನ ಶಂಕರಲಿಂಗೇಶ್ವರ ದೇವಾಲಯ ಶ್ರೀ ಪ್ರಸನ್ನ ಸೋಮೇಶ್ವರ ದೇಗುಲದ ಲಿಂಗ ಶಿಲ್ಪ ಮತ್ತು ಎದುರಿನ ಬಸವನ ಮಂಟಪಗಳು ವಿ