ಪೋಸ್ಟ್‌ಗಳು

ನವೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
 ನನ್ನೂರು ಅಜ್ಜಂಪುರದ ಅತ್ಯಂತ ಹಿರಿಯ ಚುನಾಯಿತ ಪ್ರತಿನಿಧಿ ಶ್ರೀ ಗೋಪಾಲಪ್ಪ ಒಬ್ಬರು ಇವರ ಪರಿಚಯ ಈಗಿನ ಬಹುತೇಕ ಜನರಿಗೆ ತಿಳಿದೇ ಇಲ್ಲ ಅಜ್ಜಂಪುರ ಪುರಸಭೆಯ ಇತಿಹಾಸದಲ್ಲಿ ಪ್ರಸ್ತುತ ಇರುವ ಅತಿ ಹಿರಿಯ ಚುನಾಯಿತ ಪ್ರತಿನಿಧಿ ಎಂದರೆ ಶ್ರೀ ಗೋಪಾಲಪ್ಪ ಇವರ ಕಿರು ಪರಿಚಯ ಈ  ಬರಹದ ಉದ್ದೇಶ  ರಾಜಕಾರಣಕ್ಕೆ ವಿದ್ಯಾವಂತರು ತೊಡಗಿಸಿಕೊಳ್ಳದ  ಕಾಲ ಒಂದಿತ್ತು ದಿವಂಗತ ಶೆಟ್ರು ಸಿದ್ದಪ್ಪನವರ ನಂತರ ಪುರಸಭೆಯ ಅಧ್ಯಕ್ಷರಾದ ಶ್ರೀಕರಿಸಿದ್ದಪ್ಪ  ಇವರು ಬಿ. ಎ., ಎಲ್. ಎಲ್. ಬಿ., ಪದವೀಧರರಾಗಿದ್ದರೆ ನಂತರ ಪದವೀಧರ ಚುನಾಯಿತ  ಪ್ರತಿನಿಧಿಯನ್ನು ನೋಡಲು ಸುಮಾರು 40 ವರ್ಷಗಳ ಕಾಯ ಬೇಕಾಯಿತು 1993 ರಲ್ಲಿ ಚುನಾಯಿತರಾದ ಬಿಕಾಂ ಪದವೀಧರರಾದ ಎಸಿ ಚಂದ್ರಪ್ಪ ನಂತರದ ಅಧ್ಯಕ್ಷರಾದರೆ ಈ ನಡುವೆ ಡಿಪ್ಲೋಮಾ ಎಂಜಿನಿಯರಿಂಗ್ ಪದವೀಧರರಾದ ಗೋಪಾಲಪ್ಪನವರು 1967 ರಲ್ಲಿ ಚುನಾಯಿತರಾಗಿ 69 ರಲ್ಲಿ ಪುರಸಭೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ನನ್ನ ತಂದೆಯ ಬಾಲ್ಯ ಸ್ನೇಹಿತರಾಗಿದ್ದು ಪ್ರಸ್ತುತ ಇವರಿಗೆ 85 ವರ್ಷ ವಯಸ್ಸಾಗಿದ್ದು ಇತ್ತೀಚೆಗೆ ಅವರನ್ನು ಭೇಟಿ ಮಾಡಿದಾಗ ತಮ್ಮ ಕಾಲದ ರಾಜಕೀಯ ದಿನಗಳನ್ನು ನನ್ನೊಂದಿಗೆ ಹಂಚಿಕೊಂಡರು.  ಡಿಪ್ಲೋಮೋ ಅಂತಿಮ ವರ್ಷದ ಪರೀಕ್ಷೆಯನ್ನು ಮುಗಿಸಿ ಊರಿಗೆ ಬಂದಾಗ ಊರಿನಲ್ಲಿ ಪುರಸಭೆ ಚುನಾವಣೆ ಹೊಸ್ತಿಲಿನಲ್ಲಿದ್ದು ಸ್ನೇಹಿತರು ಮತ್ತು ಬಂಧುಗಳು ಒತ್ತಾಯಕ್ಕೆ ಮಣಿದು ಚುನಾವಣೆಗೆ ನಿಂ...

128) ಅಪರೂಪದ ವೈದ್ಯ ಡಾ. ನಾಗರಾಜ್

ಇಮೇಜ್
ಐದು ದಶಕಗಳ ಸಾರ್ಥಕ ಸೇವೆ                                     - ಅಪೂರ್ವ ಅಜ್ಜಂಪುರ ಅಜ್ಜಂಪುರದ ಜಿ.ಎಂ. ಬಸಪ್ಪನವರ ಕಿರಾಣಿ ಅಂಗಡಿ ಬೆಂಚಿನ ಮೇಲೆ ಬ್ರಿಟಿಷ್‌   ಜೇಮ್ಸ್ ಬಾಂಡ್ ಸಿನೆಮಾ ಖ್ಯಾತಿಯ ಶಾನ್ ಕಾನರಿಯಂತೆ(Sean Connery) ದಟ್ಟ ಹಾಗೂ ದಪ್ಪವಾದ ಕಪ್ಪು‌ಹುಬ್ಬಿನ ಒಬ್ಬ ವ್ಯಕ್ತಿ ಕುಳಿತಿದ್ದರು. ಬಿಳಿವರ್ಣದ ಅವರಿಗೆ ಅವರ ವಿಶಿಷ್ಟ ಹುಬ್ಬುಗಳು ಎರಡು ಕಮಾನುಗಳ ಆಕಾರದಲ್ಲಿ ದೃಷ್ಟಿಬೊಟ್ಟುಗಳಂತೆ ಎದ್ದು ಕಾಣಿಸುತ್ತಿದ್ದವು.  ಪೂರ್ಣ ಮುಖ‌ಕ್ಷೌರ ಮಾಡಿಕೊಂಡಿದ್ದ ಆ ವ್ಯಕ್ತಿ ಅಚ್ಚ  ಬಿಳಿ ಬಣ್ಣದ ತುಂಡು ತೋಳಿನ ಅಂಗಿ  ಮತ್ತು ಕಡು ಛಾಯೆಯ ಪ್ಯಾಂಟ್ ಧರಿಸಿದ್ದರು .  ಒಂದು ಮಳಿಗೆಯನ್ನು ತಮ್ಮ  ಕ್ಲಿನಿಕ್ಕಿಗಾಗಿ ಬಾಡಿಗೆ ಪಡೆಯಲು ಬಸಪ್ಪನವರ ಬಳಿ ಬಂದಿದ್ದರು. ಅವರ ಜೊತೆ ದಾವಣಗೆರೆಯಿಂದ ಒಬ್ಬ ವ್ಯಕ್ತಿ (ಶೆಟ್ರು ಸಿದ್ದಪ್ಪನವರ ಸಂಬಂಧಿಯಂತೆ) ಬಂದಿದ್ದರು.  ಬೆಂಚಿನ ಮೇಲೆ ಕುಳಿತಿದ್ದ ವ್ಯಕ್ತಿಯೇ ಬಿ.ಎಸ್. ನಾಗರಾಜ್. ಅವರು ದಾವಣಗೆರೆಯಲ್ಲಿ ಎಂ.ಬಿ.ಬಿ. ಎಸ್. ಮಾಡಿ ಕೆಲವೇ ವರ್ಷಗಳಾಗಿದ್ದವು. ಶೆಟ್ಟರ ಸಂಬಂಧಿಯಾದ ವ್ಯಕ್ತಿಯು ನಿಮ್ಮ ಮಳಿಗೆಯನ್ನು ನಾಗರಾಜ್ ಡಾಕ್ಟರಿಗೆ ಬಾಡಿಗೆ ಕೊಡಿ ಎಂದು ಶಿಫಾರಸು ಮಾಡಿದರು.  ಈ ಹಿಂದೆ ಅದೇ ಮಳಿಗೆಯಲ್ಲಿ ...

128) ಸರಳ ವ್ಯಕ್ತಿತ್ವದ ಅಜ್ಜಂಪುರದ ಜನಪ್ರಿಯ ವೈದ್ಯ ಡಾ| ಬಿ.ಎಸ್.ನಾಗರಾಜ್

 ವೈದ್ಯ ವೃತ್ತಿಯನ್ನು ಸೇವೆ ಎಂದು ಪರಿಗಣಿಸಿ ದುಡಿದು ಹೆಸರು ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸಿದ ಅನೇಕ ವೈದ್ಯ ಮಹನೀಯರು ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದವರೇ ಆಗಿದ್ದಾರೆ. ಅದಕ್ಕೆ ವೈದ್ಯಕೀಯ ವೃತ್ತಿಗೆ ಅಂದು ಇದ್ದ ಗೌರವ ಮತ್ತು ಘನತೆಗಳೇ ಕಾರಣ.  ಗ್ರಾಮೀಣ ಪ್ರದೇಶಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ದುಡಿದ ವೈದ್ಯರು, ಖಾಸಗಿ ವಲಯದ ವೈದ್ಯರು ಕೂಡ ಕೇವಲ ಎಂ ಬಿ ಬಿ ಎಸ್ ಮಾಡಿ ಜನರ ಆರೋಗ್ಯವನ್ನು ಕಾಪಾಡಿದವರು. ಅಂಥ ವೈದ್ಯರು ಜನರ ಸ್ಮರಣೆಯಲ್ಲಿ ಎಂದಿಗೂ ಇರುತ್ತಾರೆ. ಹಾಗೆ ನನ್ನ ಊರು ಅಜ್ಜಂಪುರದಲ್ಲಿ ನಾನು ನೆನಪಿಸಿಕೊಳ್ಳುವ ಇಬ್ಬರು ವೈದ್ಯರೆಂದರೆ ಹಿಂದೆ ಇದ್ದ ಹೋಮಿಯೋಪತಿ ವೈದ್ಯ ಡಾಕ್ಟರ್ ಕರೀಮ್ ಖಾನ್ ಮತ್ತು ಸುಮಾರು ಅರ್ಧ ದಶಕಗಳ ಕಾಲ ವೈದ್ಯಕೀಯ ಸೇವೆಯನ್ನು ನೀಡಿದ ಡಾ. ಬಿ. ಎಸ್. ನಾಗರಾಜ್.  ಡಾ. ಬಿ.ಎಸ್. ನಾಗರಾಜ್ ಅಲ್ಪ ಕಾಲದ ಅಸ್ವಸ್ಥತೆಯ ನಂತರ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕೋಟೆಯಲ್ಲಿ ವಾಸವಾಗಿದ್ದ ಈ ವೈದ್ಯರು ನಮ್ಮ ಕುಟುಂಬ ಮಾತ್ರವಲ್ಲದೆ ಊರಿನ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು.  ಕಪ್ಪು ಪ್ಯಾಂಟು ಬಿಳಿಯ ಬುಷ್ ಶರ್ಟಿನಲ್ಲಿ ಇರುತ್ತಿದ್ದ ಎತ್ತರದ ನಿಲುವಿನ ಡಾ. ನಾಗರಾಜ್ ಎಂದೂ ಆಡಂಬರಕ್ಕಾಗಲೀ, ದುಬಾರಿ ವೆಚ್ಚದ ಚಿಕಿತ್ಸೆಗಳಿಗಾಗಲೀ ಗಮನ ನೀಡಿದವರಲ್ಲ.  ಅವರು ಅಜ್ಜಂಪುರಕ್ಕೆ ಬಂದ ದಿನಗಳಲ್ಲಿ ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯನವರು ನೀಡಿದ ಸಹಕಾರದ ಬಗ್ಗೆ ವಿಶೇ...