ಅಜ್ಜಂಪುರ ದೇವರಪ್ಪ ಸೂರ್ಯನಾರಾಯಣ ರಾವ್




ಸಾಹಿತ್ಯ, ಸಂಗೀತಗಳ ಕ್ಷೇತ್ರದಲ್ಲಿ ಅಜ್ಜಂಪುರದ ಜನತೆಗೆ ಎಂದಿನಿಂದಲೂ ಹೆಚ್ಚು ಒಲವು. ಅಂಥ ಪ್ರೀತಿಯನ್ನು ಬೆಳೆಸಿಕೊಂಡು "ಬೆಟ್ಟ ಭೈರವ ದಾಸ" ಮತ್ತು "ಸೂರಣ್ಣ" ನೆಂಬ ಕಾವ್ಯನಾಮಗಳಿಂದ ಕವಿತೆಗಳು ಮತ್ತು ಭಕ್ತಿಗೀತೆಗಳನ್ನು ರಚಿಸುವ ಸೂರ್ಯನಾರಾಯಣ ರಾಯರು ಅಜ್ಜಂಪುರದವರು. ಅವರ ತಂದೆ ದೇವರಪ್ಪನವರೂ ಉಪಾಧ್ಯಾಯರಾಗಿದ್ದವರೇ. ಅವರು ತಮ್ಮ ವಿವಾಹದ ನಂತರ ಆಗಿನ ಕಡೂರು ತಾಲೂಕಿನ ಮಲದೇವಿಹಳ್ಳಿಯಲ್ಲಿ ನೆಲಸಿದ್ದರಿಂದ ಅಜ್ಜಂಪುರದ ಸಂಪರ್ಕ ಕಡಿಮೆಯಾಗಿತ್ತು. ಆದರೂ ಅಜ್ಜಂಪುರದೊಡನೆ ಸೂರ್ಯನಾರಾಯಣ ರಾಯರ ಸಂಪರ್ಕ ಮುಂದುವರೆದಿತ್ತು.  ನಿವೃತ್ತ ಉಪಾಧ್ಯಾಯರಾದ ಅವರು ಇದೀಗ ಬೆಂಗಳೂರಿನಲ್ಲಿ ತಮ್ಮ ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ರಾಯರು ತಮ್ಮ ನಿವೃತ್ತಿಯಾದ ನಂತರ ಕೆಲಕಾಲ ಬೆಂಗಳೂರು ಸಮೀಪದ ಕನಕಪುರದಲ್ಲಿ ವಾಸಿಸುತ್ತಿದ್ದರು. ಆ ದಿನಗಳಲ್ಲಿ ಅಲ್ಲಿನ ಸಾಹಿತ್ಯಕ ವಲಯದಲ್ಲಿ ತಮ್ಮ ಛಾಪನ್ನು ಮೂಡಿಸಿ, ಅಜ್ಜಂಪುರದ ಪ್ರಸಿದ್ಧಿಗೆ ಕಾರಣರಾದರು. ಸ್ಥಳೀಯ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದರು. 

ಅವರಿಗೆ ಶಾಸ್ತ್ರೀಯ ಸಂಗೀತದ ಪ್ರವೇಶವಿದೆ. ಹೀಗಾಗಿ ತಾವು ರಚಿಸಿದ ಭಕ್ತಿಗೀತೆಗಳಿಗೆ ಸೂಕ್ತ ರಾಗ ಸಂಯೋಜನೆ ಮಾಡಿ ಹಾಡುತ್ತಾರೆ. ತಾವು ಭೇಟಿ ನೀಡುವ ಎಡೆಗಳಿಗೆ ತಾವು ಬರೆದಿರುವ ಕೃತಿಗಳನ್ನು ಒಯ್ದು ಆಸಕ್ತರ ಎದುರು ವಾಚಿಸಿ ಸಂತೋಷಪಡುತ್ತಾರೆ. ಕುಮಾರವ್ಯಾಸ ಭಾರತದ ಅಧ್ಯಯನದಲ್ಲಿ ತುಂಬ ಒಲವು ಹೊಂದಿರುವ ರಾಯರು ಅದರಲ್ಲಿನ ಸ್ವಾರಸ್ಯಗಳನ್ನು ವಿವರಿಸುತ್ತಾರೆ. ಇಂಥ ಹಿರಿಯರು ನಮ್ಮೂರಿನವರೆಂಬುದು ನಮಗೆಲ್ಲ ಅಭಿಮಾನದ ಸಂಗತಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ