ಪೋಸ್ಟ್‌ಗಳು

ಡಿಸೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

81. ಅಜ್ಜಂಪುರ ಬಸವಣ್ಣ ದೇವರ ಗುಡಿಯ ಶತಮಾನೋತ್ಸವ

ಇಮೇಜ್
ಅಜ್ಜಂಪುರದಲ್ಲಿ ಕೋಟೆಯ ಆಂಜನೇಯ ದೇವಾಲಯವಿರುವಂತೆ, ಪೇಟೆಯಲ್ಲಿನ ಬಸವಣ್ಣದೇವರ ಗುಡಿ ಕೂಡ ಪ್ರಾಚೀನವಾದುದು. ಈ ದೇವಾಲಯದ ಬಗ್ಗೆ ಹಿಂದೆ ಒಂದು ಲೇಖನವನ್ನು ಪ್ರಕಟಿಸಲಾಗಿದೆ. ಈ ಬಸವಣ್ಣ ದೇವರ ಗುಡಿಯ ಶತಮಾನೋತ್ಸವವನ್ನು ಕಳೆದ ತಿಂಗಳ 23ರಂದು ಆಚರಿಸಿದ್ದನ್ನು ದಾಖಲಿಸಲು ಇಲ್ಲಿ  ಪುನರ್ ಪ್ರಸ್ತಾಪಿಸಲಾಗಿದೆ.   ದೇವಾಲಯವು ಪ್ರಾಚೀನವೆನ್ನಲು ಅದರ ಸಂರಚನೆಯನ್ನು ನೋಡಿದರೆ ತಿಳಿಯುವಂತಿದೆ. ವಿಜಯನಗರೋತ್ತರ ಕಾಲದಲ್ಲಿ ರಚನೆಯಾದ ಈ ಮಂದಿರವನ್ನು ಶುದ್ಧ ಗ್ರಾನೈಟ್ ಶಿಲೆಯನ್ನು ಬಳಸಿ ಕಟ್ಟಲಾಗಿದೆ.  ಇಲ್ಲಿರುವ ಬಸವಣ್ಣ ದೇವರ ವಿಗ್ರಹ, ರುದ್ರ ಹಾಗೂ ವೀರಭದ್ರ ಶಿಲ್ಪಗಳನ್ನು 1932ರಲ್ಲಿ ಸ್ಥಾಪಿಸಲಾಯಿತಾದರೂ, ಮಂದಿರ ಮಾತ್ರ ಅದಕ್ಕೂ ಹಿಂದಿನದೇ ಆಗಿದೆ. ರುದ್ರ ಹಾಗೂ ವೀರಭದ್ರ ವಿಗ್ರಹಗಳಿಗೆ ಆರುನೂರು ವರ್ಷಗಳ ಇತಿಹಾಸವಿದೆಯೆಂದು ತಿಳುವಳಿಕೆ. ಕೋಟೆಯಲ್ಲಿ ನೆಲೆಗೊಂಡಿದ್ದ ವೀರಭದ್ರ ಮತ್ತು ರುದ್ರ ದೇವರ ವಿಗ್ರಹಗಳು, ಕಾಲಾಂತರದಲ್ಲಿ ಪೂಜಾದಿಗಳಿಲ್ಲದೆ, ಸೊರಗಿದವು. ಇದನ್ನು ಗಮನಿಸಿದ ಊರ ಹಿರಿಯರಾದ ಶೆಟ್ರ ಸಿದ್ದಪ್ಪನವರು, ಕುಪ್ಪಾಳು ಸಿದ್ದರಾಮಣ್ಣ, ಗಂಗಣ್ಣ, ನಿರ್ವಾಣಶೆಟ್ಟರ ಹಾಲಪ್ಪ, ಜವಳಿ ನಾಗಪ್ಪ, ಗುರುಪಾದಪ್ಪರ ಮಲ್ಲಯ್ಯ, ಭಂಗಿ ಮರುಳಪ್ಪ ಮುಂತಾದವರು, ಈ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿದರು. ತತ್ಪರಿಣಾಮವಾಗಿ, ಕೋಟೆಯಲ್ಲಿದ್ದ ಈ ಎರಡು ವಿಗ್ರಹಗಳನ್ನು ತಂದು ೧೯೩೨ರಲ್ಲಿ ಚಿತ್ರದುರ್ಗ ಬ