73. ಅಜ್ಜಂಪುರದಲ್ಲಿ ಹೋಟೆಲ್ ಉದ್ಯಮ ಬೆಳೆದುಬಂದ ಬಗೆ
ಆತ್ಮೀಯರೇ, ಒಂದು ಊರಿನಲ್ಲಿ ಹೋಟೆಲ್ ಸ್ಥಾಪನೆಯಾಗಿ, ಮುಂದೆ ಅದೊಂದು ಉದ್ಯಮವಾಗಿ ಬೆಳೆಯುವುದನ್ನು ದಾಖಲಿಸುವ ಅಗತ್ಯವಿದೆಯೇ ಎಂದುಕೊಂಡರೆ, ಹೌದು ಎನ್ನಬೇಕಾದೀತು. ಏಕೆಂದರೆ, ಊರೊಂದರ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹೋಟೆಲ್ ಸೇರಿದಂತೆ ಇನ್ನಿತರ ಉದ್ಯಮಗಳು ಸಾರ್ವಜನಿಕ ಸಂಕೇತಗಳಾಗುತ್ತವೆ. ಇತ್ತೀಚೆಗಂತೂ ಹೋಟಲ್ ಗಳು ಊರಿನ ಹೆಗ್ಗುರುತು ಗಳಾಗುತ್ತ ನಡೆದಿವೆ. ಅಜ್ಜಂಪುರದ ಮಟ್ಟಿಗೆ ಹೇಳುವುದಾದರೆ, ಒಂದು ಕಾಲಕ್ಕೆ ಉತ್ತಮ ರುಚಿ-ಅಭಿರುಚಿಗಳಿದ್ದ ಹೋಟೆಲುಗಳಿದ್ದವು. ಈಗೀಗ, ಜನರ ತಿನ್ನುವ ಅಭಿರುಚಿ ಬದಲಾದ ಕಾರಣದಿಂದ ರಸ್ತೆಬದಿಯ ತಳ್ಳುಗಾಡಿಗಳೇ ಪ್ರಧಾನವಾಗಿ ಕಾಣುತ್ತಿವೆ. ಇಂದಿಗೂ ನಮ್ಮ ಊರಿಗೆ ಉತ್ತಮ ದರ್ಜೆಯ ಊಟ-ತಿಂಡಿಗಳು ದೊರೆಯುವಂಥ, ವಿರಾಮವಾಗಿ ಚಹಾ ಹೀರುತ್ತ ಹರಟಲು ಬೇಕಿರುವ ಒಂದು ಜಾಗದ ಅವಶ್ಯಕತೆಯಿದೆ. ಇದನ್ನು ಗಮನಿಸುವ ಉದ್ಯಮಿಗಳಿಗೆ ಇಲ್ಲಿ ಮುಕ್ತ ಅವಕಾಶವಂತೂ ಇದೆ. ಗೆಳೆಯ ಕೇಶವಮೂರ್ತಿಯವರಿಗೆ ತಮ್ಮ ಅನುಭವಗಳನ್ನು ದಾಖಲಿಸಲು ಕೋರಿದ್ದಕ್ಕೆ ಸೂಕ್ತವಾಗಿ ಸ್ಪಂದಿಸಿರುವ ಲೇಖನ ನಿಮ್ಮ ಮುಂದಿದೆ. ಇದಕ್ಕೆ ಸೂಕ್ತ ಚಿತ್ರಾಲಂಕಾರ ಮಾಡಿದ ಮಿತ್ರ ಅಪೂರ್ವ ಬಸು ಅವರಿಗೆ ವಂದನೆಗಳು. ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಚಿತ್ರಗಳನ್ನು ಸಂಗ್ರಹಿಸಿ, ಅಡಿಬರಹಗಳನ್ನು ಸಿದ್ಧಪಡಿಸಿ ನೀಡಿದ್ದಾರೆ. ಕೃತಜ್ಞತೆಗಳು. - ಶಂಕರ ಅಜ್ಜಂಪುರ ದೂರವಾಣಿ - 99866 72483 -------------...