99. ಗೀತಾಮಿತ್ರ – ಸುವರ್ಣ ಸಂಭ್ರಮ
ಅಜ್ಜಂಪುರಕ್ಕೆ ಸಂಬಂಧಿಸಿದಂತೆ ಗೀತಾಮಿತ್ರ ಆಧ್ಯಾತ್ಮಿಕ ಮಾಸ ಪತ್ರಿಕೆಯನ್ನು ಪ್ರಸ್ತಾಪಿಸದಿದ್ದರೆ ಅದು ಅಪೂರ್ಣವೇ ಸರಿ. 1963ರಲ್ಲಿ ಆರಂಭವಾಗಿ 2012ಕ್ಕೆ ಐವತ್ತು ವರ್ಷ ತುಂಬಿದ, ಭಗವದ್ಗೀತೆಯ ಪ್ರಸಾರಕ್ಕೆಂದೇ ಮೀಸಲಾದ ಈ ಪತ್ರಿಕೆಯ ಉಲ್ಲೇಖ 2012ರಲ್ಲೇ ಈ ಬ್ಲಾಗ್ ನಲ್ಲಿ ಪ್ರಸ್ತಾಪವಾಗಬೇಕಿತ್ತು. ಆದರೆ ಸೂಕ್ತ ಸಂವಹನದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಆದರೆ ಇದಕ್ಕೆ ಪೂರಕವಾಗಿ ಈ ಬ್ಲಾಗ್ ನಲ್ಲಿ, ಈ ಪತ್ರಿಕೆಯ ಸಂಪಾದಕ ಶ್ರೀ ಸುಬ್ರಹ್ಮಣ್ಯಶೆಟ್ಟರು, ಅಜ್ಜಂಪುರದಲ್ಲಿ ಗೀತೆಯ ಮೂಲಸ್ರೋತವಾದ ಶ್ರೀ ಶಿವಾನಂದಾಶ್ರಮ, ಇನ್ನೋರ್ವ ಸಂಪಾದಕ ಶ್ರೀ ರಾಜಗೋಪಾಲ ಗುಪ್ತರು ಮುಂತಾಗಿ ಹಲವಾರು ಲೇಖನಗಳು ಪ್ರಕಟವಾಗಿರುವುದುಂಟು. ಸುವರ್ಣ ಸಂಚಿಕೆಯ ಸಂಭ್ರಮದ ವರದಿ ಆಗ ಸಾಧ್ಯವಾಗದ್ದು, ಈಗ ಇಲ್ಲಿದೆ. ಗೀತಾಮಿತ್ರದ ಮೊದಲ ಸಂಪಾದಕ ಶ್ರೀ ಎಸ್. ಸುಬ್ರಹ್ಮಣ್ಯಶೆಟ್ಟರು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅಜ್ಜಂಪುರದಲ್ಲಿ ಶ್ರೀ ಶಂಕರಾನಂದ ಸ್ವಾಮಿಗಳು ಬಂದು ನೆಲೆಸಿದಾಗ, ಶ್ರೀ ಸುಬ್ರಹ್ಮಣ್ಯ ಶೆಟ್ಟರಿಗೆ ಅವರ ಬಗ್ಗೆ ಒಂದು ವಿಶೇಷವಾದ ಆಕರ್ಷಣೆ. ಅವರ ಪ್ರವಚನಗಳಿಂದ ಪ್ರಭಾವಿತರಾಗಿ, ಇದನ್ನು ಗ್ರಂಥಸ್ಥಗೊಳಿಸಬೇಕೆಂಬ ನಿರ್ಧಾರದಿಂದ ಒಂದು ಪತ್ರಿಕೆಯನ್ನು ಆರಂಭಿಸಿದರು. ಆಗ ಮುದ್ರಣ ಸೌಲಭ್ಯವೂ ಸುಲಭವಾಗಿರಲಿಲ್ಲ. ಇಂದು ಬಹುವರ್ಣದ ಮುದ್ರಣ ತುಂಬ ಸುಲಭವಾಗಿದೆ. ಆದರೆ ಕಳೆದ ಶತಮಾನದ 60ರ ದಶಕದಲ್ಲಿ ಇದು ಸುಲಭ ಸಾಧ್ಯವಿರಲಿಲ್