ಅಜ್ಜಂಪುರ ಸೀತಾರಾಂ
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ! ಪತ್ರಿಕೆಗಳು ರಾಜ್ಯೋತ್ಸವಕ್ಕೆಂದು ವಿಶೇಷ ಸಂಚಿಕೆಗಳನ್ನು ಹೊರತರುತ್ತವೆ. ನಾನು ನನ್ನ ಬ್ಲಾಗ್ ನ ಸಲುವಾಗಿ ಈ ಬಾರಿ ಅಜ್ಜಂಪುರ ಆನಂದರನ್ನು ಕುರಿತಾಗಿನ ವಿಶೇಷ ಲೇಖನ ಪ್ರಕಟಿಸಬೇಕೆಂದುಕೊಂಡಿದ್ದೆ. ಇದಕ್ಕೆಂದು ಸಂಗ್ರಹಿಸಿದ್ದ ಮಾಹಿತಿಗಳು ನಾನು ಅಮೆರಿಕದ ಪ್ರವಾಸದ ಇರುವ ಈ ಹೊತ್ತಿನಲ್ಲಿ ದೊರಕುವಂತಿರಲಿಲ್ಲವೆಂಬ ಯೋಚನೆಯಿತ್ತು. ಆದರೆ ಹೊಯ್ಸಳ ಕರ್ನಾಟಕ ಬಳಗದ ಗೆಳೆಯ ಸುನೀಲ್ ರನ್ನು ಸಂಪರ್ಕಿಸಿದಾಗ ತಮ್ಮ ಮಾಹಿತಿ ಸಂಗ್ರಹದಿಂದ ಕಳಿಸಿಕೊಟ್ಟರು. ಅವರಿಗೆ ಧನ್ಯವಾದಗಳು. ಅವರನ್ನು ಕುರಿತಾದ ಸುನೀಲ್ ಹಳೆಯೂರು ಸಂಗ್ರಹಿಸಿ ರು ವ ವಿಸ್ತೃತ ಲೇಖನ ಇಲ್ಲಿದೆ. ಅಂತೆಯೇ ಹೊಯ್ಸಳ ಕರ್ನಾಟಕ ಸಾಧಕರು ಮಾಲೆಯಲ್ಲಿ ಒಂದು ಕಿರುಪುಸ್ತಕವೂ ಪ್ರಕಟವಾಗಿದೆ. ಆನಂದ ರ ನಿಜವಾದ ಹೆಸರು ಅಜ್ಜಂಪುರ ಸೀತಾರಾಂ. ಇವರ ಸಂಬಂಧಿಗಳೇ ಆದ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿಗಳ ಬಗ್ಗೆ ಒಂದು ಲೇಖನ ಬ್ಲಾಗ್ ನಲ್ಲಿ ಪ್ರಕಟವಾಗಿದೆ. ಕೊನೆ ಸಿಡಿ : ಅಜ್ಜಂಪುರದಲ್ಲಿ ಸೀತಾರಾಂ ಇವರ ಹೆಸರನ್ನು ಒಂದು ರಸ್ತೆಗೆ ಇಡಲಾಗಿದೆಯೆಂದು ತಿಳಿದು ಸಂತೋಷವಾಯಿತು. ಇದಕ್ಕೆಂದು ಅಜ್ಜಂಪುರದಲ್ಲಿರುವ ನನ್ನ ಗೆಳೆಯನಿಗೆ ಈ ಚಿತ್ರವನ್ನು ಕಳಿಸಿಕೊಡಬೇಕೆಂದು ಕೋರಿದೆ. ಈ ಲೇಖನದೊಡನೆ ಚಿತ್ರವನ್ನು ಪ್ರಕಟಿಸಬೇಕೆಂದು ಆಶಿಸಿದೆ. ಅವ...