ಪೋಸ್ಟ್‌ಗಳು

ಮಾರ್ಚ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

110. ವಿಶ್ವ ರಂಗಭೂಮಿ ದಿನಾಚರಣೆ : ಅಜ್ಜಂಪುರದ ಒಂದು ನೆನಪು

ಇಮೇಜ್
  ಆತ್ಮೀಯ ಓದುಗರೇ, ಇಲ್ಲಿ ಅಜ್ಜಂಪುರದ ಹಳೆಯ ನೆನಪೊಂದನ್ನು ಮಿತ್ರ ಅಪ್ಪಾಜಿ ಜಿ.ಬಿ. ಇವರು ಸುಂದರವಾಗಿ ದಾಖಲಿಸಿದ್ದಾರೆ. ಸೂಕ್ಷ್ಮಗ್ರಾಹಿಗಳಿಗೆ ಮಾತ್ರ ಸಾಧ್ಯವಾಗುವ ಇಂಥ ಅನೇಕ ಸ್ಮರಣೆಗಳನ್ನು ಅಪ್ಪಾಜಿ ಈ ಹಿಂದೆಯೂ ನೀಡಿರುವುದುಂಟು. ಡಾ. ಶಿವರಾಮ ಕಾರಂತರು ಅಜ್ಜಂಪುರಕ್ಕೆ ಬಂದಾಗ ಅವರು ಊರಿನ ಕಲಾ ಸೇವಾ ಸಂಘದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಯಥಾರ್ಥವಾಗಿ ನೀಡಲಾಗಿದೆ. ಅಜ್ಜಂಪುರದ ಕಲಾವಿದ ಶ್ರೀ ಸಿದ್ದಪ್ಪನವರ ಬಗ್ಗೆಯೂ ನೆನಪುಗಳಿವೆ. ಅವು ಹಾಗೇ ಹಾರಿಹೋಗದಿರಲೆಂದು ಇಲ್ಲಿ ದಾಖಲಿಸಿರುವೆ.  ಡಾ. ಶಿವರಾಮ ಕಾರಂತರು, ಕಲಾವಿದ ಜಿ.ಸಿ. ಸಿದ್ದಪ್ಪನವರು. ಇಂದು ವಿಶ್ವ ರಂಗಭೂಮಿ ದಿನಾಚರಣೆ : ಅಜ್ಜಂಪುರದ ಒಂದು ನೆನಪು ಪ್ರಖ್ಯಾತ ಕಾದಂಬರಿಕಾರ, ಪ್ರಖರ ಚಿಂತಕ ಕೋಟ ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ‌ ಬಂದ ಹೊಸತರಲ್ಲಿ ನಾಡಿನಾದ್ಯಂತ ಬಿದರೆಯಿಂದ ಕೊಡಗಿನ ತನಕ ಜನರು ಸನ್ಮಾನ ಸಮಾರಂಭ ಏರ್ಪಡಿಸಿ, ಸಂಭ್ರಮಿಸಿದರು. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ನಮ್ಮೂರು ಅಜ್ಜಂಪುರದಲ್ಲಿ ಕೂಡ ಆಗ ಕಾರಂತರಿಗೆ ಸನ್ಮಾನ ನಡೆಯಿತು. ಅಜ್ಜಂಪುರದ ಹವ್ಯಾಸಿ ರಂಗ ಸಂಸ್ಥೆ ಕಲಾ ಸೇವಾ ಸಂಘದ ರಂಗಮಂದಿರದಲ್ಲಿ ಸನ್ಮಾನ. ನಮ್ಮೂರಿನ ಸಂಘಟಕರು ಪ್ರಾಸ್ತಾವಿಕ ಭಾಷಣದಲ್ಲಿ ನಮ್ಮ ಸಂಸ್ಥೆಯ ಜಗಜ್ಯೋತಿ ಬಸವೇಶ್ವರ ನಾಟಕದ ನೂರು ಪ್ರದರ್ಶನಗಳು ನಡೆದಿವೆ ಇತ್ಯಾದಿ ಅಭಿಮಾನದ ಮಾತುಗಳನ್ನು ಹೇಳಿಕೊಂಡರು. ಮೊದಲಿಗೆ ಕಲಾ ಸೇವಾ ಸಂಘದ ಹೆಸರಿನ ಜಾಡನ್ನೇ ಹಿಡಿ

109. ಜನಪ್ರಿಯ ಜಾನಪದ ದೈವ - ಅಂತರಗಟ್ಟೆಯ ಅಂತರಗಟ್ಟಮ್ಮ,

ಇಮೇಜ್
ಆತ್ಮೀಯ ಓದುಗರೇ, ಅಜ್ಜಂಪುರವು ತಾಲೂಕು ಆದ ನಂತರ, ಈ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ದೇಗುಲಗಳು, ಐತಿಹಾಸಿಕ ಸ್ಥಳಗಳನ್ನು ಈ ಬ್ಲಾಗ್ ನಲ್ಲಿ ದಾಖಲಿಸುವ ಕಾರ್ಯ ಇದೀಗ ನಡೆದಿದೆ. ನನ್ನ ಕೋರಿಕೆಯನ್ನು ಮನ್ನಿಸಿ ಚಿತ್ರ-ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವ ಎಲ್ಲ ಸಹೃದಯರಿಗೆ ನನ್ನ ವಂದನೆಗಳು. ಈ ಸಂಚಿಕೆಯಲ್ಲಿ ಈ ವರ್ಷದ ಫೆಬ್ರವರಿ 19ರಂದು ಅಜ್ಜಂಪುರ ತಾಲೂಕಿಗೆ ಸೇರಿದ ಅಂತರಗಟ್ಟೆ ಗ್ರಾಮದಲ್ಲಿ ಜರುಗಿದ ಜಾತ್ರಾ ಮಹೋತ್ಸವವು ಸಂಪನ್ನವಾಯಿತು.  ಅಂತರಗಟ್ಟೆಯ ಅಂತರಗಟ್ಟಮ್ಮನ ಜಾತ್ರೆಯ ನೆನಪು ನನ್ನನ್ನು ಆರು ದಶಕಗಳ ಹಿಂದಕ್ಕೆ ಕರೆದೊಯ್ದಿತು. ಆಗಿನ ಬಸ್ ಸ್ಟಾಂಡ್ ಸಮೀಪದಲ್ಲಿ ನಿಂತು ವೇಗವಾಗಿ ಸಾಗುತ್ತಿದ್ದ ಪಾನಕ ತುಂಬಿದ ಅಲಂಕೃತ ಎತ್ತಿನ ಗಾಡಿಗಳನ್ನು ಎಣಿಸುತ್ತಿದ್ದುದೇ ಒಂದು ಸವಿ ನೆನಪು. ಈಗಲೂ ಆ ಸಂಪ್ರದಾಯ ಮುಂದುವರೆದಿದೆಯಾದರೂ, ಎತ್ತಿನ ಗಾಡಿಗಳ ಭರಾಟೆಯು ಕಾಲಕ್ರಮದಲ್ಲಿ ಕಡಿಮೆಯಾದಂತಿದೆ. ಸುಮಾರು ಹದಿನೈದು ವರ್ಷಗಳ ಹಿಂದೆ ದೇಗುಲದಲ್ಲಿದ್ದ ಮೂಲಮೂರ್ತಿಯು ಭಿನ್ನವಾಗಿಯಿತೆಂಬ ಕಾರಣಕ್ಕಾಗಿ, ನೂತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಹಳೆಯ ವಿಗ್ರಹವನ್ನು ಕೆರೆಪಾಲು ಮಾಡುವ ಸಂಪ್ರದಾಯ ಹಿಂದಿತ್ತು. ಈಗಿನವರು ಹಾಗೆ ಮಾಡದೇ ಅದನ್ನು ಒಂದೆಡೆ ಸಂರಕ್ಷಿಸಿ, ಸುಸ್ಥಿತಿಯಲ್ಲಿ ಇಟ್ಟಿರುವರು. ಇದು ನಿಜಕ್ಕೂ ಉತ್ತಮ ಬೆಳವಣಿಗೆಯೇ ಸರಿ.  ದೇವಾಲಯದ ಆವರಣದಲ್ಲಿ ಅಂತರಘಟ್ಟಮ್ಮನ ತಂಗಿ ಮಾತಂಗಮ್ಮನ ದೇಗುಲವಿದೆ. ಪ್ರಾಚೀನ ದೀಪಸ್ಥಂಬ ಮತ್ತು