127) ಹಿಮ್ಸ್ ನಿರ್ದೇಶಕರಾಗಿ ಡಾ| ಬಿ ರಾಜಣ್ಣ


ಮಿತ್ರರಾದ ಶ್ರೀ ಮಲ್ಲಿಕಾರ್ಜುನ ಅಜ್ಜಂಪುರ ಇವರು ಅಜ್ಜಂಪುರದ ಮತ್ತೊಂದು ಪ್ರತಿಭೆಯನ್ನು ಗುರುತಿಸಿ ಫೇಸ್ಬುಕ್ಕಿನಲ್ಲಿ ಲೇಖನ ಪ್ರಕಟಿಸಿದ್ದರು. ಅದನ್ನು ಇಲ್ಲಿಯೂ ಹಂಚಲಾಗಿದೆ.

ಹೀಗೆ ನಿಮಗೆ ತಿಳಿದಿರುವ ಅಜ್ಜಂಪುರದ ಹೊಸ ಇಲ್ಲವೇ ಹಳೆಯ ಸಾಧಕರ ಬಗ್ಗೆ ಚಿತ್ರ ಸಹಿತ ಒಂದು ಚಿಕ್ಕ ಪರಿಚಯ ಕಳಿಸಿಕೊಡಿ. ಅದನ್ನು ಪ್ರಕಟಿಸಬಹುದು.

ಶಂಕರ ಅಜ್ಜಂಪುರ

ಸಂಪಾದಕ

ಅಂತರಜಾಲದಲ್ಲಿ ಅಜ್ಜಂಪುರ

        - ೦-೦-೦-೦-೦-೦-೦-೦-


ಅಭಿನಂದನೆಗಳು ಡಾಕ್ಟರ್ ರಾಜಣ್ಣ !

- ಮಲ್ಲಿಕಾರ್ಜುನ ಅಜ್ಜಂಪುರ

ನನ್ನೂರಿನ  ಅಜ್ಜಂಪುರದಲ್ಲಿ ಪ್ರಾಥಮಿಕ ಶಾಲೆಯನ್ನು ಅಭ್ಯಾಸ ಮಾಡಿದ ಬಾಲ್ಯದ ಮಿತ್ರ ರಾಜಣ್ಣ ಹಾಸನದ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾಗಿ ಪದಗ್ರಹಣ ಮಾಡಿರುತ್ತಾರೆ. ಇದು ನಮ್ಮೂರಿಗೆ ಹೆಮ್ಮೆ ತರುವ ವಿಷಯವಾಗಿದೆ

ಪ್ರಾಥಮಿಕ ಶಿಕ್ಷಣವನ್ನು ಅಜ್ಜಂಪುರದ  ಶಾಲೆಯಲ್ಲಿ ಮಾಧ್ಯಮಿಕ  ಮತ್ತು ಪ್ರೌಢಶಾಲೆಯನ್ನು ಸಹೋದರರ ಜೊತೆಯಲ್ಲಿ ತೆರಳಿ ಚಾಮರಾಜ ನಗರದಲ್ಲಿ ಮುಗಿಸಿದ ರಾಜಣ್ಣ ಎಂಬಿಬಿಎಸ್ ವಿದ್ಯಾಭ್ಯಾಸವನ್ನು ದಾವಣಗೆರೆಯಲ್ಲಿ ನಂತರ ಜನರಲ್ ಸರ್ಜರಿ ಸ್ನಾತಕೋತ್ತರ ಪದವಿಯನ್ನು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿಯೂ ಮುಗಿಸಿ ಸೂಪರ್ ಸ್ಪೆಷಾಲಿಟಿ ತಜ್ಞತೆಯನ್ನು ಬೆಂಗಳೂರು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಪೂರೈಸಿದ ನಂತರ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಪ್ರಾರಂಭಿಸಿ 16 ವರ್ಷಗಳ ಹಿಂದೆ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕರ ಹುದ್ದೆಯನ್ನು ಅಲಂಕರಿಸಿ ಜೇಷ್ಠತೆಯ ಮೇಲೆ  ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾಗಿ ಪ್ರಸ್ತುತ ನಿರ್ದೇಶಕರಾಗಿ ನೇಮಕಗೊಂಡಿದ್ದು ಸರ್ಜರಿ ವಿಭಾಗದಲ್ಲಿ ಜನಾನುರಾಗಿ ಬಹಳಷ್ಟು ಹೆಸರು ಮಾಡಿರುವ ರಾಜಣ್ಣ ಸರಳ ಸೌಮ್ಯ ಸ್ವಭಾವ  ಮೈಗೂಡಿಸಿಕೊಂಡವರು. 


ಅಭಿನಂದನೆ ಸಲ್ಲಿಸಲು ದೂರವಾಣಿ ಕರೆ ಮಾಡಿದಾಗ ಬಹಳ ಸಂತೋಷಪಟ್ಟಿದ್ದಲ್ಲದೆ ಬಾಲ್ಯದ ದಿನಗಳನ್ನು ಸ್ಮರಿಸಿದರು

ಇವರ ಅಣ್ಣನವರು ಪ್ರೊಫೆಸರ್ ಸಿದ್ದರಾಮಪ್ಪನವರು ಸಹ   ಎಂಎಸ್ಸಿ ಪದವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 70ರ ದಶಕದಲ್ಲಿಯೇ ಪ್ರಥಮ ರ್‍ಯಾಂಕ್  ನೊಂದಿಗೆ ಬಂಗಾರದ ಪದಕ ವಿಜೇತರಾಗಿದ್ದನ್ನು ಪರಿಗಣಿಸಿ ಸುತ್ತೂರು ಮಠದ ಸ್ವಾಮೀಜಿಗಳು ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ  ನೇರವಾಗಿ ಉಪನ್ಯಾಸಕರ ಹುದ್ದೆಗೆ ನೇಮಕ ಮಾಡಿ ಕೊಂಡರು. ಹಂತ ಹಂತವಾಗಿ ಪ್ರೊಫೆಸರ್ ಹುದ್ದೆಯನ್ನು ಅಲಂಕರಿಸಿ  ಚಾಮರಾಜನಗರ ಮತ್ತು ಮೈಸೂರಿನಲ್ಲಿ ಅಪಾರ ಶಿಷ್ಯ ಬಳಗವನ್ನು ಹೊಂದಿರುವ ಇವರುಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು ಎಂಬುದೇ ನಮ್ಮ ಊರಿಗೆ ಹೆಮ್ಮೆ

ಡಾಕ್ಟರ್ ರಾಜಣ್ಣ ಇವರು ಹಾಸನದ ವೈದ್ಯಕೀಯ ಕಾಲೇಜಿನಲ್ಲಿ   ಉತ್ತಮವಾದ ಸೇವೆಯನ್ನು ನೀಡಲಿ ಮತ್ತು ಇನ್ನು ಎತ್ತರದ ಸ್ಥಾನಕ್ಕೆ ಏರಲಿ ಎಂದು ಶುಭ ಹಾರೈಕೆಗಳು.

ಅಭಿನಂದನೆಗಳು!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ