ನೆನಪಿನಂಗಳದಿಂದ.............

ಆತ್ಮೀಯರೇ, 

ಜೂನ್ 30 ನನ್ನ 60ನೇ ಜನ್ಮದಿನ, ಜತೆಗೆ ವೃತ್ತಿ ಜೀವನಕ್ಕೆ ವಿದಾಯ ಕೂಡ. ಮುಂದಿನ ವಿಶ್ರಾಂತ ಜೀವನದಲ್ಲಿ ಇ-ಚಟುವಟಿಕೆಗಳಲ್ಲಿ ಇನ್ನಷ್ಟು ಸಕ್ರಿಯನಾಗಿರಲು ಅವಕಾಶ !  ಸದ್ಯಕ್ಕೆ  ಸಕ್ರಿಯವಾಗಿಲ್ಲದ ನನ್ನ ಇನ್ನೊಂದು  ಬ್ಲಾಗ್ "ನಾನು-ನೀವು" - ಇದರಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಇರಾದೆಯೂ ಇದೆ. ನಿಮ್ಮ  ಜತೆ ನನ್ನ ಪಯಣ ಮುಂದುವರೆಯುತ್ತಿರಲಿ ! 

ವಂದನೆಗಳೊಡನೆ,

ಶಂಕರ ಅಜ್ಜಂಪುರ

ಈ ಸಂಚಿಕೆಯಲ್ಲಿ ಬರಹಕ್ಕಿಂತ ಹೆಚ್ಚು ಚಿತ್ರ ಸಂಗ್ರಹವಿದೆ. ಆಂಜನೇಯ ದೇವಾಲಯದ ನವೀಕರಣ ಸಂದರ್ಭದಲ್ಲಿ ಮೂಲೆ ಸೇರಿ ಹೋಗಬಹುದಾಗಿದ್ದ  ಈ ಚಿತ್ರಗಳನ್ನು, ಇಂಥ ವಿಷಯಗಳ ಬಗ್ಗೆ ನನ್ನಷ್ಟೇ ಆಸ್ಥೆ ಹೊಂದಿರುವ ದೇವಾಲಯದ ಈಗಿನ ಅರ್ಚಕರಾದ ಬಿ.ಎನ್. ಮಾಧವ ರಾವ್ ಇವರ ಸಹಕಾರದಿಂದ  ನಾನು ಸಂಗ್ರಹಿಸಿದೆ. ನಂತರ ಇವುಗಳನ್ನು ಗಣಕಯಂತ್ರದಲ್ಲಿ  ಸೂಕ್ತವಾಗಿ ಪರಿಷ್ಕರಿಸಿ  ಇಲ್ಲಿ ಪ್ರಕಟಿಸಿರುವೆ.  

ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದಲ್ಲಿ 1980ರಲ್ಲಿ ನಡೆದ ರಾಮತಾರಕ ಹೋಮ ಮತ್ತು ಅಜ್ಜಂಪುರಕ್ಕೆ ಶೃಂಗೇರಿಯ ಶ್ರೀಗಳು ಭೇಟಿ ನೀಡಿದಾಗಿನ  ಚಿತ್ರಗಳು ಇಲ್ಲಿವೆ. ಇದರಲ್ಲಿ ನಿಮ್ಮ ಪರಿಚಿತರು ಅನೇಕರಿರಬಹುದು, ಅವರಲ್ಲಿ ಕೆಲವರು ಈಗ ನಮ್ಮೊಡನೆ ಇಲ್ಲದಿರಬಹುದು. ಇಂದು ಶೃಂಗೇರೀ ಶ್ರೀಗಳು ಅಜ್ಜಂಪುರಕ್ಕೆ ಬಂದರೆ, ಈ ಚಿತ್ರಗಳಲ್ಲಿ ಕಾಣುವ ಸಾಂಪ್ರದಾಯಿಕ ಉಡುಪಾಗಲೀ, ಹಿರಿಯರ ಮುಖದಲ್ಲಿ ಕಂಡುಬರುತ್ತಿರುವ ಶ್ರದ್ಧೇಯ ಭಾವಗಳಾಗಲೀ ಕಾಣಲಾರದೆಂದರೆ, ಅದು ಬದಲಾದ ಸಮಯದ ಪರಿಣಾಮವೆಂದಷ್ಟೇ ಹೇಳಬಹುದು.  ಸಾಂಸ್ಕೃತಿಕ ಪರಂಪರೆಯನ್ನು ನೆನಪಿಸುವ, ಮೂರು ದಶಕಗಳ ಹಿಂದಿನ ಈ ಚಿತ್ರಮಾಲಿಕೆ ಹಳಬರ ನೆನಪುಗಳನ್ನು ಕೆದಕಬಹುದು, ಹೊಸಬರ ಕುತೂಹಲ ಕೆರಳಿಸಬಹುದು. ಏನಿದ್ದರೂ ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.

ಈ ವಾತಾವರಣದಲ್ಲೇ ನಾನು ಬೆಳೆದದ್ದರಿಂದ, ನನ್ನ ಸಂಪರ್ಕಕ್ಕೆ ಇದರಲ್ಲಿರುವ ಹಿರಿಯರು, ಗೆಳೆಯರು ಒದಗಿದ್ದರಿಂದ ನಾನು ಇದನ್ನು ಆಸ್ಥೆಯಿಂದ ಮಾಡಲು ಸಾಧ್ಯವಾಯಿತು.  ಇದೇ ರೀತಿ ನಿಮ್ಮ ಸಂಗ್ರಹದಲ್ಲಿ ಅಜ್ಜಂಪುರದಲ್ಲಿ ನಡೆದ ಸಾರ್ವಜನಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳ  ಚಿತ್ರಗಳಿದ್ದರೆ ಕಳಿಸಿ. ಸೂಕ್ತ ವಿವರಣೆಯೊಡನೆ ಪ್ರಕಟಿಸಲು ಅನುಕೂಲವಾಗುತ್ತದೆ. 

























ಕಾಮೆಂಟ್‌ಗಳು

  1. Old memories relived. Shivaguru avru nanage mantra helkodtidru alli.. and also at eshwara temple.
    Maadhu, giri,narayanamurty sahapaatigalu. Belagge 5am ge class kelavu dina.. some days in evening. ..
    wonderful days...

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ