ಗೆಳೆಯ ಅಪೂರ್ವ ಅಜ್ಜಂಪುರ ಅವರು ಈ ಬ್ಲಾಗ್ ನ ಆರಂಭದಿಂದಲೂ ಲೇಖನಗಳನ್ನು ಬರೆದು ಸಹಕರಿಸಿದ್ದಾರೆ. ಇತ್ತೀಚೆಗೆ ಅವರು ಅಜ್ಜಂಪುರ ಬದಲಾದ ಪರಿಯನ್ನು ದಾಖಲಿಸಿದ ಬರಹವು ಫೇಸ್ ಬುಕ್ ನಲ್ಲಿ ಚಿತ್ರಗಳ ಸಹಿತ ಪ್ರಕಟವಾಗಿದೆ. ಅದು ಇಲ್ಲಿಯೂ ದಾಖಲಾಗಲಿ ಎಂದು ಪ್ರಕಟಿಸಲಾಗಿದೆ. - ಶಂಕರ ಅಜ್ಜಂಪುರ ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ಅಜ್ಜಂಪುರ ಗತವೈಭವ ಮತ್ತು ವರ್ತಮಾನ ಅಪೂರ್ವ ಅಜ್ಜಂಪುರ ಗತವೈಭವ ! ಭಗವದ್ಗೀತೆಯನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದ್ದ ಸ್ವಾಮಿ ಶಂಕರಾನಂದರು (ಶಿವಾನಂದಾಶ್ರಮದ ಸ್ಥಾಪಕರು), ಅಜ್ಜಂಪುರ ಸೀತಾರಾಮ್ ( 'ಕ್ಲಾಸಿಕ್' ಸಣ್ಣಕತೆ 'ನಾನು ಕೊಂದ ಹುಡುಗಿ'ಯ ಕತೆಗಾರ ಆನಂದ), ಖ್ಯಾತ ಪರಿಸರ ತಜ್ಞ, ಲೇಖಕ ಅಜ್ಜಂಪುರ ಕೃಷ್ಣಸ್ವಾಮಿ( ರಾಜ್ಯ ಅರಣ್ಯ ಇಲಾಖೆಯ ಅತ್ಯುನ್ನತ ಅಧಿಕಾರಿಯಾಗಿದ್ದರು), ಅಜ್ಜಂಪುರ ಜಿ.ಸೂರಿ(ಖ್ಯಾತ ಕಾದಂಬರಿಕಾರ,ತೆಲುಗು ಕಾದಂಬರಿಗಳ ಅನುವಾದಕ), ಸ್ವಾತಂತ್ರ್ಯ ಹೋರಾಟಗಾರ ಎಸ್.ಸುಬ್ರಹ್ಮಣ್ಯ ಶೆಟ್ಟಿ, ಖ್ಯಾತ ದಾನಿಗಳಾದ ಶೆಟ್ರು ಸಿದ್ದಪ್ಪ ಮತ್ತು ಜೋಗಿ ತಿಮ್ಮಯ್ಯ ಇವರಿಂದಲೂ ಅಜ್ಜಂಪುರವು ನಾಡಿನ ಜನರಿಗೆ ಸುಪರಿಚಿತ. ಮೈಸೂರು ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರು ಅಜ್ಜಂಪುರಕ್ಕೆ ಭೇಟಿ ನೀಡಿದ್ದು ಕೂಡ ಒಂದು ಐತಿಹಾಸಿಕ ಸಂಗತಿ. ಆ ಸಂದರ್ಭದಲ್ಲಿ ಪುರ ಪ್ರಮುಖರು ಸಾಂಪ್ರದಾಯಿಕ ದಿರಿಸಿನೊಂದಿಗೆ ಇರುವ ಚಿತ್ರ ಹಿಂದಿನ ಸಂಚಿಕೆಗಳಲ್ಲಿ...
ಪೋಸ್ಟ್‌ಗಳು
ಆಗಸ್ಟ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ