ಪೋಸ್ಟ್‌ಗಳು

ಆಗಸ್ಟ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇತಿಹಾಸದ ಪುಟ ಸೇರಿದ ಅಜ್ಜಂಪುರದ ಖಾದಿ ಗ್ರಾಮೋದ್ಯೋಗ ಭಂಡಾರ

ದೇಶದ ಎಲ್ಲ ಚಿಕ್ಕ ಹಳ್ಳಿ, ಪಟ್ಟಣ, ನಗರಗಳಂತೆ ಸ್ವಾತಂತ್ರ್ಯ ಸಂಗ್ರಾಮದ ವಿಷಯದಲ್ಲಿ ಅಜ್ಜಂಪುರದ ಮೇಲೆ ಕೂಡ ಅದರ ಪ್ರಭಾವವಿತ್ತು. ಹೀಗಾಗಿಯೇ ಆ ಚಳವಳಿಯಲ್ಲಿ ಅಜ್ಜಂಪುರದ ಅನೇಕರು ಭಾಗವಹಿಸಿದರು. ಶ್ರೀ ಸುಬ್ರಹ್ಮಣ್ಯ ಶೆಟ್ಚರು ಅಜ್ಜಂಪುರದ ಮಟ್ಟಿಗೆ ಆ ದಿನಗಳಲ್ಲಿ ಸ್ಥಳೀಯ ಗಾಂಧಿಯೇ ಆಗಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಅವರ ಮಾತಿಗೆ ಆ ಮಟ್ಟಿನ ಮನ್ನಣೆಯಿತ್ತು. ಗಾಂಧೀಜಿಯವರ ಚಿಂತನೆಗಳಲ್ಲಿ ಸ್ವಾವಲಂಬನೆ, ಖಾದಿ, ಕೃಷಿಗೆ ಬೆಂಬಲ ಮುಂತಾದ ಅನೇಕ ಸಂಗತಿಗಳು ಸೇರಿದ್ದವಷ್ಟೇ. ಅದರಲ್ಲಿ ಖಾದಿ ತಯಾರಿಕೆ ಮತ್ತು ಅದರ ಬಳಕೆ ಬಗ್ಗೆ ಅಜ್ಜಂಪುರದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಕೂಡ ಸಾಕಷ್ಟು ಕೆಲಸಗಳು ನಡೆದವು. ನಾನು ಶಿವಮೊಗ್ಗೆಯಲ್ಲಿ ನೆಲೆಸಿದ ನಂತರ ನಿಧಾನವಾಗಿ ನನ್ನ ಬಡಾವಣೆಯ ಜನರ ಪರಿಚಯವಾಗುತ್ತಾ ಬಂದಿತು. ಆ ಹಂತದಲ್ಲಿ ಶ್ರೀ ಹುಚ್ಚಪ್ಪ ಎನ್ನುವವರ ಪರಿಚಯವೂ ಆಯಿತು. ನನ್ನ ಪರಿಚಯ ಹೇಳಿಕೊಳ್ಳುವಾಗ ನಾನು ಅಜ್ಜಂಪುರದವನು ಎಂದು ಹೇಳಿದ್ದೇ ತಡ, ಅವರ ಪ್ರತಿಕ್ರಿಯೆಯಲ್ಲಿ ತುಂಬ ಉತ್ಸಾಹ ಮೂಡಿದ್ದು ಕಾಣಿಸಿತು. ಅವರು ಹೇಳಿದರು – “ ಸ್ವಾಮೀ, ನಾನು ಕೂಡ ಅಜ್ಜಂಪುರದಲ್ಲಿ ಖಾದಿ ಮಂಡಲಿಯಲ್ಲಿ ಕೆಲಸದಲ್ಲಿದ್ದವ. ಅಂದಿನ ದಿನಗಳನ್ನು ನೆನೆಸಿಕೊಳ್ಳುವುದೇ ಒಂದು ಸಂತಸ, ಏಕೆಂದರೆ, ಯಾವ ಕೈಗಾರಿಕೆಯೂ ಇರದಿದ್ದ ನಿಮ್ಮ ಊರಿನಲ್ಲಿ ನಮ್ಮ ಖಾದಿ ಸಂಸ್ಥೆಯೊಂದೇ ಹೇಳಿಕೊಳ್ಳಬಹುದಾಗಿದ್ದ ಒಂದು ಕೈಗಾರಿಕೆ. ಅದೀಗ ನಶಿಸಿ ಹ