ಪೋಸ್ಟ್‌ಗಳು

ಮೇ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

7 ಹಳ್ಳಿ, 18 ಮಾಗಣಿ, ಅಜ್ಜಂಪುರ ಸೀಮೆ !

ಇಮೇಜ್
ಶೀರ್ಷಿಕೆ ಸೇರಿಸಿ ಏಪ್ರಿಲ್ 23 ರಿಂದ ಮೇ 1ರವರೆಗೆ ಅಜ್ಜಂಪುರಕ್ಕೆ ಏಳು ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ ಸೊಲ್ಲಾಪುರದಲ್ಲಿ ಶ್ರೀ ಸಿದ್ಧರಾಮೇಶ್ವರ ಜಾತ್ರೆಯ ಸಂಭ್ರಮ. ನನ್ನ 18-20 ವಯಸ್ಸಿನ ವರೆಗೂ ಅಜ್ಜಂಪುರದಲ್ಲೇ ಇದ್ದೆನಾದರೂ, ಒಮ್ಮೆಯೂ ಇಲ್ಲಿಗೆ ಹೋಗಲಾಗಿರಲಿಲ್ಲ. ಆದರೆ ಪ್ರತಿ 12 ವರ್ಷಕ್ಕೆ ನಡೆಯುವ ಈ ಜಾತ್ರೆಗೆ ಅಜ್ಜಂಪುರವೇ ಸೀಮೆಯೆಂಬ ಅಂಶ ತಿಳಿದದ್ದು ಇತ್ತೀಚೆಗೆ. ನನ್ನ ಗುರುಗಳಾದ ಚಂದ್ರಪ್ಪ ಮಾಸ್ತರರು ದೂರದ ಕುಶಾಲನಗರದಿಂದ ಫೋನ್ ಮಾಡಿ ಈ ಜಾತ್ರೆಯ ವಿವರಗಳನ್ನು ತಿಳಿಸಿ, ನೀನು ಅಲ್ಲಿಗೆ ಹೋಗಿ ನೋಡಿಕೊಂಡು ಬಾ ಎಂದಿದ್ದರು. ಹೀಗಾಗಿ ಗೆಳೆಯ ಅಪ್ಪಾಜಿಯೊಡನೆ ಸೊಲ್ಲಾಪುರಕ್ಕೆ ತೆರಳಿ, ಅಲ್ಲಿನ ಹಿರಿಯರನ್ನು ಸಂದರ್ಶಿಸಿ, ಸಂಗ್ರಹಿಸಿದ ವಿವರಗಳನ್ನು ಇಲ್ಲಿ ನೀಡಿದ್ದೇನೆ.  ಉಯ್ಯಾಲೆ ಮಂಟಪ ಅಜ್ಜಂಪುರ ಮೂಲತಃ ಕೃಷಿ ಪ್ರಧಾನ ಜೀವನಶೈಲಿಯನ್ನು ಹೊಂದಿರುವಂಥದು. ಸ್ವಾಭಾವಿಕವಾಗಿ ಇಲ್ಲಿನ ಕೃಷಿ ಸಂಬಂಧಿತ ಆಚರಣೆಗಳ, ಕಲೆಗಳ ಮೂಲಸತ್ವ ಹಾಗೆಯೇ ಉಳಿದುಬಂದಿದೆ. ಮನುಷ್ಯರಿಗೆ ಇರುವ ಸಾಮುದಾಯಿಕ ಸಂಬಂಧಗಳಂತೆಯೇ, ಇಂಥ ಆಚರಣೆಗಳ ಮೂಲಕ ಸಾಂಪ್ರದಾಯಿಕ ಸಂಬಂಧಗಳ ಕಾರಣದಿಂದ ಊರುಗಳ ನಡುವೆಯೂ ಬಂಧುತ್ವ, ಹೊಂದಾಣಿಕೆಗಳನ್ನು ಸಿದ್ಧರಾಮಣ್ಣನು ರೂಢಿಸಿರುವುದು ಆತನ ವಿಶಾಲ ದೃಷ್ಟಿಗೆ ಸಾಕ್ಷಿಯಾಗಿದೆ. ಇದಕ್ಕೆ ಉದಾಹರಣೆಯಾಗಿ, ಸೊಲ್ಲಾಪುರದ ಶ್ರೀ ಸಿದ್ಧರಾಮೇಶ್ವರ ಜಾತ್ರೆಯ ಆಚರಣೆಯಲ್ಲಿಯೂ ಈ ಅಂಶಗಳು ಗೋಚರಿಸುತ್