ಪೋಸ್ಟ್‌ಗಳು

ಮಾರ್ಚ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

106. ಮೇಜರ್ ಜನರಲ್ ಬಿ.ಎಸ್. ರಾಜು, ಬಗ್ಗವಳ್ಳಿ

ಇಮೇಜ್
ಭಾರತೀಯ ಸೈನ್ಯದಲ್ಲಿ ಸೇರಿ ಸೇವೆ ಸಲ್ಲಿಸುತ್ತಿರುವವರಲ್ಲಿ ಅಜ್ಜಂಪುರ ತಾಲೂಕಿನ ಜನರ ಕೊಡುಗೆಯೂ ಇದೆ ಎನ್ನುವುದು ಹೆಮ್ಮೆಯ ವಿಷಯ. ಅನೇಕರು ಸಿಪಾಯಿಗಳಾಗಿ ದುಡಿಯುತ್ತಿರುವಂತೆ, ಅಜ್ಜಂಪುರ ಸಮೀಪದ ಗ್ರಾಮ ಬಗ್ಗವಳ್ಳಿಯಿಂದ ಸೈನ್ಯಕ್ಕೆ ಸೇರಿ, ಉನ್ನತ ಹುದ್ದೆಗೆ ಏರಿರುವ ಶ್ರೀ ಬಿ.ಎಸ್. ರಾಜು ಇವರನ್ನು 16-04-2018 ರಲ್ಲಿ ಬಗ್ಗವಳ್ಳಿಯ ಗ್ರಾಮಸ್ಥರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಮಿತ್ರ ಜಿ.ಬಿ. ಅಪ್ಪಾಜಿ ರಾಜು ಅವರೊಂದಿಗೆ ಮಾತನಾಡಿದ್ದರು. ಅದರ ವಿವರಗಳು ಈ ಸಂಚಿಕೆಯಲ್ಲಿದೆ. ಶಂಕರ  ಅಜ್ಜಂಪುರ ಸಂಪಾದಕರು, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ - 91485 72483 ಹನ್ನೆರಡನೆಯ ಶತಮಾನದ ಪ್ರಾರಂಭ ಕಾಲದಲ್ಲಿ‌ ಹೊಯ್ಸಳ ಸಾಮ್ರಾಜ್ಯದ ದೊರೆ ಕಟ್ಟಿಸಿದ ಯೋಗನರಸಿಂಹ ದೇವಾಲಯವಿರುವ ಬಗ್ಗವಳ್ಳಿಗೆ ಐತಿಹಾಸಿಕತೆ ಗರಿಮೆ‌ ಇದೆ. ಈಗ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಅವರ ಧೀರೋದಾತ್ತ ವ್ಯಕ್ತಿತ್ವದಿಂದಾಗಿ ಇನ್ನೊಂದು ಬಗೆಯ ಹಿರಿಮೆಯೂ ಕೂಡಿಬಂದಿದೆ. ಅವರು ಬಗ್ಗವಳ್ಳಿ ಅಷ್ಟೇ ಏಕೆ ಕನ್ನಡಿಗರೆಲ್ಲ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ.  ಇತ್ತೀಚೆಗೆ ಮೇಜರ್ ಜನರಲ್ ಆಗಿ ನಿವೃತ್ತಿ ಹೊಂದಿದ ಬಗ್ಗವಳ್ಳಿ ಸೋಮಶೇಖರ್ ರಾಜು  (ಬಿ.ಎಸ್. ರಾಜು) ಬಗ್ಗವಳ್ಳಿಯ ಗ್ರಾಮಸ್ಥರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಾನೂ ಅಲ್ಲಿದ್ದೆನಾದ್ದರಿಂದ, ರಾಜು ಅವರೊಂದಿಗೆ ಮಾತನಾಡುವ ಸದವಕಾಶ ದೊರ