117. ತಾಮ್ರ ಕವಚದ ಪ್ರಾಚೀನ ಶಿವಲಿಂಗ
![ಇಮೇಜ್](https://blogger.googleusercontent.com/img/b/R29vZ2xl/AVvXsEgDdzPrqSQhvBdq5ilEzjkrdVTiYR_w6AZ5nQe8kImaeKFmTVTNWhA0FS1DmNP7eVRL0gLFY9HnKUm71A55ESw_W852zDOzs7NorHOx1N3r7GUjypgc6z3kARE9y87wQHZj3ue0DgwV73w/s1600/1638284611965696-0.png)
ಈ ವರ್ಷದ ನವೆಂಬರ್ ತಿಂಗಳಲ್ಲಿ ಅಜ್ಜಂಪುರಕ್ಕೆ ಭೇಟಿ ನೀಡಿದಾಗ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯದ ಅರ್ಚಕ ಅನೂಪ ಮಿತ್ರ ಒಂದು ಶಿವಲಿಂಗವನ್ನು ತೋರಿಸಿದರು. ತಾಮ್ರದ ಕವಚವುಳ್ಳ ಈ ಲಿಂಗವು ಅಜ್ಜಂಪುರದಲ್ಲೇ ಯಾರದೋ ಮನೆಯಲ್ಲಿ ಪೂಜಿಸಲ್ಪಡುತ್ತಿತ್ತು ಎಂದು ತೋರುವಂತಿದೆ. ಈ ಹಿಂದೆಯೂ ನಾನು ಈ ದೇಗುಲದಲ್ಲಿ ರುದ್ರಾಭಿಷೇಕ ಪೂಜೆಗಳಲ್ಲಿ ತೊಡಗಿಕೊಂಡಿದ್ದುಂಟು. ಆಗ ಈ ವಿಗ್ರಹವನ್ನು ನೋಡಿದ್ದೆನಾದರೂ, ಅದರ ಮೇಲೆ ಕೊಳೆ ಸೇರಿಕೊಂಡು ಕಲ್ಲಿನದೆಂದು ತೋರುವಂತಿತ್ತು. ಈಗ ಶುಚಿಗೊಳಿಸಿದ ನಂತರ ಅದರ ಮೂಲ ರೂಪ ಕಾಣುತ್ತಿದೆ. ಇದೊಂದು ಪ್ರಾಚೀನ ರಚನೆಯೆಂದು ಇಲ್ಲಿ ನಮೂದಿಸಲಾಗಿದೆ. - ಶಂಕರ ಅಜ್ಜಂಪುರ