ಪೋಸ್ಟ್‌ಗಳು

ಜನವರಿ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೀಗೊಂದು ಕದನದ ಕಥೆ

ಇಮೇಜ್
ಓದುಗರೆಲ್ಲರಿಗೂ ನೂತನ  ವರ್ಷದ ಶುಭಾಶಯಗಳು   ಶ್ರೀ ಎಮ್. ಚಂದ್ರಪ್ಪ       ಶ್ರೀ ಚಂದ್ರಪ್ಪ ಮಾಸ್ತರರು ಅಜ್ಜಂಪುರದವರು. ಮಾಧ್ಯಮಿಕ ಶಾಲೆಯ ಅಧ್ಯಾಪಕರಾಗಿ ನಿವೃತ್ತರಾಗಿರುವ ಅವರು ಕಲೆ, ಸಾಹಿತ್ಯ, ನಾಟಕ, ಇತಿಹಾಸಗಳಲ್ಲಿ ಅಭಿರುಚಿಯುಳ್ಳವರು. ಅವರೀಗ ಕೊಡಗಿನ ಕುಶಾಲನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದು, ಇಂದಿಗೂ ಬರವಣಿಗೆ, ಸಾಹಿತ್ಯದ ಅಧ್ಯಯನಗಳನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಯೌವನದಲ್ಲಿ  ತುಂಬ ಸ್ಫುರದ್ರೂಪಿಯಾಗಿ, ಬಟ್ಟೆ-ಬರೆಗಳ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದ ಈ ಮಾಸ್ತರರು ಇಂದಿಗೂ ಅದೇ ಚೈತನ್ಯ, ಉತ್ಸಾಹಗಳಿಂದ ಇರುವರೆನ್ನುವುದು ಈ ಲೇಖನದೊಂದಿಗೆ ತಲುಪಿದ ಅವರ ಚಿತ್ರ ನೋಡಿದಾಗ ನನಗೆ ಅನ್ನಿಸಿತು.      ಅಜ್ಜಂಪುರ-ತರೀಕೆರೆಗಳ  ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾಗಿದ್ದ ಕದನದ ನೆನಪುಗಳು ನನ್ನ ವಯಸ್ಸಿನ ಅಜ್ಜಂಪುರದ ಗೆಳೆಯರ ಮನದಲ್ಲಿ ಅಸ್ಪಷ್ಟವಾಗಿಯಾದರೂ ಉಳಿದಿರುತ್ತದೆಯೆಂದು ಭಾವಿಸುತ್ತೇನೆ. ಅಂಥದೊಂದು ಘಟನೆಯನ್ನು ಹತ್ತಿರದಿಂದ ನೋಡಿದ್ದ ಮಾಸ್ತರರು ತಮ್ಮ ನೆನಪಿನ ಖಜಾನೆಯಿಂದ ಹೆಕ್ಕಿ ತೆಗೆದು ಇಲ್ಲಿ ನೀಡಿದ್ದಾರೆ. ಇಂದು ಗುಂಪು ಘರ್ಷಣೆಯೆಂದು ಸಾಮಾನ್ಯೀಕರಿಸಬಹುದಾದ ಆ ಘಟನೆಗೆ "ಯುದ್ಧ"ವೆಂಬ ಪದ ಚಾಲ್ತಿಯಲ್ಲಿದ್ದುದಷ್ಟೇ ಅಲ್ಲ, ಯುದ್ಧದ ರೋಷಾವೇಶ, ದ್ವೇಷ, ಆತಂಕಗಳನ್ನು ನಮ್ಮ ೧೨-೧೩ರ ವಯೋಮಾನದಲ್ಲಿ ಅನುಭವಿಸಿದ್ದು ನೆನಪಿಗೆ ಬರುತ್ತಿದೆ. ಸಮಕಾಲೀನರಿಗೆ ಅಂದಿನ  ಭಯ-ಆತಂಕಗಳ