ಪೋಸ್ಟ್‌ಗಳು

ಮಾರ್ಚ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಷ್ಟ್ರಪತಿ ಸ್ವರ್ಣಪದಕ ಪುರಸ್ಕೃತ - ಗೃಹ ರಕ್ಷಕ ದಳದ ಕಂಪೆನಿ ಕಮಾಂಡೆಂಟ್ ಹ. ಪುಟ್ಟಸ್ವಾಮಿ

ಇಮೇಜ್
ಅಜ್ಜಂಪುರದ ಸಾಧಕರ ಪರಿಚಯ ಈ ಬ್ಲಾಗ್ ನಲ್ಲಿ ಸತತವಾಗಿ ನಡೆಯುತ್ತಿದೆಯಷ್ಟೆ . ಅದಕ್ಕೆ ಇನ್ನೊಂದು ಗರಿಯಾಗಿ ರಾಷ್ಟ್ರಪತಿ ಸ್ವರ್ಣಪದಕ ಪುರಸ್ಕೃತ - ಗೃಹ ರಕ್ಷಕ ದಳದ ಕಂಪೆನಿ ಕಮಾಂಡೆಂಟ್ ಹ . ಪುಟ್ಟಸ್ವಾಮಿಯವರ ಸಾಧನೆ ಸ್ಮರಣಾರ್ಹ . ಹೀಗಾಗಿ ಅವರನ್ನು ಕುರಿತ ಪರಿಚಯ ಲೇಖನವನ್ನು ಆಸ್ಥೆಯಿಂದ ಸಿದ್ಧಪಡಿಸಿ ನನಗೆ ತಲುಪಿಸಿದವರು ಗೆಳೆಯ ಅಜ್ಜಂಪುರ ಮಲ್ಲಿಕಾರ್ಜುನ್ . ಅವರಂತೆಯೇ ಇತರರೂ ಕೂಡ ತಮ್ಮ ಸಂಪರ್ಕದಲ್ಲಿ ಬರುವ ಅಜ್ಜಂಪುರದ ಸಾಧಕರನ್ನು ಹೀಗೆಯೇ ಪರಿಚಯಿಸಲು ಈ ಬ್ಲಾಗ್ ಮುಕ್ತವಾಗಿದೆ . - ಶಂಕರ ಅಜ್ಜಂಪುರ ಅಜ್ಜಂಪುರವು ಸಾಂಸ್ಕೃತಿಕ , ಶೈಕ್ಷಣಿಕ , ಧಾರ್ಮಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ , ಕರ್ನಾಟಕದ ನಕ್ಷೆಯಲ್ಲಿ ಗುರುತಿಸಿಕೊಂಡಿದೆ . ಎಲ್ಲ ಊರುಗಳಂತೆ ಅಜ್ಜಂಪುರದಲ್ಲಿಯೂ ಗೃಹ ರಕ್ಷಕ ದಳ ಕಾರ್ಯನಿರ್ವಹಿಸಲು ಆರಂಭಿಸಿತು . ಈ ಸೇವೆಯ ಪರಿಚಯವಿರದ ಜನರೇ ಅಧಿಕವಾಗಿದ್ದ ಊರಿನಲ್ಲಿ , ಅದನ್ನು ತೀವ್ರವಾಗಿ ತೆಗೆದುಕೊಂಡು , ರಾಷ್ಟ್ರಪತಿಗಳ ಪದಕ ಪಡೆಯುವ ಮಟ್ಟಿಗಿನ ಸಾಧನೆಯನ್ನು ತೋರಿದವರು ಹ . ಪುಟ್ಟಸ್ವಾಮಿ . ಅಜ್ಜಂಪುರದ ಈ ಘಟಕವು ರಾಜ್ಯದಲ್ಲೇ ಶಿಸ್ತುಬದ್ಧ ಘಟಕವೆಂದು ಹೆಸರು ಪಡೆಯಲು ಶ್ರಮಿಸಿದ ಶಿಸ್ತಿನ ಸಿಪಾಯಿ ಹ . ಪುಟ್ಟಸ್ವಾಮಿಯವರ ಸೇವೆ ಮತ್ತು