25. ಕೋಟೆಯ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯ
ದೇವಾಲಯದ ಹೊರನೋಟ ನಮ್ಮ ಊರಿನಲ್ಲಿ ಸುಮಾರು ಇಪ್ಪತ್ತಾರು ದೇವಾಲಯಗಳಿವೆಯೆಂದು ಒಮ್ಮೆ ಲೆಕ್ಕ ಹಾಕಿದ ಅಂದಾಜು. ಈ ಮೊದಲು ಅಜ್ಜಂಪುರದ ಗ್ರಾಮದೇವತೆ ಕಿರಾಳಮ್ಮ ದೇವಾಲಯದ ಬಗ್ಗೆ ಒಂದು ಲೇಖನ ಪ್ರಕಟವಾಗಿದೆ. ಶ್ರೀ ಪ್ರಸನ್ನ ಸೋಮೇಶ್ವರ ಅಜ್ಜಂಪುರದ ಕೋಟೆಯಲ್ಲಿ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯವಿದೆ. ಅದು ಹೊರಗಿನಿಂದಲೇ ಏಕೆ, ಒಳಗಿನಿಂದಲೂ ಆಕರ್ಷಕವಾಗಿ ಕಾಣುವುದಿಲ್ಲ. ಹಿಂದೊಂದು ಕಾಲಕ್ಕೆ ಅಲ್ಲೊಂದು ಹಳೇ ಮಾದರಿಯ ಶಿವಮಂದಿರವಿದ್ದಿರಬೇಕು. ಏಕೆಂದರೆ ಈಗಿರುವ ರಚನೆಯಷ್ಟನ್ನೇ ನೋಡಿದರೆ, ಅದು ಪುನರ್ನಿರ್ಮಿತವಾದುದೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಆರೆಂಟು ದಶಕಗಳ ಹಿಂದೆ ಕೋಟೆಯಲ್ಲಿ ಬ್ರಾಹ್ಮಣ್ಯವು ಚೆನ್ನಾಗಿಯೇ ಇತ್ತು. ಸಾಂಪ್ರದಾಯಿಕ ಪೂಜೆ-ಪುರಸ್ಕಾರಗಳು ಧಾರಾಳವಾಗಿ ನಡೆ ಯುತ್ತಿತ್ತು. ಮಳೆ ಬಾರದ ಬರಗಾಲದ ದಿನಗಳಲ್ಲಿ ಗರ್ಭಗುಡಿಯಲ್ಲಿನ ಶಿವ ಲಿಂಗಕ್ಕೆ ಕಟ್ಟೆ ಕಟ್ಚಿ ದೂರದ ಬಾವಿಗಳಿಂದ ನೀರು ತಂದು ರುದ್ರಾಭಿಷೇಕ ಮಾಡುತ್ತಿದ್ದರು. ಹಾಗೆಯೇ ನಂತರ ಸಮೃದ್ಧ ಮಳೆಯಾದ ಬಗ್ಗೆ ಹಿರಿಯರು ಮಾತನಾಡುತ್ತಿದ್ದುದನ್ನು ಕೇಳಿದ್ದೇನೆ. ದೇವಾಲಯಕ್ಕೆ ಮುಖಮಂಟಪ ಮತ್ತು ಗರ್ಭಗುಡಿಗಳು ಮಾತ್ರವೇ ಇತ್ತು. ನಂತರ ಅದಕ್ಕೊಂದು ಮಂಗಳೂರು ಹೆಂಚಿನ ಮಾಡನ್ನು ಮುಂಭಾಗಕ್ಕೆ ಸಿದ್ಧಪಡಿಸಿದರು. ಮುಖ ಮಂಟಪದಲ್ಲಿ ನಂದಿಯಿದ್ದು ಅದರ ಸುತ್ತಣ ಚೌಕಾಕಾರದ ಕಂಬಗಳಲ್ಲಿ ನಕಾಶೆಗಳೇನೂ ಇಲ್ಲ. ಆದರೆ ಗರ್ಭಗುಡಿಯಲ್ಲಿರುವ ಶಿವಲಿಂ