ಪೋಸ್ಟ್‌ಗಳು

ಸೆಪ್ಟೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಜ್ಜಂಪುರ ಜಿ ಸೂರಿ

ಇಮೇಜ್
ನಾನು ಈ ಬ್ಲಾಗ್ ನ್ನು ಆರಂಭಿಸಿದಾಗಿನಿಂದ ಹಲವರು ಅಜ್ಜಂಪುರ ಸೂರಿಯವರ ಬಗ್ಗೆ ನೀವೇಕೆ ಇನ್ನೂ ಲೇಖನ ಪ್ರಕಟಿಸಿಲ್ಲ ಎಂದು ಅನೇಕರು  ನನ್ನನ್ನು ಕೇಳುತ್ತಿದ್ದರು. ನಾನು ಅಜ್ಜಂಪುರದಲ್ಲಿ ಇದ್ದ ಸಮಯದಲ್ಲಿ ಅವರ ಅನುವಾದಿತ ಕಥೆ-ಕಾದಂಬರಿಗಳ ಬಗ್ಗೆ ಕೇಳುತ್ತಿದ್ದೆನಾದರೂ,  ಅವರನ್ನು ಭೇಟಿಮಾಡಿ ಮಾತನಾಡುವಷ್ಟು ಸಂಪರ್ಕವಿರಲಿಲ್ಲ. ನಮ್ಮೂರಿನ ಹೆಸರನ್ನು ತಮ್ಮ ಸಾಹಿತ್ಯ ಚಟುವಟಿಕೆಗಳಿಂದ ಜನರ ಮನಸ್ಸಿನಲ್ಲಿ ಮೂಡಿಸಿದ ಸೂರಿಯವರ ಬಗ್ಗೆ ಬರೆಯಬೇಕೆಂಬುದು  ಅನೇಕ ವರ್ಷಗಳ ಆಶಯ. ಮುಂದೆ, ಮಿತ್ರ ಮಲ್ಲಿಕಾರ್ಜುನರು, ಸೂರಿಯವರ ಪುತ್ರನನ್ನು ಸಂಪರ್ಕಿಸಿ ಮಾಹಿತಿ ಕೊಡುವುದಾಗಿಯೂ ತಿಳಿಸಿದ್ದರು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಅವರ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ದೊರೆತ ಸವಿವರ-ಸಚಿತ್ರ ಮಾಹಿತಿಗಿಂತ ಹೆಚ್ಚಿನದೇನೂ ಬೇಕಿರಲಿಲ್ಲ. ಹೀಗಾಗಿ ಕಣಜದಲ್ಲಿ ದೊರೆತ ಈ ಲೇಖನವನ್ನು ಕೃತಜ್ಞತಾಪೂರ್ವಕವಾಗಿ ಇಲ್ಲಿ ಪ್ರಕಟಿಸಿರುವೆ.  - ಶಂಕರ ಅಜ್ಜಂಪುರ  ಕವಿ , ವಚನಕಾರ , ಕಾದಂಬರಿಕಾರ , ಅನುವಾದಕ ಎಲ್ಲಕ್ಕಿಂತ ಹೆಚ್ಚಾಗಿ ಸಹೃದಯ ಸಾಹಿತಿ ಎನಿಸಿಕೊಂಡಿದ್ದ ಜಿ. ಸೂರ್ಯನಾರಾಯಣರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಜ್ಜಂಪುರದಲ್ಲಿ 1939 ರ ಏಪ್ರಿಲ್‌ 17 ರಂದು. ತಂದೆ   ಗೋವಿಂದಪ್ಪನವರು ಮತ್ತು ತಾಯಿ ಪಾರ್ವತಮ್ಮನವರು. ತಂದೆಯವರದು ಮೂಲತಃ ಬಳೆಮಾರುವ ಕಾಯಕ ಪ್ರವೃತ್ತಿಯಾದರೂ , ದೈಹಿಕ ಸೌ