ಪೋಸ್ಟ್‌ಗಳು

ಜೂನ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

15. ಆದರ್ಶ ಶಿಕ್ಷಕ ಶ್ರೀ ಎನ್. ಎಸ್. ಅನಂತರಾವ್

ಇಮೇಜ್
ಶ್ರೀ ಎನ್. ಎಸ್. ಅನಂತರಾವ್ ಕುಳ್ಳನೆಯ ನಿಲುವು , ಕಾಲೇಜಿಗೆ ಹೊರಟಾಗ ಖಾದೀ ಸೂಟು , ಮಿಕ್ಕಂತೆ ಸರಳ ಉಡುಪು , ಸದಾ ಚಿಂತನೆಯಲ್ಲಿ ತೊಡಗಿರುವಂಥ ಮುಖಭಾವ , ವಿದ್ಯಾರ್ಥಿಗಳನ್ನು ಕಂಡರೆ ಅಕ್ಕರೆಯ ಜತೆಗೆ , ಅವರು ಕಲಿಯಬೇಕಾದಷ್ಟನ್ನು ಕಲಿಯುತ್ತಿಲ್ಲವಲ್ಲ ಎಂಬ ಕಳಕಳಿ. ಇದು ನಮ್ಮೂರಿನ ಪ್ರೌಢಶಾಲೆಯ ನಿವೃತ್ತ ಮಖ್ಯೋಪಾಧ್ಯಾಯರಾಗಿದ್ದ  ನಲ್ಲೂರು ಶ್ರೀನಿವಾಸರಾವ್ ಅನಂತರಾವ್ ಅವರ ಬಾಹ್ಯಚರ್ಯೆ. ಅವರು ಗಾಂಧೀವಾದಿ. ಅಹಿಂಸೆಯಲ್ಲಿ ತುಂಬ ನಂಬಿಕೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ , ಅವರನ್ನು ಕುಳ್ಳಿರಿಸಿಕೊಂಡು ಅನುನಯದ ಮಾತನಾಡಿ ಪರಿವರ್ತನೆಗೆ ಒಳಗಾಗುವಂತೆ ಮಾಡುತ್ತಿದ್ದವರು.  ಅವರು ಅಜ್ಜಂಪುರಕ್ಕೆ ಸಮೀಪವಿರುವ ಶಾಂತಿಸಾಗರದ ಬಳಿಯಲ್ಲಿರುವ ನಲ್ಲೂರಿನಲ್ಲಿ  ೧೯೧೬ರಲ್ಲಿ ಜನಿಸಿದರು. ತಂದೆ ಶ್ರೀನಿವಾಸರಾವ್ , ತಾಯಿ ಪದ್ಮಾವತಿ ಬಾಯಿ. ತಮ್ಮ ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ರಾಯರು , ಅವರ ಅಣ್ಣ ಅಶ್ವತ್ಥನಾರಾಯಣ ರಾಯರ ನೆರವಿನಿಂದ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದರು. ಅನತಿಕಾಲದಲ್ಲೇ ಅವರ ಅಣ್ಣನೂ ತೀರಿಕೊಂಡಾಗ , ಶಾಲಾ ಮಕ್ಕಳಿಗೆ ಮನೆಪಾಠಮಾಡುತ್ತ , ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ , ಮದನಪಲ್ಲಿಯಲ್ಲಿ ಬಿ.ಟಿ. ಅಧ್ಯಾಪಕ ಪದವಿಯನ್ನು ಪಡೆದರು.೧೯೩೬-೩೭ನೇ ಇಸವಿಯು ಎರಡನೇ ಮಹಾಯುದ್ಧ ನಡೆಯುತ್ತಿದ್ದ ಕಾಲ. ಈ ಸಮಯದಲ್ಲಿ ಗೋವಾದ ಟ್ರಿನಿಟಿ ಆಂಗ್ಲಶಾಲೆಯಲ್ಲಿ ಅಧ