ಯಕ್ಷಲೋಕದ ರಸದೌತಣ
ಆತ್ಮೀಯರೇ, ಏಪ್ರಿಲ್ ತಿಂಗಳ ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ ಆಳ್ವಾಸ್ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯಕ್ರಮವನ್ನು ಕುರಿತಂತೆ ಇದೆ. ಅಜ್ಜಂಪುರದ ಜನತೆಗೆ ಈ ಕಾರ್ಯಕ್ರಮ ವಿಶಿಷ್ಟವೆನಿಸಲು ಕಾರಣವಾದ ಅಂಶಗಳನ್ನು ಆಯ್ದು ನೀಡಿದ್ದಾರೆ, ಲೇಖಕ ಮಿತ್ರ ಅಪೂರ್ವ. ಉತ್ತಮ ಛಾಯಾಚಿತ್ರಗಳೊಂದಿಗೆ ಅತ್ಯುತ್ತಮ ನುಡಿಚಿತ್ರವನ್ನೂ ಕಟ್ಟಿಕೊಟ್ಟಿದ್ದಾರೆ. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉತ್ತಮ ಸಂಸ್ಕಾರ, ಹಿನ್ನೆಲೆಗಳು ಅಜ್ಜಂಪುರದಲ್ಲಿ ಎಂದಿನಿಂದಲೂ ಇರುವುದರಿಂದ ಇಂದಿನ ಪೀಳಿಗೆಯೂ ಅದನ್ನು ಮುಂದುವರೆಸಿಕೊಂಡು ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. - ಶಂಕರ ಅಜ್ಜಂಪುರ =========================================================================================================================== ಯಕ್ಷಲೋಕದ ಸಂಭ್ರಮ ಬೃಹತ್ ಜನಸ್ತೋಮ 2 016, ಜನವರಿ 22, ಶುಕ್ರವಾರ ಸಂಧ್ಯಾಸಮಯ. ಅಜ್ಜಂಪುರದ ಶೆಟ್ರು ಸಿದ್ಧಪ್ಪ ಸರಕಾರೀ ಪದವೀಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಸಹಸ್ರಾರು ಜನರು ಕುತೂಹಲದಿಂದ ಮುಂದಿನ ಕ್ಷಣಗಳಿಗೆ ಕಾಯುತ್ತಿದ್ದರು. ಅತ್ತ ಪಡುವಣದಲ್ಲಿ ಸೂರ್ಯ ದಿಗಂತದಲ್ಲಿ ಮರೆಯಾಗುವ ಕ್ಷಣ, ಇತ್ತ ಮೂಡಣ ದಿಕ್ಕಿನಲ್ಲಿ 80 ಅಡಿ 40 ಅಡಿಗಳ ಆಯತಾಕಾರದ ಎತ್ತರದ ಬೃಹತ್ ವೇದಿಕೆಯಲ್ಲಿ ಆಳ್ವಾಸ್ ಸಾಂಸ್ಕೃತ...