ಪೋಸ್ಟ್‌ಗಳು

2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಜ್ಜಂಪುರದ ಟಿ.ಬಿ. ರಸ್ತೆಯಲ್ಲಿರುವ ಈಶ್ವರನ ಗುಡಿ - ಅಪೂರ್ವ ಅಜ್ಜಂಪುರ

ಇಮೇಜ್
ಪ್ರತಿ‌ ವರ್ಷ ಮಹಾಶಿವರಾತ್ರಿ‌ ಬಂದಿತು ಅಂದರೆ ಶಿವಾಲಯ, ಈಶ್ವರನ ದೇವಸ್ಥಾನಗಳಿಗೆ ಆಸ್ತಿಕರು ಭೇಟಿ ಕೊಡುವುದು ಸಾಮಾನ್ಯ. ಅಜ್ಜಂಪುರದಲ್ಲಿ‌ ಕೋಟೆ ಸೋಮೇಶ್ವರ ದೇವಸ್ಥಾನಕ್ಕೆ ಅಂದು‌ ರಾತ್ರಿ ಭಕ್ತಸಾಗರವು ಹರಿದು ಬರುವುದು‌ ದೃಶ್ಯವು ಪ್ರತಿ ವರ್ಷವೂ ಸಾಮಾನ್ಯ.  ಎರೆಹೊಸೂರು‌ ರಸ್ತೆಯ ಪಶ್ಚಿಮಕ್ಕೆ ಇರುವ ಮತ್ತೊಂದು ರಸ್ತೆಯಲ್ಲಿ ‌ಮಲ್ಲೇದೇವರು ಎಂಬ ಜಂಗಮ ಪುರೋಹಿತರ ತೋಟವಿದೆ. ಅಲ್ಲಿ ಒಂದು ಈಶ್ವರ ದೇವಾಲಯ ಇದೆ.  ಅಲ್ಲಿಗೂ ಶಿವರಾತ್ರಿಯಂದು‌ ಊರಿನ ಜನರು ಹೋಗುತ್ತಾರೆ.  ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ‌ನಗರೇಶ್ವರನ ಹೆಸರಲ್ಲಿ‌ ಈಶ್ವರ ಲಿಂಗವಿದೆ.‌ ಇದಲ್ಲದೆ ಪೇಟೆಯ ಬಸವಣ್ಣ ದೇವಾಲಯದಲ್ಲಿ ನಂದಿಯ ಜೊತೆಗೆ ಇರುವ ಉಮಾಮಹೇಶ್ವರರ ಉತ್ಸವಮೂರ್ತಿ ಇದೆ. ಎಲೆಮರೆಯ ಕಾಯಿಯಂತೆ ಇರುವ, ಅಷ್ಟು ಬೆಳಕಿಗೆ ಬಾರದ ಇನ್ನೂ ಒಂದು ಈಶ್ವರನ ಗುಡಿ ಟಿ.ಬಿ.ರಸ್ತೆಯಲ್ಲಿ ಇದೆ. ಪ್ರತಿ ವರ್ಷ ಮಹಾಶಿವರಾತ್ರಿಯ ದಿನದಂದು  ಈ ಗುಡಿಗೆ ಗೊತ್ತಿರುವ ಕೆಲವೇ ಭಕ್ತರು ಭೇಟಿ ನೀಡುತ್ತಾರೆ. ಈ ಗುಡಿಯ ಬಗ್ಗೆ ಮಾಹಿತಿಯನ್ನು ಪ್ರಥಮ ಬಾರಿಗೆ ನಮ್ಮ ಬ್ಲಾಗಿನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟಾಫೀಸ್ ರಸ್ತೆ ಮತ್ತು ಟಿ.ಬಿ.ರಸ್ತೆಗಳು ಕತ್ತರಿಸುವ      ಒಂದು ಮೂಲೆಗೆ ಇರುವ  ವಿಶಾಲವಾದ ಜಾಗದಲ್ಲಿ ಎನ್.ಟಿ.ಜಿ.ಎಂ.ಎಸ್. ಶಾಲೆ ಇದ್ದದ್ದು ಹಳೆಯ ತಲೆಮಾರಿನವರಿಗೆ ಗೊತ್ತಿರುವ ಸಂಗತಿ. ನ್ಯೂ ಟೈಪ್ ಗರ್ಲ್ಸ್ ಮಿ...