105. "ಅಜ್ಜಂಪುರ" ಸ್ಥಳನಾಮದ ಸುತ್ತ...........!
ಆತ್ಮೀಯ ಓದುಗರೇ,
ದಿನಾಂಕ 16-02-2020 ರಂದು ವಾಗರ್ಥವೆಂಬ ಫೇಸ್ ಬುಕ್ ಅಂಕಣದಲ್ಲಿ ಪ್ರಕಟವಾದ ಶ್ರೀ ಮಾಧವ ಅಜ್ಜಂಪುರ ಅವರ ಕಿರುಬರಹವು ಅಜ್ಜಂಪುರದ ಸ್ಥಳನಾಮದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಅವರ ಆಸ್ಥೆಯನ್ನು ಮೆಚ್ಚುತ್ತೇನೆ. ಇದು ಸಾಮಾಜಿಕ ಜಾಲತಾಣದ ಶಕ್ತಿಯೂ ಹೌದು. ಒಂದು ವಿಷಯದ ಬಗ್ಗೆ ಚರ್ಚೆ ಆರಂಭವಾಯಿತೆಂದರೆ, ಅದಕ್ಕೆ ಇರುವ ಹಲವು ಆಯಾಮಗಳು ಹೊರಬರುತ್ತವೆ. ಹೊಸ ಸಂಗತಿಗಳು ತಿಳಿಯುತ್ತವೆ. ಈ ಕಾರಣದಿಂದ ಇದುವರೆಗೆ ಪ್ರಕಟವಾದ ಅಭಿಪ್ರಾಯಗಳನ್ನು ಇಲ್ಲಿ ದಾಖಲು ಮಾಡಿರುವೆ. ನನ್ನ ಅಭಿಪ್ರಾಯವನ್ನೂ ನಮೂದಿಸಿರುವೆ. ಅನೇಕರು ಈ ವಿಷಯದ ಕುರಿತು ಆಸಕ್ತಿಯಿಂದ ಸ್ಪಂದಿಸಿದ್ದಾರೆ. ಶಾಸನಾಧಾರಿತ ಮಾಹಿತಿಗಳನ್ನು ಹುಡುಕುವಂತೆ ಸಲಹೆ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು. ಈ ಕುರಿತು ಇನ್ನಷ್ಟು ಮಾಹಿತಿಗಳು ದೊರೆತಂತೆಲ್ಲ ಅದನ್ನೂ ಇಲ್ಲಿಯೇ ಸೇರಿಸಲಾಗುವುದು.

14 hrs ·
ಈಚೆಗೆ ನನ್ನ surname ಆಗಿರುವ "ಅಜ್ಜಂಪುರ"ದ ಬಗ್ಗೆ ಒಂದು ಸ್ವಾರಸ್ಯವಾದ ಕತೆ ಕೇಳಿದೆ. ಅದರ ತಾತ್ಪರ್ಯ ಹೀಗಿತ್ತು:
"ಅಜ್ಜಂಪುರ" ಎಂಬುದು "ಅಮ್ಮಿಜಾನ್ ಪುರ" ಆಗಿತ್ತು. ಅಮ್ಮಿಜಾನ್ ಎಂಬ ಒಬ್ಬ ಮುಸಲ್ಮಾನರು ಆ ಊರಲ್ಲಿ ನಡೆಯುವ ಸುಮಾರು ಎಲ್ಲ ಕಾರ್ಯಕ್ರಮಗಳಿಗೆ ಸಹಾಯ ನೀಡುತ್ತಿದ್ದರು. ಆದ್ದರಿಂದ, ಆ ಊರಿನ ಹೆಸರು 'ಅಮ್ಮಿ ಜಾನ್ ಪುರ' ಆಯಿತು. ಕಾಲಕ್ರಮೇಣ ಅದು "ಅಜ್ಜಂಪುರ"ವಾಯಿತು.
ಹಾಗೆ, ಈ ಮಾತಾಡಿದವರು (ಅವರ ಕತೆಯ ಸಮರ್ಥಿಸುವಂತೆ) ಇನ್ನೊಂದು ಮಾತೂ ನುಡಿದರು.
ಅದರ ತಾತ್ಪರ್ಯ: "ಅಜ್ಜಂಪುರ" ಎಂಬ ಹೆಸರು ಕನ್ನಡದ ಜಾಯಮಾನಕ್ಕೆ ಸಲ್ಲದ ಹೆಸರು.
"ಅಜ್ಜಂಪುರ" ಸ್ಥಳನಾಮ ವ್ಯುತ್ಪತ್ತಿ :
ಪ್ರತ್ಯುತ್ತರಅಳಿಸಿ"ಅಜ್ಜಂಪುರ" ಸ್ಥಳನಾಮ ವ್ಯುತ್ಪತ್ತಿಯ ಬಗೆಗೆ, ಒಪ್ಪಲಾಗದ ಮತ್ತು ಅಸಂಬದ್ಧವಾದ ಮಾಹಿತಿಯೇ ಬಹಳ ವರ್ಷಗಳಿಂದ ಪ್ರಚಾರದಲ್ಲಿತ್ತು. ನಾನು ಹಿಂದೆ ಓದಿದ ೧೯೨೧ರ ಕಡೂರು (ಆಗ ನಮ್ಮದು ಕಡೂರು ಜಿಲ್ಲೆಯಾಗಿತ್ತು, ಅನಂತರ ಸುಮಾರು ಏಳು ದಶಕಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಎಂಬ ಅಭಿಧಾನ ಬಂದಿತು) ಜಿಲ್ಲಾ ಗೆಜೆಟಿಯರ್ (ಭೂ ವಿವರಣ ಕೋಶ)ನಲ್ಲಿಯೂ ಕಾಗಕ್ಕ - ಗೂಬಕ್ಕನ ಕಥೆಯೇ ಅಚ್ಚಾಗಿತ್ತು.
ಕೆಲವು ವರ್ಷಗಳ ಹಿಂದೆ ಅಜ್ಜಂಪುರದ ಲೇಖಕರಾದ ಅಪೂರ್ವ (ಜಿ.ಬಿ.ಅಪ್ಪಾಜಿ) ಮತ್ತು ಬೀರೂರಿನ ಶಾಸನ ತಜ್ಞರೊಂದಿಗೆ ಮಾತನಾಡಿದಾಗ ಒಪ್ಪಬಹುದಾದ ಅನೇಕ ಸಂಗತಿಗಳು - ವಾದಗಳು ಒಡಮೂಡಿದವು.
ಅಜೀಂ ಖಾನ್ ಇತ್ಯಾದಿ ಕಥೆಗೆ ಎಲ್ಲಿಯೂ ಆಧಾರವಿಲ್ಲ.
"ಆರ್ಯಪುರ"ವೇ "ಅಜ್ಜಂಪುರ"ವಾಗಿದೆ ಎಂಬ ವಾದವು ಒಪ್ಪತಕ್ಕುದ್ದಾಗಿದೆ. "ಆರ್ಯ" ಪದದ ತದ್ಭವವೇ "ಅಜ್ಜ". ಮುಖ್ಯವಾಗಿ, ಅಜ್ಜಂಪುರದ ಸುತ್ತ ಅನೇಕ ಶತಮಾನಗಳ ಹಳೆಯ ವೈದಿಕ - ಶೈವ - ವೈಷ್ಣವ ದೇವಾಲಯಗಳಿವೆ. ಆಸಂದಿಯನ್ನು ವಿನಯಾದಿತ್ಯನು ಆಳುತ್ತಿದ್ದ ಎನ್ನಲಾಗಿದೆ. ಬಗ್ಗವಳ್ಳಿ - ಅಮೃತಾಪುರಗಳಲ್ಲಿ ಇರುವ ದೇವಾಲಯಗಳು ಏಳೆಂಟು ಶತಮಾನ ಹಳೆಯವು. ವಿಜಯನಗರದ ಬುಕ್ಕರಾಯ (ಹಕ್ಕ ಬುಕ್ಕರಲ್ಲಿ ಒಬ್ಬ) ಕಟ್ಟಿಸಿರುವ ಬುಕ್ಕಾಂಬುಧಿ ಕೆರೆಯೂ ತುಂಬ ಹಳೆಯದು. ಹೀಗೆ, ಅಜ್ಜಂಪುರದ ಸುತ್ತಮುತ್ತಲ ದೇವಾಲಯಗಳ - ಕೆರೆಗಳ - ಊರುಗಳ ಇತಿಹಾಸಕ್ಕೆ ಸಾವಿರ ವರ್ಷಗಳನ್ನು ಮೀರಿದ ಇತಿಹಾಸವಿದೆ.
ಈ ಹಿನ್ನೆಲೆಯಲ್ಲಿ ಮೂಲತಃ "ಆರ್ಯಪುರ"ವಾಗಿತ್ತು, ಎಂಬ ವಾದವು ಒಪ್ಪುವಂತಹುದಾಗಿದೆ.
ನಮ್ಮ ಇತಿಹಾಸ, ಪರಂಪರೆಗಳ ಅನೇಕ ಕೊಂಡಿಗಳೇ ಕಳಚಿಕೊಂಡುಹೋಗಿವೆ. ದೇವಾಲಯ ವಿಧ್ವಂಸಕ ಆಕ್ರಮಣಕಾರಿ ಪರಮತಗಳ ಬಗೆಗೆ, ನಮ್ಮ ಪೂರ್ವಿಕರು ಅವಜ್ಞೆಯಿಂದ - ಮುಗ್ಧತೆಯಿಂದ ವರ್ತಿಸಿಬಿಟ್ಟರು. ಈ ಕಾರಣದಿಂದ, ತುಂಬ ಸಾಕ್ಷ್ಯಾಧಾರಗಳು - ದಾಖಲೆಗಳು ನಾಶವಾಗಿಬಿಟ್ಟಿವೆ. ಹಾಗಾಗಿ, ಇಂದು ಇತಿಹಾಸವೆನ್ನುವುದು ಕಗ್ಗಂಟಾಗಿಬಿಟ್ಟಿದೆ. ಇತಿಹಾಸ ಪುನಾರಚನೆಯು ಕ್ಲಿಷ್ಟಾತಿಕ್ಲಿಷ್ಟ ಸವಾಲಾಗಿಹೋಗಿದೆ.