ಪೋಸ್ಟ್‌ಗಳು

ಜೂನ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

01. ಅಂತರಜಾಲದಲ್ಲಿ ಅಜ್ಜಂಪುರ

ಅಜ್ಜಂಪುರದ ಆತ್ಮೀಯ ಬಂಧುಗಳೇ ಇದು ನನ್ನ ಹೊಸ ಬ್ಲಾಗ್. ದಶಕಗಳ ಹಿಂದೆ ತರೀಕೆರೆ ಅಂಚೆವಾರ್ತೆಯ ಸಂಪಾದಕ ಶ್ರೀ ಅಂಚೆ ನಾಗಭೂಷಣರನ್ನು ಭೇಟಿಮಾಡಿದ್ದಾಗ ಅವರೊಂದು ವಿಷಯ ಪ್ರಸ್ತಾಪಿಸಿದ್ದರು. ಅದು ನಾನು ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದ ಪುನರ್ ಪ್ರತಿಷ್ಠಾಪನೆಯ ಸಂದರ್ಭ. ಆಗ ನಾನು ಈ ದೇವಾಲಯ ಬೆಳೆದು ಬಂದ ಹಾದಿಯನ್ನು ಚಿತ್ರ ಮತ್ತು ಮಾಹಿತಿಗಳ ಸಹಿತವಾದ ಒಂದು ಗಣಕ ಪ್ರಾತ್ಯಕ್ಷಿಕೆಯನ್ನು ನೀಡಿದ್ದೆ. ಆ ಯತ್ನವನ್ನು ಗುರುತಿಸಿ, ಬೆಂಬಲಿಸಿ ಅಂಚೆ ನಾಗಭೂಷಣರು ಹೀಗೆ ಹೇಳಿದ್ದರು: "ಒಂದು ಊರಿನ ಇತಿಹಾಸವನ್ನು ದಾಖಲಿಸುವಲ್ಲಿ ಇಂತಹ ಪ್ರಯತ್ನಗಳು ಸ್ವಾಗತಾರ್ಹ. ಇದೇ ರೀತಿ ನೀವು ಅಜ್ಜಂಪುರದಲ್ಲಿ ಬಾಳಿ ಬದುಕಿದ ಹಿರಿಯರ ಚಿತ್ರ-ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸುವಂತಾದರೆ ಅದಕ್ಕೆ ಮಹತ್ವ ಬರುತ್ತದೆ. ಈ ಕೆಲಸವನ್ನು ಸ್ಥಳೀಕರು ಮಾಡಿದಲ್ಲಿ ಅದಕ್ಕೆ ಹೆಚ್ಚಿನ ವಜನು ಬರುತ್ತದೆ". ಇದಲ್ಲದೆ ನಾನು ಸಂಪಾದಿಸುತ್ತಿರುವ ನಮ್ಮ ಕುಲದೇವತೆ ಶ್ರೀ ಕಾಲಭೈರವನ ಬ್ಲಾಗ್ (Link : kalabhiaravablogspot.com ) ನಲ್ಲಿ ಅಜ್ಜಂಪುರದ ಹಿರಿಯರಾದ ಶ್ರೀ ಭೈರಾಭಟ್ಟರ ಭಾವಚಿತ್ರ ಸಹಿತ ಒಂದು ಲೇಖನವನ್ನು ಪ್ರಕಟಿಸಿದ್ದೆ. ಅದನ್ನು ನೋಡಿದ ನನ್ನ ಮಿತ್ರ ಅಜ್ಜಂಪುರ ಮಂಜುನಾಥ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಅಜ್ಜಂಪುರದ ನೆನಪಿನ ಮೆರವಣಿಗೆಯಿದು ಎಂಬ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಇದು ಕೂಡ ಅಜ್ಜಂಪುರವನ್ನು ಅಂತರಜಾಲದಲ್