ಪೋಸ್ಟ್‌ಗಳು

ಮಾರ್ಚ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

96. ಅಜ್ಜಂಪುರದಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಇಮೇಜ್
ದಿನಾಂಕ 23 ಫೆಬ್ರವರಿ 2019ರಂದು ಅಜ್ಜಂಪುರದಲ್ಲಿ ಸಾಹಿತ್ಯ ಸಮ್ಮೇಳನ ಜರುಗಿತು. ಅಜ್ಜಂಪುರವು ಇತ್ತೀಚೆಗೆ ತಾಲೂಕು ಆಗಿ ಪರಿವರ್ತನೆಯಾದ ಸಂದರ್ಭದಲ್ಲಿ, ಸಾಹಿತ್ಯ ಸಮ್ಮೇಳನ ನಡೆಸುವುದರ ಮೂಲಕ, ತಾಲೂಕಿನ ಅಸ್ತಿತ್ವವನ್ನು ಜಾಹೀರುಪಡಿಸಲು ಈ ಉತ್ಸವದ ಆಯೋಜನೆ ಸಹಕಾರಿಯಾಯಿತು.  ಮೊದಲ ಸಮ್ಮೇಳನವಾದ್ದರಿಂದ ಏರ್ಪಾಡಿನ ವ್ಯವಸ್ಥೆಗಳಲ್ಲಿ ಕೊಂಚ ಏರುಪೇರಾದುದು ಸ್ವಾಭಾವಿಕ. ಆದರೆ ಸಾಹಿತ್ಯ ಸಮ್ಮೇಳನವೆನ್ನುವುದು ನೆಪಮಾತ್ರದಂತೆ ಆಯಿತೆನ್ನಲು ಇಂದು ಸಾಹಿತ್ಯಕ್ಕಿಂತಲೂ, ಸಾಹಿತಿಗಳ ಕುರಿತಾದ ಮನೋಭಾವ ಬದಲಾಗಿರುವುದು ಕಾರಣ ಎನ್ನುವುದು ಎದ್ದು ಕಾಣುವಂತಿತ್ತು. ಸಾಹಿತಿಗಳನ್ನು ಗೌರವದಿಂದ, ಆರಾಧನಾ ಭಾವದಿಂದ ನೋಡುವ ದಿನಗಳಿದ್ದವು. ಬರೆಯುವುದು, ಬದುಕುವುದು ಪ್ರತ್ಯೇಕ ಎನ್ನುವಂತಿರದ ಆ ದಿನಗಳಲ್ಲಿ, ಅಂಥ ಗೌರವ ಸಹಜವಾಗಿತ್ತು. ಆದರೆ ಸಾಹಿತಿಗಳಷ್ಟೇ ಅಲ್ಲದೆ, ಸಾಹಿತ್ಯ ಕೃತಿಗಳ ಮೌಲ್ಯಗಳು ಅಧೋಗತಿಗೆ ಇಳಿದುದರ  ಪರಿಣಾಮಗಳು, ಸಾಹಿತ್ಯವಷ್ಟೇ ಅಲ್ಲದೆ,  ಜೀವನಕ್ಕೆ ಸಂಬಂಧಿಸಿದ  ಇತರ ಅಂಶಗಳೂ ಈ ವೇದಿಕೆಯಲ್ಲಿ ಮೆರೆಯಬೇಕೆಂಬುದು ಸಹಜ ನಿಲುವಾಗಿ ಪರಿಣಮಿಸಿತು. ಈ ಅಂಶಗಳನ್ನೇ ಸಮ್ಮೇಳನಕ್ಕೆ ಆಗಮಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಗೊ.ರು. ಚನ್ನಬಸಪ್ಪನವರು ಹಾಗೂ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರತಿಪಾದಿಸಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಖ್ಯಾತ ರಂ