ಪೋಸ್ಟ್‌ಗಳು

ಜುಲೈ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಾರಾಜರ ಕಟ್ಟೆ !

ಇಮೇಜ್
  ಅಜ್ಜಂಪುರದ ಶೆಟ್ಟರ ಸಿದ್ಧಪ್ಪನವರ ಪ್ರೌಢಶಾಲೆ, ಕಾಲೇಜು ಆಗಿ ಪರಿವರ್ತನೆಯಾಗಿ ಅರ್ಧ ಶತಮಾನವೇ ಕಳೆದಿದೆ. ಈ ಭವ್ಯ ಕಟ್ಟಡವನ್ನು ಪ್ರವೇಶಿಸುತ್ತಿದ್ದಂತೆಯೇ ಪ್ರಾಂಗಣದಲ್ಲಿ  ಸಿಮೆಂಟಿನಿಂದ ರಚಿಸಿದ ಒಂದು ಕಟ್ಟೆ ಕಾಣುತ್ತದೆ. ಶಾಲೆಯ ಕಟ್ಟಡದ ಸುತ್ತಮುತ್ತ ಅಭಿವೃದ್ಧಿಗೆಂದು ಇದುವರೆಗೆ ಅನೇಕ ಕಾಮಗಾರಿಗಳು ನಡೆದಿವೆಯಾದರೂ, ಕಟ್ಟಡದ ಮುಂಭಾಗವನ್ನು ವಿರೂಪಗೊಳಿಸದೇ, ಅಲ್ಲಿರುವ ಕಟ್ಟೆಯನ್ನು ತೆಗೆಯದೇ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಈ ಕಟ್ಟೆಯೊಡನೆ ಶಾಲೆಗೊಂದು ಭಾವನಾತ್ಮಕ ಸಂಬಂಧವಿದೆ.  ಮಹಾರಾಜರ ಕಟ್ಟೆ ! ಅದೆಂದರೆ ಅಜ್ಜಂಪುರದ ಪುರಸಭೆಯು 1960ರಲ್ಲಿ ಕುಡಿಯುವ ನೀರು ಸರಬರಾಜಿನ ಉದ್ಘಾಟನೆಗೆಂದು ಅಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಆಹ್ವಾನಿಸಿತ್ತು. ಆ ಸಂದರ್ಭದಲ್ಲಿ ಮಹಾರಾಜರು ಉನ್ನತ ಸ್ಥಾನದಲ್ಲಿ ಕಂಗೊಳಿಸಬೇಕೆಂಬ ಉದ್ದೇಶದಿಂದ ಈ ಕಟ್ಟೆಯನ್ನು ನಿರ್ಮಿಸಲಾಯಿತು. ಮಹಾರಾಜರು ಅದರ ಮೇಲೆ ನಿಂತು ತಮ್ಮ ಭಾಷಣವನ್ನು ಮಾಡಿದರು. ಆ ಸವಿನೆನಪಿಗೆಂದು ಅದನ್ನು ಇಂದಿಗೂ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಊರಿನ ಪ್ರಮುಖರು, ಗಣ್ಯರು ಮಹಾರಾಜರನ್ನು ಸ್ವಾಗತಿಸಿದ್ದರು. ಅವರೆಲ್ಲ ಅಂದಿನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಅಪೂರ್ವ ಚಿತ್ರವನ್ನು ಅಜ್ಜಂಪುರದ ಹಿರಿಯರಾದ ಶ್ರೀ ಸತ್ಯನಾರಾಯಣ ಶೆಟ್ಟರು ಕಾಪಿಟ್ಟಿದ್ದಾರೆ.  ಇತ್ತೀಚೆಗಷ್ಟೇ ಫೇಸ್ ಬುಕ್ ನ