ಪೋಸ್ಟ್‌ಗಳು

ನವೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

80. ಅನನ್ಯ ಪ್ರತಿಭೆಯ ರಂಗಕರ್ಮಿ - ಎ.ಎಸ್. ಕೃಷ್ಣಮೂರ್ತಿ

ಇಮೇಜ್
ಆತ್ಮೀಯ ಓದುಗರೇ, ಎಲ್ಲರಿಗೂ 62ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಕನ್ನಡದ ಬೆಳವಣಿಗೆಯಲ್ಲಿ ಭಾಷೆಯ ಬಳಕೆ ಮತ್ತು ಸಂವಹನಗಳಿಗೆ ಪ್ರಾಮುಖ್ಯತೆಯಿದೆಯಷ್ಟೆ. ಈ ನಿಟ್ಟಿನಲ್ಲಿ "ಅಂತರಜಾಲದಲ್ಲಿ ಅಜ್ಜಂಪುರ" ಬ್ಲಾಗ್ ಮೂಲಕ  ನನ್ನೂರು ಅಜ್ಜಂಪುರದ ಸಾಧಕರು,  ದೇವಾಲಯಗಳು, ಆಚರಣೆಗಳು, ಹಬ್ಬ-ಹರಿದಿನಗಳು, ಸಂಘ-ಸಂಸ್ಥೆಗಳು ಮುಂತಾದ ವಿಶೇಷಗಳ ಹಲವು ಆಯಾಮಗಳನ್ನು ದಾಖಲಿಸುವ ಕಾರ್ಯವು ನನ್ನ ಅನೇಕ ಮಿತ್ರರ ಸಹಾಯ ಸಹಕಾರಗಳಿಂದ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ನೀವು ಕೂಡ ಊರಿನ ಅನೇಕ ವಿಶೇಷಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ, ಸಂಘ-ಸಂಸ್ಥೆಗಳ ಬಗ್ಗೆ ಚಿತ್ರಸಹಿತ ಮಾಹಿತಿಯನ್ನು ಕೆಳಕಂಡ ಈ-ಮೇಲ್ ವಿಳಾಸಕ್ಕೆ ಕಳಿಸಿ ಸಹಕರಿಸಲು ಕೋರುತ್ತೇನೆ. ಪ್ರಸ್ತುತ ರಾಜ್ಯೋತ್ಸವದ  ಈ ಸಂಚಿಕೆಯಲ್ಲಿ ಅಜ್ಜಂಪುರದ ಪ್ರಸಿದ್ಧ ರಂಗಕರ್ಮಿ ಶ್ರೀ ಎ.ಎಸ್. ಕೃಷ್ಣಮೂರ್ತಿಯವರನ್ನು ಕುರಿತಂತೆ ಲೇಖನ-ಚಿತ್ರಗಳನ್ನು ಪ್ರಕಟಿಸಲಾಗಿದೆ.  ವಂದನೆಗಳೊಡನೆ. - ಶಂಕರ ಅಜ್ಜಂಪುರ ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ಬ್ಲಾಗ್ ಈ-ಮೇಲ್ ವಿಳಾಸ -shankarajp@gmail.com ದೂರವಾಣಿ - 99866 72483 -------------------------------------------------------------------------------------------------------------------------------------------------------------------